ಚಳ್ಳಕೆರೆ : ಸರ್ಕಾರ ರೈತರಿಗೆ ಕಳಪೆ ಗುಣಮಟ್ಟದ ಬಿತ್ತನೆ ಬೀಜವನ್ನು ವಿತರಣೆ ಮಾಡಿದ್ದಾರೆ ಎಂದು ಗೋಪನಹಳ್ಳಿ ಗ್ರಾಮದ ರೈತರು ಕೃಷಿ ಇಲಾಖೆ ಮುಂದೆ ಪ್ರತಿಪಡಿಸುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು ಬಯಲು ಸೀಮೆಯ ಪ್ರದೇಶ ಇಲ್ಲಿನ ರೈತರು ಮಳೆಯ ಆಶ್ರಿತ ಬೆಳೆಯಾಗಿರುವಂತ ನೆಲಗಡಲೆ ಇಲ್ಲಿನ ಪ್ರಮುಖ ಬಿತ್ತನೆ ಪ್ರದೇಶವಾಗಿದೆ ಆದರೆ ಕೃಷಿ ಇಲಾಖೆಯಿಂದ ವಿತರಿಸುವಂತಹ ಶೇಂಗಾ ಬಿತ್ತನೆ ಬೀಜ ಕಳಪೆ ಗುಣಮಟ್ಟದಿಂದ ಕೂಡಿರುವುದರಿಂದ ರೈತರು ಮನೆಗೆ ಕೊಂಡುಯ್ಯುರು ಒಂದು ತಿಂಗಳ ಅವಧಿಯಲ್ಲಿ ಹುಳ ಬಿದ್ದು ರೈತರಿಗೆ ಆರ್ಥಿಕ ನಷ್ಟವನ್ನುಂಟು ಮಾಡಿದೆ.
ಆದ್ದರಿಂದ ಸರ್ಕಾರ ಈ ಕೂಡಲೇ ಕಳಪೆ ಗುಣಮಟ್ಟದ ಶೇಂಗಾ ವಿತರಣೆಯನ್ನು ನಿಲ್ಲಿಸಿ ಹಾಗೂ ಅನ್ಯಾಯವಾದ ರೈತರಿಗೆ ಮರುಪಾವತಿಯಾಗಿ ಶೇಂಗಾ ಬೀಜ ವಿತರಣೆಯನ್ನು ಮಾಡಬೇಕೆಂದು ಗೋಪನಹಳ್ಳಿ ಗ್ರಾಮದ ರೈತ ಮುಖಂಡರು ಮನವಿ ಮಾಡಿದ್ದಾರೆ.
ಇನ್ನು ಇದಕ್ಕೆ ಸಂಬಂಧಿಸಿದಂತೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜೆ ಅಶೋಕ್ ಮಾತನಾಡಿ ಚಳ್ಳಕೆರೆ ತಾಲೂಕಿನಲ್ಲಿ ಈಗಾಗಲೇ ಶೇಕಡ 25% ರಷ್ಟು ಬಿತ್ತನೆಯಾಗಿದೆ ಉಳಿದ ಮುಕ್ಕಾಲು ಪರ್ಸೆಂಟ್ ಬಿತ್ತನೆ ಪ್ರದೇಶ ಮಳೆಯಿಲ್ಲದೆ ರೈತರು ಬಿತ್ತನೆ ಬೀಜ ಮಾಡಿಕೊಂಡಿದ್ದು ಮಳೆರಾಯನಿಗಾಗಿ ಕಾಯುತ್ತಿದ್ದಾರೆ ಇನ್ನು ಬಿತ್ತನೆಗೆ ಸಜ್ಜುಗೊಳಿಸಿದಂತಹ ಬಿತ್ತನೆಗೆ ರೈತರು ಡೆಸ್ಟ್ ಪುಡಿ ಹಾಗೂ ಔಷದಿ ಅಂಗಡಿಯಲ್ಲಿ ಸಿಗುವಂತಹ ಬೀಜೋಪಚಾರದ ರಾಸಾಯನಿಕವನ್ನು ಮಿಶ್ರಣ ಮಾಡಿ ಬಿತ್ತನೆ ಬೀಜವನ್ನು ಶೇಖರಣೆ ಇಟ್ಟುಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.


