ಚಳ್ಳಕೆರೆ : ಕಳದ ಹನ್ನೊಂದು ವರ್ಷಗಳಲ್ಲಿ ಗುರುವಾರ ವಾದರದಂದು ಗುರುಪೂರ್ಣಿಮ ಬಂದಿರಲಿಲ್ಲ ಆದರೆ ಈ ಬಾರಿ ಗುರುವಾರವೇ ರಾಯರ ವಾರ ಗುರುವಾರ ಬಂದಿರುವ ಕಾರಣ ಈ ಭಾರಿ ಭಕ್ತರ ನೀರಿಕ್ಷೆಯಂತೆ ಅದ್ದೂರಿಯಾಗಿ ಶ್ರೀ ಸಾಯಿ ಗುರುಪೂರ್ಣಿಮೆ ಜಾತ್ರಾ ಮಹೋತ್ಸವ 2025 ಹಾಗೂ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜಾ ಕಾರ್ಯಕ್ರಮ
ಆಚರಣೆ ನಡೆಯಲಿದೆ ಎಂದು ಶ್ರೀ ವೆಂಕಟಸಾಯಿ ಸೇವಾ ಟ್ರಸ್ಟ್ ಅಧ್ಯಕ್ಷ ಬಿಸಿ.ಸಂಜೀವಮೂರ್ತಿ ಹೇಳಿದ್ದಾರೆ.

ನಗರದ ಪಾವಗಡ ರಸ್ತೆಯ ಶ್ರೀ ಸಾಯಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿ ಗೊಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ಕಳೆದ ಹನ್ನೋಂದು ವರ್ಷಗಳಿಂದ ಸತತವಾಗಿ ಗುರು ಪೂರ್ಣಿಮಾ ಆಚರಿಸುತ್ತಿದ್ದೆವೆ ಆದರೆ ಈ ಭಾರಿ ವಿಶೇಷವಾಗಿ ಶ್ರೀ ಸಾಯಿ ಗುರುಪೂರ್ಣಿಮೆ ಜಾತ್ರಾ ಮಹೋತ್ಸ ಮಾಡಲಾಗುತ್ತದೆ.

ಭಕ್ತರ ಭಕ್ತಿ ಪೂರ್ವಕ ಸಹಕಾರದಿಂದ ಗುರುಗಳ ಇಷ್ಟಚಾರದಂತೆ ನಡೆಯುವ ಧಾರ್ಮಿಕ ಕಾರ್ಯಕ್ರಮಗಳನ್ನು ಗುರುಪೂರ್ಣಿಮೆ ಕಾರ್ಯಕ್ರಮ ಎಂದು ಕರೆಯುತ್ತಾರೆ. ಜುಲೈ 9 ರಿಂದ 10 ರವರೆಗೆ ನಡೆಯಲಿರುವ ಗುರುಪೂರ್ಣಿಮೆ ಕಾರ್ಯಕ್ರಮಕ್ಕೆ ಭಿಕ್ಷಾಟನೆಯ ಮೂಲಕ ಸಮಸ್ತ ಸಾಯಿ ಭಕ್ತರನ್ನು ಆಹ್ವಾನಿಸಲಾಗಿದೆ.

ಅಂತೆಯೇ, ಸದ್ಗುರು ಶ್ರೀ ಶಿರಡಿ ಸಾಯಿಬಾಬಾರವರಿಗೆ ಪ್ರಿಯವಾದ ಭಿಕ್ಷಾಟನೆ ಕಾರ್ಯಕ್ರಮವನ್ನು ಚಳ್ಳಕೆರೆ ನಗರ ಹಾಗೂ ಸುತ್ತಮುತ್ತಲಿನ ಅನೇಕ ಗ್ರಾಮೀಣ ಪ್ರದೇಶಗಳ ಉದ್ದಗಲಕ್ಕೂ ಶ್ರೀ ವೆಂಕಟಸಾಯಿ ಸೇವಾ ಟ್ರಸ್ಟ್ ನವರು ಸಂಚರಿಸಿ ಪ್ರಚಾರ ಮಾಡಿದ್ದಾರೆ.

