ಚಳ್ಳಕೆರೆ ನಗರಸಭೆ ವ್ಯಾಪ್ತಿಯ ದಿನವಹಿ ಮಾರುಕಟ್ಟೆ ಸುಂಕ ವಸೂಲಿ ಮಾಡುವ ಹಕ್ಕು ಹಾಗೂ ವಾರದ ಸಂತೆ ಸುಂಕ ವಸೂಲಿ ಮಾಡುವ ಹಕ್ಕನ್ನು ಬಹಿರಂಗ ಮರು ಹರಾಜು ಮೂಲಕ ವಿಲೆಪಡಿಸಲಾಗುವುದು.
ಜುಲೈ14 ರಂದು ಗುರುವಾರ ಮಧ್ಯಾಹ್ನ 3-00 ಗಂಟೆಗೆ ಚಳ್ಳಕೆರೆ ನಗರಸಭೆ ಕಛೇರಿ ಆವರಣದಲ್ಲಿ ಆಸಕ್ತರು ದಿನವಹಿ ಮಾರುಕಟ್ಟೆ ಸುಂಕ ವಸೂಲಿ ಮಾಡುವ ಹಕ್ಕನ್ನು ಪಡೆಯಲು ರೂ.1,00,000/- ಹಾಗೂ ವಾರದ ಸಂತೆ ಸುಂಕ ವಸೂಲಿ ಮಾಡುವ ಹಕ್ಕನ್ನು ಪಡೆಯಲು ರೂ.50,000/-ಗಳನ್ನು ಮುಂಗಡವಾಗಿ ಪಾವತಿಸಿ ಮರು ಹರಾಜಿನಲ್ಲಿ ಭಾಗವಹಿಸಬಹುದಾಗಿರುತ್ತದೆ ಎಂದು ಪೌರಾಯುಕ್ತೆ ಟಿ.ಲೀಲಾವತಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

About The Author

Namma Challakere Local News
error: Content is protected !!