ಚಳ್ಳಕೆರೆ :
ನಮ್ಮ ನೀರು, ನಮ್ಮ ನೆಲ ಹಾಗೂ ನಮ್ಮ ಭೂಮಿ ಇಷ್ಟೆಲ್ಲ ಕೊಟ್ಟರು ಸ್ಥಳೀಯವಾಗಿ ಕಂಪನಿಗಳನ್ನು ಸ್ಥಾಪಿಸಲು ಭೂಮಿ ನೀಡಿದರು, ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡದೆ ಪಿಎನ್ ಸಿ ಕಂಪನಿ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಪ್ರತಿಭಟನೆ ನಿರತ ಟಿಪ್ಪರ್ ಮಾಲೀಕರ ಸಂಘದ ಅಧ್ಯಕ್ಷ ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು ಅವರು ಚಳ್ಳಕೆರೆ ತಾಲೂಕು ಕಚೇರಿ ಮುಂಭಾಗ ಟಿಪ್ಪರ್ ಮಾಲೀಕರಅಸೋಸಿನ್ ನಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದರ ಮೂಲಕ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದ್ದಾರೆ.
ಸ್ಥಳೀಯವಾಗಿ ಟಿಪ್ಪರ್ ಮಾಲೀಕರಿಗೆ ಅವಕಾಶ ನೀಡದೆ ಹೊರರಾಜ್ಯಗಳಿಂದ ಹಾಗೂ ಹೊರ ಜಿಲ್ಲೆಗಳಿಂದ ಬಂದಂತಹ ಟಿಪ್ಪರ್ ಮಾಲೀಕರಿಗೆ ಅವಕಾಶ ನೀಡುತ್ತಿದ್ದಾರೆ ಆದ್ದರಿಂದ ಸ್ಥಳೀಯವಾಗಿ ಅವಕಾಶ ನೀಡುವಂತೆ ಚಳ್ಳಕೆರೆ ತಾಲೂಕು ಕಚೇರಿ ಮುಂದೆ ಶಾಂತಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೆವೆ, ಟಿಪ್ಪರ್ ಮಾಲೀಕರಿಗೆ ನ್ಯಾಯ ಒದಗಿಸುವಂತಹ ತಹಶಿಲ್ದಾರ್ ಗೆ ಮನವಿ ಕೂಡ ಸಲ್ಲಿಸಿದ್ದೆವೆ ಎಂದರು.
ಈಗಾಗಲೇ ಮೈನಿಂಗ್ ತೆಗೆದುಕೊಂಡಿರುವ
ಸಂಬಂಧಪಟ್ಟ ವ್ಯಾಪಾರಿಗಳಿಗೆ ಮನವಿ ನೀಡಿದ್ದು, ಸ್ಪೀಲ್ ಫ್ಯಾಕ್ಟರಿ ಇವರುಗಳು ನಮಗೆ ಕರೆಸಿ ಭರವಸೆ ನೀಡಿದ್ದು
ಆದರೆ 3800 ಮೆಟ್ರಿಕ್ ಟನ್ನಲ್ಲಿ ಕೇವಲ 800 ಟನ್ ಸ್ಥಳೀಯ ಟಿಪ್ಪರ್ ಮಾಲೀಕರಿಗೆ ಅವಕಾಶ ಕೊಡುತ್ತೇವೆ
ಎಂದು ಹೇಳಿದ್ದು, ಆದರೆ ಲೋಕಲ್ ಟಿಪ್ಪರ್ ಮಾಲೀಕರಿಗೆ ಅನ್ಯಾಯ ಆಗಿದ್ದು, ಆ ಸಂಬಂಧ ಎಲ್ಲಾ
ಇಲಾಖೆಗಳಿಗೂ ಮನವಿ ನೀಡಿದ್ದು, ನಮಗೆ ನ್ಯಾಯ ದೊರಕದೇ ಇದ್ದರೆ ಉಗ್ರವಾದ ಹೋರಾಟ ಮಾಡುತ್ತವೆ.
. ಹಾಗೂ ನಮಗೆ ನ್ಯಾಯ ಸಿಗುವವರೆಗೂ ಪ್ರತಿಭಟನೆ
ಮುಂದುವರೆಸುತ್ತೇವೆ ಎಂದು ಲಾರಿ ಮಾಲೀಕರ ಸಂಘದಿಂದ ಒತ್ತಾಯಿಸಿದರು. .
ಇದೇ ಸಂಧರ್ಭದಲ್ಲಿ ಚಳ್ಳಕೆರೆ ತಾಲ್ಲೂಕು ಟಿಪ್ಪರ್ ಮಾಲೀಕರ ಸಂಘದ ಅಧ್ಯಕ್ಷ ವೆಂಕಟೇಶ್, ರಾಮಣ್ಣ, ಉಪಾಧ್ಯಕ್ಷ ಅಶೋಕ್, ನಿಜಾಮುದ್ದಿನ್ ಕೆ.,
ಜಿಕೆ.ಮಹಾಲಿಂಗಪ್ಪ, ಅಶೋಕ್,
ಇತರರು ಇದ್ದರು.


