ಚಳ್ಳಕೆರೆ :
ಹಿರಿಯೂರು: ನಿವೃತ್ತ ಎಎಸ್ ಐ ಪತ್ನಿ ಮಾಂಗಲ್ಯ ಸರ
ಎಗರಿಸಿದ ಕಳ್ಳರು
ಹಿರಿಯೂರಿನ ಶ್ರೀನಿವಾಸ ಬಡಾವಣೆಯ ರಸ್ತೆಯಲ್ಲಿ,
ಮಹಿಳೆಯೊಬ್ಬರ ಮಾಂಗಲ್ಯಸರ ಎಗರಿಸಿರುವ ಘಟನೆ
ಮಂಗಳವಾರ ತಡರಾತ್ರಿ ನಡೆದಿದೆ.

ನಿವೃತ್ತ ಎಎಸ್‌ಐ ತಿಪ್ಪೇಸ್ವಾಮಿ
ಪತ್ನಿ ವಿನೋದಮ್ಮ ಸರ ಕಳೆದುಕೊಂಡವರು. ಮನೆ ಮುಂದೆ
ವಾಯು ವಿಹಾರ ಮಾಡುತ್ತಿದ್ದಾಗ, ಬೈಕ್ ನಲ್ಲಿ ಬಂದ ಕಳ್ಳರಿಬ್ಬರು 60
ಗ್ರಾಂ ತೂಕದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾದ ದೃಶ್ಯ
ಸಿಸಿಟಿವಿ ಕ್ಯಾಮೆರಾದಲ್ಲಿ ಸರಿಯಾಗಿದೆ. ಪಕ್ಕದ ಮನೆಯವರು ಕಳ್ಳರ
ಹಿಡಿಯಲು ಹೋದಾಗ ಚಾಕು ತೋರಿಸಿ ಬೆದರಿಸಿದ್ದಾರೆ. ನಗರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Namma Challakere Local News
error: Content is protected !!