ಚಳ್ಳಕೆರೆ :
ಲ್ಯಾಂಡ್ ಆರ್ಮಿ ಮೂಲಕ ಸರಬರಾಜು ಹಾಗುವ ಕಬ್ಬಿಣ ಮತ್ತು ಸಿಮೆಂಟ್
ಅಕ್ರಮವೋ, ಸಕ್ರಮವೋ ಎಂಬುದು ಅಧಿಕಾರಿಗಳು ತಿಳಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಮಂಜುನಾಥ್ ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ನಗರದ ಲ್ಯಾಂಡ್ ಆರ್ಮಿಯಲ್ಲಿ ಸಂಜೆ ವೇಳೆ ಖಾಸಗಿ ಲಾರಿಗೆ ತುಂಬುತ್ತಿರುವ ಕಬ್ಬಣದ ರಾಡ್ ಗಳಿಗೆ ಯಾವುದೇ ಪರವಾನಿಗೆ ಪಡೆಯದೆ, ಸೂಕ್ತವಾದ ದಾಖಲಾತಿಗಳು ಇಲ್ಲದೆ , ಲಾರಿಗೆ ತುಂಬುತ್ತಿರುವುದರ ಹಿಂದೆ ಖಾಸಗಿ ವ್ಯಕ್ತಿಗಳಿಗೆ ರವಾನೆಯಾಗುತ್ತದೆ ಎಂಬ ಅನುಮಾನ ಕಾಡುತ್ತಿದೆ, ಇನ್ನೂ ಸ್ಥಳದಲ್ಲಿ ಲಾರಿ ತಡೆದು ಕೇಳಿದರೆ ಹಿರಿಯೂರಿಗೆ ಎಂಬ ಉತ್ತರ ಮಾತ್ರ ಇದೆ ಆದರೆ ಯಾವ ಕಾಮಗಾರಿಗೆ ಎಂದು ಮಾಹಿತಿ ಇಲ್ಲ, ಎಷ್ಟು ಟನ್ ಎಂಬುದು ಮಾಹಿತಿ ಇಲ್ಲ, ಎಂದು ಕರವೇ ಯುವ ಘಟಕ ಅಧ್ಯಕ್ಷ ರವಿಕುಮಾರ್ ಕಿಡಿಕಾರಿದ್ದಾರೆ.
ಇದೇ ಸಂಧರ್ಭದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ, ಕರವೇ ಆಟೋ ಘಟಕ ಅಧ್ಯಕ್ಷ ಮದನ್ ಕುಮಾರ್, ತಿಪ್ಪೇಸ್ವಾಮಿ ಇತರರು ಇದ್ದರು.


