ಚಳ್ಳಕೆರೆ : ಗುಣಮಟ್ಟದ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣದ ಅಗತ್ಯತೆ ಇಂದಿನ ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿದೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.


ಚಳ್ಳಕೆರೆ ನಗರದ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಎಕ್ಸೊ÷್ಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ತಮ್ಮ ಪ್ರಯತ್ನದಲ್ಲಿ ವೈಫಲ್ಯಗಳನ್ನು ಕಾಣುವುದು ಒಂದು ಘಟನೆ ಅಷ್ಟೇ, ಇವುಗಳನ್ನು ಮೀರಿ ಕ್ರಿಯಾಶೀಲ ಮತ್ತು ಸತತ ಅಧ್ಯಯನದಿಂದ ಯಶಸ್ಸು ಕಾಣಬೇಕಾಗುತ್ತದೆ.

ವಿದ್ಯಾರ್ಥಿಗಳು ಆತ್ಮವಿಶ್ವಾಸದ ಮೂಲಕ ಜ್ಞಾನ ಕೌಶಲ್ಯ ಮತ್ತು ಉತ್ತಮ ನಡವಳಿಕೆಯಿಂದ ಯಶಸ್ಸನ್ನು ಪಡೆಯಬಹುದು ಈ ಒಂದು ಎಕ್ಸ್ಪ್ಲೋಯಿಂದ ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು


ಮುಖ್ಯ ಶಿಕ್ಷಕಿ ಡಿ.ಆರ್.ಪ್ರಮೀಳಾ ಮಾತನಾಡಿ, ವಿದ್ಯಾರ್ಥಿಗಳು ಕೆಲವು ವೈಫಲ್ಯಗಳು ಕಂಡಾಗ ಅನ್ಯ ಮಾರ್ಗದ ಕಡೆ ಗಮನ ಹರಿಸದೆ ತಮ್ಮ ವ್ಯಾಸಂಗದ ಹಂತದಲ್ಲಿ ನೈತಿಕ ಶಿಕ್ಷಣದ ಪಠ್ಯವನ್ನು ಪರಿಚಯಿಸಿ ಜೀವನದ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಬಿತ್ತುವ ಮೂಲಕ ಇಂತಹ ಕೃತ್ಯಗಳಿಗೆ ನಾಂದಿ ಹಾಡಬೇಕೆಂದು ಹೇಳಿದರು.


ಇದೇ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿಯ ಸದಸ್ಯರುಗಳು ಉಪಸ್ಥಿತರಿದ್ದರು ಹಾಜರಿದ್ದರು.

Namma Challakere Local News
error: Content is protected !!