ಚಳ್ಳಕೆರೆ :
ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಬಿ.ಸಿ .ಟ್ರಸ್ಟ್ ವತಿಯಿಂದ
ದೊಡ್ಡೇರಿ ಮತ್ತು ಚಳ್ಳಕೆರೆ ಕಸಬಾ ವಲಯದಿಂದ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ ಮತ್ತು ಗ್ರಾಮ ಸುಭೀಕ್ಷಾ
ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪಿ.ಎಸ್.ಐ .ಶಿವರಾಜ್ ಉದ್ಘಾಟಿಸಿದರು
ಮತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಲ್ಪ ಮುರುಳಿ ನಗರಸಭಾ ಅಧ್ಯಕ್ಷರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪ್ರಾದೇಶಿಕ ಅಧಿಕಾರಿ ಗೀತಾ ಮತ್ತು ಜಿಲ್ಲಾ ನಿರ್ದೇಶಕರಾದ ವಿನಯ್ ಕುಮಾರ್ ಸುವರ್ಣ ಮತ್ತು ವಿಶೇಷ ವರಮಹಾಲಕ್ಷ್ಮಿಯ ಹಬ್ಬದ ಉಪನ್ಯಾಸ ಯಶೋಧ ಪ್ರಕಾಶ್ (ಶ್ರೀ ಶಾರದಾಶ್ರಮದ ಸದ್ಭಕ್ತರು ಇವರಿಂದ ಮುಖ್ಯ ವಿಚಾರ ತಿಳಿಸಲಾಯಿತು)
ಇದೇ ಸಂದರ್ಭದಲ್ಲಿ ಮಹಿಳಾ ಸಾಂತ್ವನ ಕೇಂದ್ರದ ಕಾರ್ಯದರ್ಶಿಗಳಾದ ತಿಪ್ಪೇಸ್ವಾಮಿ ವರಮಹಾಲಕ್ಷ್ಮಿ ಮತ್ತು ಮಹಿಳಾ ಸಬಲೀಕರಣದ ಬಗ್ಗೆ ಮಾತಾಡಿದರು
ಮತ್ತು ನಗರಸಭಾ ಸದಸ್ಯರಾದ ನೇತಾಜಿ ಪ್ರಸನ್ನ ಮತ್ತು ತಾಲೂಕು ಯೋಜನಾಧಿಕಾರಿಯದ ಶಶಿಕಲಾ ಮೇಲ್ವಿಚಾರಕರಾದ ಸುಮಂಗಲ ಮತ್ತು ಭವಾನಿ ಹಾಗೂ ವಲಯದ ಪ್ರತಿನಿಧಿಗಳು ಮತ್ತು ಪ್ರಗತಿ ಬಂದು ಸ್ವ ಸಹಾಯ ಸಂಘದ ಸದಸ್ಯರು ಮತ್ತು ಭಕ್ತರು ಹಾಜರಿದ್ದರು..

