ಚಿತ್ರದುರ್ಗದ ಜಿ.ಪಂ ಸಭಾಂಗಣದಲ್ಲಿ ನಡೆದ ದಿಶಾ ಸಭೆಯಲ್ಲಿ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಗರಂ
ಸಭೆಗೆ ಗೈರಾದ ಅಧಿಕಾರಿಗಳ ವಿರುದ್ದ ಖಡಕ್ ಎಚ್ಚರಿಕೆ ನೀಡಿದ ಸಚಿವರು.
ಚಿತ್ರದುರ್ಗ ಡಿಸಿ ಕವಿತಾ ಎಸ್. ಮನ್ನಿಕೇರಿ ಮೇಲೂ ಗರಂ ಆದ ಸಚಿವ ಎ. ನಾರಾಯಣ ಸ್ವಾಮಿ.
ಜಿಲ್ಲಾಡಳಿತ ಕ್ರಮ ಕೈಗೊಳ್ತಿಲ್ಲ, ಇದು ಮುಂದುವರಿದ್ರೆ ಜನ ಕೇಳುತ್ತಾರೆ.
ಇಂದು ಗೈರಾದ ಅಧಿಕಾರಿಗಳ ಉದ್ದಟತನದ ಪರಮಾವಧಿ.
ಇಂಥ ಅಧಿಕಾರಿಗಳ ವಿರುದ್ದ ಸೇವೆ ಬಗ್ಗೆ ಬ್ಲಾಕ್ ಮಾರ್ಕ್ ಮಾಡಿ ಮುಖ್ಯ ಕಾರ್ಯದರ್ಶಿಗೆ ವರದಿ ನೀಡಿ.
ಡಿಸಿ ಅವರೇ ನೇರವಾಗಿ ವರದಿ ನೀಡಿ ಶಿಸ್ತು ಕ್ರಮಕ್ಕೆ ಬರೆಯಬೇಕು, ನನಗೂ ಒಂದು ಪ್ರತಿ ನೀಡಿ.
ಕಾನೂನು, ಸಂಸ್ಕಾರ ಇಟ್ಟುಕೊಂಡು ಈ ಜಿಲ್ಲೆಯಲ್ಲಿ ನಾನು ಇಲ್ಲಿ ಕೆಲಸ ಮಾಡುತ್ತಿದ್ದೇನೆ.
ಎಲ್ಲಾ ಬಿಟ್ಟು ಕೆಲಸ ಮಾಡಿದ್ರೆ, ಇಲ್ಲಿ ಯಾವನೂ ಕೆಲಸ ಮಾಡ್ತಾ ಇರ್ಲಿಲ್ಲ.
ಯಾವುದೇ ವ್ಯಕ್ತಿ, ಒಂದು ರಾಜಕಾರಣಿಗೆ ಮುಡಿಪಾಗಿಲ್ಲ ನಾನು.
ನಾನು ಮತ್ತೆ ಮತ್ತೆ ಇಲ್ಲಿ ರಾಜಕಾರಣಿ ಮಾಡಬೇಕು, ಜೀವನ ಮಾಡಬೇಕು ಅಂದಿಲ್ಲ.
ಪಕ್ಷದ ಆದೇಶಕ್ಕೆ ತಲೆಬಾಗಿ ಬಂದು MP ಆಗಿದ್ದೇನೆ.
ಅಧಿಕಾರಿ ಯಾವ ರೀತಿ ಕೆಲಸ ಮಾಡಬೇಕು ಎಂದು ತಿಳಿದಿರಬೇಕು.
ಗೈರಾದ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಕೇಂದ್ರ ಮಂತ್ರಿ ಎ.ನಾರಾಯಣ ಸ್ವಾಮಿ