ಚಳ್ಳಕೆರೆ :
ಮೊಳಕಾಲ್ಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ
ವೈದ್ಯರಿಲ್ಲ: ಮಹಿಳೆಯರ ಪರದಾಟ
ಚಿತ್ರದುರ್ಗದ ಬರಪೀಡಿತ ಮೊಳಕಾಲ್ಕೂರು ತಾಲೂಕಿನ ಸರ್ಕಾರಿ
ಆಸ್ಪತ್ರೆಯಲ್ಲಿ ಪ್ರಸೂತಿ ವೈದ್ಯರ ಕೊರತೆಯಿಂದಾಗಿ ಹೆರಿಗೆಗೆ ಬರುವ
ಮಹಿಳೆಯರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಹೆರಿಗೆ ನೋವು
ಕಾಣಿಸಿಕೊಂಡರೆ, ಚಳ್ಳಕೆರೆ ಅಥವಾ ಬಳ್ಳಾರಿ ಜಿಲ್ಲೆಗೆ ತೆರಳಬೇಕಾದ
ಪರಿಸ್ಥಿತಿ ಇದೆ. ಬಡ ರೋಗಿಗಳಿಗೆ ಅನುಕೂಲವಾಗಬೇಕಾದ
ಆಸ್ಪತ್ರೆಯಲ್ಲಿ ವೈದ್ಯರಿಲ್ಲದಿರುವುದು ಮಹಿಳೆಯರ ಆಕ್ರೋಶಕ್ಕೆ
ಕಾರಣವಾಗಿದೆ. ಕೂಡಲೇ ಪ್ರಸೂತಿ ವೈದ್ಯರನ್ನು ನೇಮಿಸುವಂತೆ
ಮಹಿಳೆಯರು ಇಂದು ಆಗ್ರಹಿಸಿದ್ದಾರೆ.