ಹೂವಿನ ಜಗದೀಶ್ ಮಾತನಾಡಿ, ಭಕ್ತರು ಸ್ಪಂಧಿಸಿ ದವಸ ದಾನ್ಯಗಳನ್ನು ಹಾಗೂ ದೇಣಿಗೆಗಳನ್ನು ನೀಡಿ ಭಕ್ತಿ ಪೂರ್ವಕ ಸಹಕಾರ ನೀಡಿರುತ್ತಾರೆ. ಬೆಳಗ್ಗೆ 5 ಗಂಟೆಗೆ ಸದ್ಗುರು ಶ್ರೀ ಶಿರಡಿ ಸಾಯಿಬಾಬಾರವರಿಗೆ ಕಾಕಡಾರತಿ ಸೇವೆಯೊಂದಿಗೆ ಪ್ರಾರಂಭವಾಗಿ, ಬೆಳಗ್ಗೆ 8 .30 ಗಂಟೆಗೆ ನಗರದ ಗ್ರಾಮದೇವತೆ ಚಳ್ಳಕೆರೆಮ್ಮ ದೇವಾಲಯದಿಂದ ಸಾಯಿರಥವನ್ನು ಪ್ರಾರಂಭಿಸಿ ನಗರದ ಪ್ರಮುಖ ಬೀದಿಗಳ ಮೂಲಕ ಪಾವಗಡ ರಸ್ತೆಯಲ್ಲಿರುವ ಭವ್ಯವಾದ ಸಾಯಿಮಂದಿರಕ್ಕೆ ತಲುಪುವುದು ಎಂದರು.

ಕಾರ್ತಿಕ್ ಎಸ್ ಮೂರ್ತಿ ಮಾತನಾಡಿ, ಶ್ರೀ ಸಾಯಿ ಸಾಮೂಹಿಕ ಸತ್ಯನಾರಾಯಣ ವ್ರತ ಕಾರ್ಯಕ್ರವನ್ನು ಆಯೋಜಿಸಲಾಗಿದೆ ಕಾರ್ಯಕ್ರಮದಲ್ಲಿ ನೂರಾರು ವ್ರತಧಾರಿಗಳು ಭಾಗವಹಿಸಲ್ಲಿದ್ದಾರೆ. ವಿಶೇಷ ಪೂಜಾ ಕೈಂಕರ್ಯಗಳು, ಭಕ್ತಿ ಪೂರ್ವಕ ಭಜನೆ ಕಾರ್ಯಕ್ರಮಗಳು ಮತ್ತು ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ. ಪೂಜಾ ಸದ್ಗುರು ಶ್ರೀ ಶಿರಡಿ ಸಾಯಿಬಾಬಾರವರಿಗೆ ಕಲಾತ್ಮಕವಾಗಿ ವಿಶೇಷ ಅಲಂಕಾರ ಸೇವೆ, ಬಗೆಯ ಪ್ರಸಾದ ನೈವೇದ್ಯ ಸೇವೆ, ಬಾಬಾರವರಿಗೆ ಕ್ಷೀರಾಭಿಷೇಕ ಸೇವೆ, ಪಲ್ಲಕ್ಕಿ ಸೇವೆ, ಹೀಗೆ ಭಕ್ತರಿಂದ ಹತ್ತು ಹಲವು ಪೂಜಾ ಸೇವೆಗಳನ್ನು ಅಯೋಜಿಸಲಾಗಿದೆ.

