ಚಳ್ಳಕೆರೆ : ತಾಲೂಕಿನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಕಿಸಾನ್ ಘಟಕ ಮತ್ತು ಅಖಂಡ ಕರ್ನಾಟಕ ರೈತ ಸಂಘ ಇವರ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ,
ಈ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಕೃಷಿ ಅಧಿಕಾರಿಯಾದ ಅಶೋಕ್ ರವರು ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ತಂದು ಕೊಟ್ಟಿರುವ ಮಕ್ಕಳ ತಂದೆ ತಾಯಿಯವರಿಗೆ ಕಿವಿ ಮಾತು ಶ್ರದ್ಧೆ ಮತ್ತು ಏಕಾಗ್ರತೆ ಇದ್ದರೆ ಇಂಥ ಸನ್ಮಾನಗಳು ದೊರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು.
ಭಾಗವಹಿಸಿದ ತೋಟಗಾರಿಕೆ ಅಧಿಕಾರಿಯದ ಕುಮಾರ್ ನಾಯಕರವರು ಗಡಿಭಾಗದಲ್ಲಿ ಅದರಲ್ಲೂ ಬರದ ನಾಡಾಗಿರುವ ಚಳ್ಳಕೆರೆ ನಗರದ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ಸ್ಥಾನ ಬಂದಿರುವುದು ಕಾಲೇಜಿಗ ದೊಡ್ಡ ಹೆಸರು ಬಂದಂತಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನಾಗರಾಜ ಎ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಮೂರು ವಿದ್ಯಾರ್ಥಿಗಳು ಅದರಲ್ಲೂ ಹೆಣ್ಣು ಮಕ್ಕಳು ಬಂಗಾರದ ಪದಕವನ್ನು ಗಳಿಸಿ ಪ್ರಥಮ ಸ್ಥಾನ ಗಳಿಸಿರುವುದು ತಾಲೂಕಿಗಿಂತ ಚಿತ್ರದುರ್ಗ ಜಿಲ್ಲೆಯ ಹೆಸರನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿ ರಾಜ್ಯದಲ್ಲಿರುವ ಟಾಪ್ 10 ಕಾಲೇಜಿಗೂ ಯಾವುದೇ ರೀತಿ ಸರ್ಕಾರಿ ಕಾಲೇಜು ಕಮ್ಮಿ ಇಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.
ಅದರಲ್ಲೂ ಒಬ್ಬ ಮಗ್ಗ ನೇಯುವ, ಮತ್ತೊಬ್ಬರು ಅಡಿಗೆ ಕೆಲಸ ಮಾಡುವ ಇನ್ನೊಬ್ಬರು ಕಾರ್ಮಿಕರಾಗಿರುವ ಮಕ್ಕಳೇ ಈ ಸಾಧನೆ ಮಾಡಿರುವುದು ಮರೆಯಲಾರದ ಸಂಗತಿ , ಈ ಸಾಧನೆಯ ಹಿಂದೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಎಲ್ಲಾ ಉಪನ್ಯಾಸಕರ ಶ್ರಮ ಕೂಡ ಈ ಸಂದರ್ಭದಲ್ಲಿ ಅಷ್ಟೇ ಪ್ರಸ್ತುತ ಎಂದು ತಿಳಿಸಿದರು,
ಈ ಸಂದರ್ಭದಲ್ಲಿ ಚಳ್ಳಕೆರೆ ನಗರಸಭಾ ಅಧ್ಯಕ್ಷರಾದ ಶಿಲ್ಪ ಮುರಳಿಧರ್, ಉಪಾಧ್ಯಕ್ಷೆ ಕವಿತಾ ಬೋರಯ್ಯನವರು ಇದ್ದರು.
,

