ಚಳ್ಳಕೆರೆ:
ರೈತರ ಆರ್ಥಿಕ ಸಬಲೀಕರಣಕ್ಕೆ ಹೈನುಗಾರಿಕೆ ಕಸುಬನ್ನು ಬಲಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಬಿ.ಸಿ. ಸಂಜೀವಮೂರ್ತಿ ಹೇಳಿದರು.
ಚಳ್ಳಕೆರೆ ತಾಲೂಕಿನ ಬೆಳಗೆರೆ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ನಂತರ ಅವರು ಮಾತನಾಡಿ..
ಹವಾಮಾನ ವೈಪರೀತ್ಯದಿಂದ ಬಯಲುಸೀಮೆಯ ರೈತರ ಕೃಷಿ ಚಟುವಟಿಕೆಗಳು ಲಾಭದಾಯಕವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹಾಲು ಉತ್ಪಾದನೆಯನ್ನು ಉಪ ಕಸುಬಾಗಿ ಮಾಡಿಕೊಳ್ಳಬೇಕು. ರೈತರ ಸಂಸ್ಕೃತಿ ಹಸು ಸಾಕಾಣಿಕೆಯಲ್ಲಿ ಕಂಡುಕೊಳ್ಳಬೇಕು. ಹೊಲದಲ್ಲಿ ಬೆಳೆಯುವ ವಾರ್ಷಿಕ ಉತ್ಪನ್ನವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತೇವೆ. ಆದರೆ, ಹೈನುಗಾರಿಕೆ ಪ್ರತಿ ದಿನವೂ ಕುಟುಂಬವನ್ನು ಆರ್ಥಿಕವಾಗಿ ಪೋಷಣೆ ಮಾಡುತ್ತದೆ. ಬೆಳಗೆರೆ ಸೇರಿದಂತೆ ಸುತ್ತ ಹಳ್ಳಿಗಳಿಂದ ಹಾಲು ಸಂಗ್ರಹ ಹೆಚ್ಚಳವಾಗಬೇಕು. ಸುಮಾರು ೩ ಸಾವಿರ ಲೀಟರ್ ಹಾಲು ಸಂಗ್ರಹ ಮಾಡಿಕೊಂಡಲ್ಲಿ ಶೀಥಲ ಘಟಕವನ್ನು ಸ್ಥಾಪನೆ ಮಾಡಿಕೊಡುತ್ತೇವೆ. ಪಹಣಿ ಇರುವ ರೈತರಿಗೆ ಹಸು ಖರೀದಿ ಮಾಡಿಕೊಳ್ಳಲು ೨೫ ಸಾವಿರ ಸಬ್ಸಿಡಿ ಸೌಲಭ್ಯವೂ ಕೃಷಿ ಇಲಾಖೆಯಿಂದ ಸಿಗಲಿದೆ. ಹಾಲು ಒಕ್ಕೂಟ ಲಾಭದಾಯಕವಾಗಿದ್ದು ೧೮ ಕೋಟಿ ವ್ಯವಹಾರದಲ್ಲಿ ಆರ್ಥಿಕ ಭದ್ರತೆಯಲ್ಲಿದೆ ಎಂದು ಹೇಳಿದರು.
ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಜಿ.ಪಿ. ರೇವಣಸಿದ್ದಪ್ಪ ಮಾತನಾಡಿ, ಹಾಲು ಉತ್ಪಾದಕರ ಸಂಘಗಳ ಸ್ಥಾಪನೆಗೆ ಆರಂಭದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ನೆರವು ನೀಡಲಾಗಿತ್ತು. ಜಿಲ್ಲೆಯಲ್ಲಿ ೯೦ ಸಂಘಗಳನ್ನು ಸ್ಥಾಪಿಸಿ, ತಲಾ ಸಂಘಕ್ಕೆ ೯೦ ಸಾವಿರ ಹಣ ನೀಡಲಾಗಿತ್ತು. ಬರಗಾಲದ ಪರಿಸ್ಥಿತಿ ಮತ್ತು ಬಯಲುಸೀಮೆಯ ರೈತರ ಸಮಸ್ಯೆಗಳಿಂದ ಕೆಲ ಸಂಘಗಳು ಮುಚ್ಚಿ ಹೋಗಿವೆ. ಇತ್ತೀಚಿನ ದಿನಗಳಲ್ಲಿ ಸಂಘಗಳ ಪುನರ್‌ಚೇತನ ಮತ್ತು ರೈತರ ಬಲವರ್ಧನೆಗೆ ಸಾಕಷ್ಟು ಸೌಲಭ್ಯ ನೀಡಲಾಗುತ್ತಿದೆ ಎಂದು ಹೇಳಿದರು..
ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆ.ಟಿ. ನಿಜಲಿಂಗಪ್ಪ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ. ಗ್ರಾಮೀಣ ಭಾಗದ ಉಪಕಸುವಾದ ಹೈನುಗಾರಿಕೆಗೆ ಹೆಚ್ಚು ಮಹತ್ವ ನೀಡಿದ ನಿರ್ದೇಶಕರಾದ ಸಂಜೀವ ಮೂರ್ತಿಯವರು ಈಗಾಗಲೇ ಈ ಹಿಂದೆ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದು ನಾವು ನೆನಪಿಸಿಕೊಳ್ಳಬೇಕು.ಈಗಾ ಹಾಲು
ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣ ಮಾಡಿಕೊಡುವುದರ ಮೂಲಕ ಆರ್ಥಿಕ ಸಬಲಿಕರಣಕ್ಕೆ ಸಹಕಾರ ಮಾಡಿದ್ದಾರೆ ಎಂದರು..
ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ, ಉಪಾಧ್ಯಕ್ಷೆ ಕೆ. ರೂಪ, ಸದಸ್ಯರಾದ ಜೆ. ರವಿ, ನಿಂಗಪ್ಪ, ಶಿವಲಿಂಗಮ್ಮ, ಕಾರ್ಯದರ್ಶಿ ಸಿ. ರಾಜಣ್ಣ, ಜಿ.ಟಿ. ರಾಜ್, ಎಚ್. ಚಂದ್ರಯ್ಯ, ಮಂಜುನಾಥ. ನಿವೃತ್ತಿ ಮುಖ್ಯಶಿಕ್ಷಕ ಕೆ.ರಾಜಣ್ಣ,ಪ್ರಭಾಕರ್,ದೊಡ್ಡಲಿಂಗೆಗೌಡ. ಶಿವಣ್ಣ,ಶ್ರೀಧರ್, ಮಂಜುನಾಥ ಸೇರಿದಂತೆ ಹಾಲು ಉತ್ಪಾದಕರು ಹಾಗೂ ಗ್ರಾಮಸ್ಥರು ಇದ್ದರು..
.