ಈ ಕಾರ್ಯಕ್ರಮಗಳ ದಿವ್ಯ ಸಾನಿಧ್ಯವನ್ನು ಮಧ್ಯಾಹ್ನ12 ಗಂಟೆಗೆ ಶ್ರೀ ಸತ್ ಉಪಾಸಿ ಶ್ರೀ ಶ್ರೀ ಶ್ರೀ ದತ್ತಾವಧೂತ ಮಲ್ಲಿಕಾರ್ಜುನ ಸ್ವಾಮೀಜಿಯವರು ವಹಿಸಿ ನಡೆಸಿಕೊಡಲಿದ್ದಾರೆ. ಸಂಜೆ 4:30 ಗಂಟೆಗೆ ಪರಮಪೂಜ್ಯ ಮಾತಾಜೀ ತ್ಯಾಗಮಯಿ ಇವರ ಸಮ್ಮುಖದಲ್ಲಿ ಮಹಿಳಾ ಭಜನಾ ಮಂಡಳಿಗಳ ಒಕ್ಕೂಟದಿಂದ ಶ್ರೀ ಲಲಿತಾ ಸಹಸ್ರನಾಮ ಪಠನೆ, ಹಾಗೂ ರಾತ್ರಿ 8:15 ರಿಂದ 8:30 ರವರೆಗೆ ಶ್ರೀ ಡಾ|| ವೈ.ರಾಜರಾಮ್ ಸ್ವಾಮೀಜಿ, ಪೀಠಾಧ್ಯಕ್ಷರು, ಶ್ರೀ ನರಹರಿ ಸದ್ಗುರು ಪೀಠ ಇವರಿಂದ ಗುರುಪೂರ್ಣಿಮೆ ಬಗ್ಗೆ ವಿಶೇಷ ಪ್ರವಚನ. ಇದರೊಂದಿಗೆ ಬೆಳಗ್ಗೆ 10 ಗಂಟೆಯಿAದ ರಾತ್ರಿ 10 ಗಂಟೆವರೆಗೂ ನಿರಂತರ ನಾಮ ಕೀರ್ತನೆ ಜರುಗಲಿದೆ. ಮೇಲ್ಕಂಡ ಕಾರ್ಯಕ್ರಮಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಲಿದ್ದು, ಭಾಗವಹಿಸಿದ ಎಲ್ಲ ಭಕ್ತರಿಗೂ ಬೆಳಗ್ಗೆ 9 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ನಿರಂತರ ಅನ್ನ ಪ್ರಸಾದ ಸೇವೆಯ ವ್ಯವಸ್ಥೆ ಮಾಡಲಾಗಿದೆ.

ಮತ್ತು ಭಕ್ತರು ಸಾಯಿಮಂದಿರಕ್ಕೆ ಬಂದು ಬಾಬಾರವರನ್ನು ದರ್ಶನ ಮಾಡಿಕೊಳ್ಳುವುದಕ್ಕಾಗಿ ಚಳ್ಳಕೆರೆ ನೆಹರು ಸರ್ಕಲ್‌ನಿಂದ ಉಚಿತವಾಗಿ ಬಸ್ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ ಎಂದರು.

ಈದೇ ಸಂಧರ್ಭದಲ್ಲಿ ಟ್ರಸ್ಟಿ ಕೆ.ಎಂ.ಜಗದೀಶ್, ಬಿಸಿ.ಸತೀಶ್, ಹೂವಿನ ಜಗದೀಶ್, ಎಂ.ಆರ್.ರವಿಪ್ರಸಾದ್, ಟ್ರಸ್ಟಿ ಬಿಸಿ.ವೆಂಕಟೇಶ್, ಸಿ.ಆರ್.ಶ್ರೀನಿವಾಸ್, ನಾಗೇಶ್ , ಕಾರ್ತಿಕ್ ಎಸ್. ಮೂರ್ತಿ ,ವಿಕಾಸ್ , ಯೋಜನೆ ಮತ್ತು ಪ್ರಚಾರ ಹಾಗೂ ಸಾಂಸ್ಕೃತಿಕ ಸಮಿತಿ ಮುಖ್ಯಸ್ಥರಾದ ಚಿದಾನಂದಮೂರ್ತಿ ,ಸುರೇಶ್ , ರವಿಕುಮಾರ್ , ಇತರರು ಇದ್ದರು.

About The Author

Namma Challakere Local News
error: Content is protected !!