ಚಳ್ಳಕೆರೆ :
ಚಳ್ಳಕೆರೆ ನಗರದ ರೈಲ್ವೆ ನಿಲ್ದಾಣದಲ್ಲಿ ಮೈನಿಂಗ್ ಡಂಪಿಂಗ್ ಯಾರ್ಡ್ ಸ್ಥಳಾಂತರ ಮಾಡಬೇಕು ಎಂದು ಬಿಜೆಪಿ ವತಿಯಿಂದ ನಡೆಸುತಿದ್ದ ಅಹೋರಾತ್ರಿ ಧರಣಿ ಇಂದಿಗೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು
ಧರಣಿ ನಿರತ ಸ್ಥಳದ ಪಕ್ಕದಲ್ಲಿ ಮೈನಿಂಗ್ ಲಾರಿಗಳು ಹೋಡಾಡುವುದರಿಂದ ದೂಳು ಮುಸುಕಿದ ಗಾಳಿ ಧರಣಿ ನಿರತರ ನಿದ್ದೆಗೆಡಿಸಿ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನೂ ಮೂರು ದಿನಗಳಿಂದ ಸತತವಾಗಿ ಮಳೆ ಗಾಳಿ ಲೆಕ್ಕಿಸದೆ ಧರಣಿ ಮಾಡುವ ಬಿಜೆಪಿ ಕಾರ್ಯಕರ್ತರು ಲಾರಿಯನ್ನು ತಡೆದು ಮೈನಿಂಗ್ ದೂಳು ಬಾರದ ರೀತಿಯಲ್ಲಿ ನೀರು ಹಾಕಿ ತಾಟಪಲ್ ಹಾಕಿಕೊಂಡು ಹೋಗಿ ಎಂದು ಕೆಲ ಕಾಲ ಲಾರಿಯನ್ನು ತಡೆದ ಪ್ರಸಂಗ ಜರುಗಿದೆ.
ಇನ್ನೂ ಮನುಷ್ಯನ ಜೀವದ ಜೊತೆ ಚೆಲ್ಲಾಟ ಆಡುವ ಸ್ಥಳಿಯ ಆಡಳಿತ ಮೈನಿಂಗ್ ಡಂಪಿಂಗ ಯಾರ್ಡ್ ಗೆ ಪರವಾನಗಿ ನೀಡಿ ಕೈತೊಳೆದುಕೊಂಡಿದೆ, ಆದ್ದರಿಂದ ಮೈನಿಂಗ್ ಯಾರ್ಡ್ ಸ್ಥಳಾಂತರ ಗೊಳ್ಳುವವರಿಗೆ ಧರಣಿ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದು ಕೇಸರಿ ಪಡೆ ಧರಣಿ ನಡೆಸುತ್ತಿದೆ ಎನ್ನಲಾಗಿದೆ.
ಇನ್ನೂ ಧರಣಿ ನಿರತರಿಗೆ ರಕ್ಷಣೆ ನೀಡುವ ಸಲುವಾಗಿ ಸ್ಥಳದಲ್ಲಿ ಬೀಡುಬಿಟ್ಟ ಪೋಲಿಸ್ ಇಲಾಖೆ ಡಿವೈಎಸ್ಪಿ ಬಿಟಿ ರಾಜಣ್ಣ, ಇನ್ಸ್ಪೆಕ್ಟರ್ ಕೆ.ಕುಮಾರ್, ಸಿಬ್ಬಂದಿ ವರ್ಗ ಸ್ಥಳದಲ್ಲಿ ಮೊಕಂ ಇದ್ದಾರೆ ಎನ್ನಲಾಗಿದೆ.

