ಚಳ್ಳಕೆರೆ :
ಗ್ರಾಮೀಣ ಪ್ರದೇಶಗಳ ಬಡವರು, ನಿರ್ಗತಿಕರು, ರೈತರು, ಸಣ್ಣ ಸಣ್ಣ ಉದ್ದಿಮೆದಾರರಿಗೆ ಒಳಗೊಂಡು ಬೆಸ್ಕಾಂ – ಕಂಪನಿಯು ಕರೆನ್ಸಿ ಮೀಟರ್ ( ಮೊಬೈಲ್ ,ಟಿ.ವಿ ಗೆ ಹಣ
ಹಾಕಿದ ಹಾಗೆ ಹಣ ತುಂಬಿದರೆ ಕಾರ್ಯನಿರ್ವಹಿಸುವ ಹಾಗೆ) ಸ್ಮಾರ್ಟ್ ಮೀಟರ್ ಆಳವಡಿಸುವ ಸರ್ಕಾರ ಮತ್ತು ಬೆಸ್ಕಾಂ ಕಂಪನಿ ಕ್ರಮವನ್ನು ಗ್ರಾಮೀಣ ಜನರು ಸಂಪೂರ್ಣ
ತಿರಸ್ಕರಿಸಿದ್ದು, ಹಳ್ಳಿಗಳಲ್ಲಿ ಈಗಾಗಲೇ ಮೊಳಕಾಲೂರು ತಾಲ್ಲೂಕು, ಚಳ್ಳಕೆರೆ ತಾಲ್ಲೂಕುಗಳಲ್ಲಿ ಮೀಟರ್ ಆಳವಡಿಸಲು ಬಂದ ಸಿಬ್ಬಂದಿಗೆ ಘೇರಾವ್‌ ಹಾಕಿ ಪ್ರತಿಭಟಿಸಿ ವಾಪಾಸ್
ಕಳುಸುವ ಚಳುವಳಿ ಈಗಾಗಲೇ ಪ್ರಾರಂಭಿಸಿದ್ದು ಮತ್ತು ಚಳುವಳಿಯನ್ನು ರೈತರು ಸರ್ಕಾರದ ವಿರುದ್ಧ ಸಂಘರ್ಷಕ್ಕೆ ಇಳಿಯುವ ಮುನ್ನ ಸ್ಮಾರ್ಟ್ ಮೀಟರ್ ಅಳವಡಿಕೆ ಕಾರ್ಯವನ್ನು
ರದ್ದುಪಡಿಸಿಬೇಕೆಂದು ಹಾಲಿ ಇರುವ ಮೀಟರ್ ಗಳ ಮೂಲಕ ಮಾಪನ ಮುಂದುವರೆಸಬೇಕೆಂದು ಒತ್ತಾಯಿಸುತ್ತಿದ್ದೇವೆ.

ಸ್ಮಾಟ್ ಮೀಟರ್ ಅಳವಡಿಕೆಯಲ್ಲಿ ರಾಜ್ಯ ಸರ್ಕಾರ 14 ಸಾವಿರ ಕೋಟಿ ಖಾಸಗೀ ಕಂಪನಿಗಳಿಂದ ಕಿಕ್ ಬ್ಯಾಕ್ (ಲಂಚದ ರೂಪದಲ್ಲಿ ) ರೂಪದಲ್ಲಿ ಹಣ ಪಡೆದಿರುವ ಬಗ್ಗೆ
ವಿರೋಧ ಪಕ್ಷಗಳು ಸೇರಿದಂತೆ ಮಾಧ್ಯಮಗಳಲ್ಲಿ ಲಂಚಾವತಾರದ ಬಗ್ಗೆ ಎಳೆ-ಎಳೆಯಾಗಿ ಚರ್ಚೆಯಾಗಿದೆ. ಖಾಸಗೀ ಕಂಪನಿಗಳಿಗೆ ಲಾಭಮಾಡಿಕೊಟ್ಟು 14 ಸಾವಿರ ಕೋಟಿ ಹಣ
ಲಂಚದ ರೂಪದಲ್ಲಿ ಪಡಿದಿದ್ದಾರೆಂದು ನ್ಯಾಯಾಲಯದಲ್ಲಿ ದಾವೆ ದಾಖಲು ಮಾಡಿದ್ದು ತನಿಕೆ ಮಾಡಬೇಕೆಂದು ಒತ್ತಾಯಿಸುತ್ತಿದ್ದೇವೆ.

1) ಸ್ಮಾರ್ಟ್ ಮೀಟರ್ ಅಳವಡಿಸುವ ಯೋಜನೆ ಕೈಬಿಡಬೇಕು.
ಸರ್ಕಾರಕ್ಕೆ ಒತ್ತಾಯಗಳು
2] ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ಖಾಸಗೀ ಕಂಪನಿಗಳಿಂದ ಸರ್ಕಾರ ಭ್ರಮಾಂಡ ಭ್ರಷ್ಟಾಚಾರ ಮಾಡಿದ್ದು ತನಿಕೆ ಮಾಡಬೇಕು.
3] ಕೃಷಿ ಪಂಪ್ ಸೆಟ್, ಗೃಹ, ಭಾಗ್ಯಜ್ಯೋತಿ, ನಿರಂತರ ಜ್ಯೋತಿ, ಕುಟೀರ ಜ್ಯೋತಿಗಳಂತಹ ಬಡವರಿಗೆ ಉಚಿತವಾಗಿ ನೀಡುತ್ತಿರುವ ವಿದ್ಯುತ್ ಚ್ಛಕ್ತಿಗೆ ಇನ್ನು ಮುಂದೆ ಸ್ಮಾರ್ಟ್ ಮೀಟರ್
ಅಳವಡಿಸಿ ಹಣ ಮುಂಗಡವಾಗಿ ತುಂಬಿದರೆ ಮಾತ್ರ ವಿದ್ಯುತ್ ಸಂಪರ್ಕ ಇರುತ್ತದೆ. ಇಲ್ಲವಾದಲ್ಲಿ ಕಡಿತವಾಗುತ್ತದೆ, ಆದ್ದರಿಂದ ಈಗಿನಂತೆ ಮುಂದುವರೆಸಬೇಕು.
4) ಕೃಷಿ ಪಂಪ್ ಸೆಟ್ ಗಳಿಗೆ 3 ಫೇಸ್ ಸ್ಮಾರ್ಟ್ ಆಳವಡಿಸುವ ಪ್ರಯತ್ನಕ್ಕೆ ಕೈಹಾಕಿಲ್ಲ ರೈತರಿಗೆ ಉಚಿತ ಯೋಜನೆ ನಿಲ್ಲಿಸಲಾಗುತ್ತದೆ. ಹಣ ನೀಡಿ ಪಂಪ್ ಸೆಟ್ ಗಳಿಗೆ ವಿದ್ಯುತ್
ಪಡೆಯುವ ಯೋಜನೆ ಇದಾಗಿದ್ದು ತಕ್ಷಣವೇ ನಿಲ್ಲಿಸಬೇಕು.
5] ಸ್ಮಾರ್ಟ್ ಮೀಟರ್ ಧರ 2450 ಗೆ ಸಿಗುತಿತ್ತು ಅದರೆ ಕಂಪನಿಗೆ ಲಾಭಮಾಡಿಕೊಡಲು 8800-00 ರೂ. ಹೆಚ್ಚಿಸಿದ್ದಾರೆ. 3 ಫೇಸ್ ಮೀಟರ್ ಬೆಲೆಯಿದ್ದು ಇದರ ಬೆಲೆಯನ್ನು ಬರೋಬ್ಬರಿ
28,080 ರೂ.ಗೆ ಹೆಚ್ಚಿಸಿದ್ದಾರೆ, ಸರ್ಕಾರ ಖಾಸಗೀ ಕಂಪನಿಗಳೊಂದಿಗೆ ಶಾಮೀಲಾಗಿ ಸುಮಾರು 14 ಸಾವಿರ ಕೋಟಿ ಲಂಚ ಪಡೆದಿದ್ದಾರೆ.
6) ಚಿತ್ರದುರ್ಗ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳಿಂದ ವಂಚಿತರಾಗಿದ್ದು ಕೃಷಿ ನೀರಾವರಿಗೆ ವಿದ್ಯುತ್ ಆಧಾರವಾಗಿದ್ದು, ಸ್ಮಾರ್ಟ್ ಮೀಟರ್ ಆಳವಡಿಕೆ ಈಗಾಗಲೇ 3 ತಿಂಗಳಿಂದಲೂ
ಚಳುವಳಿ ಮೂಲಕ ಎಚ್ಚರಿಕೆ ನೀಡಿದ್ದು ಸರ್ಕಾರ ರೈತರೊಂದಿಗೆ ಸಂಘರ್ಷಕ್ಕಿಳಿದರೆ ಈ ಹಿಂದೆ ಜಿಲ್ಲೆಯಲ್ಲಿ ಬೆಸ್ಕಾಂ ಜಾಗೃತದಳದ ಸಿಬ್ಬಂಧಿಯನ್ನು ಹಳ್ಳಿಗಳಲ್ಲಿ ಬರದಂತೆ ನಿಷೇಧಿಸಿದ
ನೆನಪಿನಲ್ಲಿಟ್ಟುಕೊಂಡು ಅಳವಡಿಕೆ ವಾಪಾಸ್ ಪಡೆಯಬೇಕೆಂದು ಒತ್ತಾಯಿಸುತ್ತಿದ್ದೇವೆ.

ಹಾಗೆ ( ಗೃಹ ಬಂಧನದಂತಾ ಚಳುವಳಿ) ಮೀಟರ್ ವಾಪಾಸಾತಿ ಚಳುವಳಿ, ವಿದ್ಯುತ್ ಕರ ನಿರಾಕರಣೆ ಚಳುವಳಿಗೆ ಕರೆ ನೀಡಲಾಗುವುದೆಂದು ಹಿಂದಿನ ರೈತ ಚಳುವಳಿಗಳನ್ನು ಬೆಸ್ಕಾಂ
ಖಡ್ಡರೆಡ್ಡಿಹಳ್ಳಿ ಬಸವ ರೆಡ್ಡಿ ಬಣ ಒತ್ತಾಯಿಸಿದರು.

About The Author

Namma Challakere Local News
error: Content is protected !!