ಜನಪ್ರತಿನಿಧಿಗಳ ಜಾಣ ಮೌನ

ಚಳ್ಳಕೆರೆ :

ಬಸ್ ನಿಲ್ದಾಣಕ್ಕಾಗಿ ಜುಂಜರಗುಂಟೆ ಗ್ರಾಮಸ್ಥರ ಪ್ರತಿಭಟನೆ :

ಜನಪ್ರತಿನಿಧಿಗಳ ಜಾಣ ಮೌನ

ಚಳ್ಳಕೆರೆ :

ಬಸ್ ನಿಲ್ದಾಣ ಇಲ್ಲದೆ ಪ್ರಯಾಣಿಕರ ಹೈರಾಣು

ಹೌದು ಚಳ್ಳಕೆರೆ ತಾಲೂಕಿನ ಪರುಶುರಾಂಪುರ ಹೋಬಳಿ ಕೇಂದ್ರದ ಜುಂಜರಗುಂಟೆ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಮಾರ್ಗಕ್ಕೆ ಬಸ್‌ನಿಲ್ದಾಣ ವಿಲ್ಲದೆ ಮಳೆಗಾಲದಲ್ಲಿ ಶಾಲಾ ಮಕ್ಕಳು, ವಯೋ ವೃದ್ದರು, ಪ್ರಯಾಣಿಕರು ಬಿಸಲು ಮಳೆ ಗಾಲಿಯಲ್ಲಿ ಗಿಡ ಗಂಟೆಗಳ ಆಶ್ರಯ ಪಡೆಯುವಂತಾಗಿದೆ.

ಇನ್ನೂ ತುಂಬಾ ಹಳೆಯದಾದ ಬಸ್ ನಿಲ್ದಾಣ ಕಟ್ಟಡ ಶಿಥಿಲ ಅವಸ್ಥೆ ತಲುಪಿದ್ದು ಬಿಳುವ ಹಂತದಲ್ಲಿ ಇದೆ.

ಇನ್ನೂ ಮೇಲ್ಚಾವಣಿ ಸಂಪೂರ್ಣವಾಗಿ ಹಾಳಾಗಿದ್ದು ಕಬ್ಬಿಣದ ಸರಳುಗಳು ಕಾಣುತ್ತಿವೆ ಆದರೆ ಅಧಿಕಾರಿಗಳು ಮಾತ್ರ ಜಾಣ ಕುರುಡುತನದಿಂದ ವರ್ತಿಸುವುದು ಈ ಭಾಗದ ಪ್ರಯಾಣಿಕರಿಗೆ ಬೇಸರ ತಂದಿದೆ.

ಪಾವಗಡ ಹಾಗೂ ಚಳ್ಳಕೆರೆ ಮಾರ್ಗವಾಗಿ ದಿನ ನಿತ್ಯವೂ ಪ್ರಯಾಣಿಸುವ ಪ್ರಯಾಣಿಕರಿಗೆ ತುಂಬಾ ಕಿರಿಕಿರಿಯಾಗಿದ್ದು, ಜುಂಜರಗುಂಟೆ ಗ್ರಾಮಕ್ಕೆ ಸುಮಾರು ತಲುಪಲು ಎರಡು ಕಿಲೋಮೀಟರ್ ಹಾಗುತ್ತಿದೆ, ಇನ್ನೂ ಶಾಲಾ ಮಕ್ಕಳು ,ವಯೋ ವೃದ್ದರು ಇದೇ ಮಾರ್ಗವಾಗಿ ಸಂಚರಿಸುವುದರಿಂದ ಮಳೆ ಬಂದ ಸಂಧರ್ಭದಲ್ಲಿ ಮರಗಳ ಆಶ್ರಯ ಮೂಲಕ ಕಾಲ ಕಳೆದು ಮನೆ ಸೇರಬೇಕಿದೆ, ಎಂಟರಿಂದ ಹತ್ತು ಹಳ್ಳಿಗಳ ಸಂಚಾರ ಮಾರ್ಗ ಇದಾಗಿದ್ದು ಇಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೆ ಶೋಚನೀಯ
ಎಂದು H.ರಾಜು .C ವೀರಭದ್ರಪ್ಪ. D ಮೂರ್ತಿ.ಪರಮೇಶ್.B ಅಳಲು ತೋಡಿಕೊಂಡಿದ್ದಾರೆ.

ಇದೇ ಮಾರ್ಗವಾಗಿ ಸಂಚರಿಸುವ ಜಿಲ್ಲಾ ಉಸ್ತುವಾರಿ ಮಂತ್ರಿ ಡಿ.ಸುಧಾಕರ್, ಹಾಗೂ ಸಂಸದ ಗೋವಿಂದ ಎಂ.ಕಾರಜೋಳ, ಶಾಸಕ ಟಿ.ರಘುಮೂರ್ತಿ ರವರಿಗೆ ಇಲ್ಲಿನ ಜನರ ಗೋಳು ಕೇಳದಿಲ್ಲವೆ, ಶಾಲಾ ಮಕ್ಕಳ ಮಳೆ ಬಂದರೆ ನೆನೆಯುತ್ತಾ ಮರ ಗಿಡಗಳ ಆಶ್ರಯ ಪಡೆಯುವಂತಾಗಿದೆ ಇನ್ನಾದರೂ ಜನಪ್ರತಿನಿಧಿಗಳು ಇತ್ತ ಕಡೆ ಗಮನಹರಿಸಿ ಅತೀ ತುರ್ತಾಗಿ ಬಸ್ ನಿಲ್ದಾಣ ನಿರ್ಮಿಸುವರೋ ಕಾದು ನೋಡಬೇಕಿದೆ.

ಇದೇ ಸಂಧರ್ಭದಲ್ಲಿ ಬಸ್ ನಿಲ್ದಾಣ ನಿರ್ಮಿಸುವಂತೆ ಗ್ರಾಮದ
H.ರಾಜು .C ವೀರಭದ್ರಪ್ಪ. D ಮೂರ್ತಿ.ಪರಮೇಶ್.B B.ಭೂತರಾಜ್ . H ಶರತ್ ಜಯಣ್ಣ ಹನುಮಂತ .MH.ಸ್ವಾಮಿ.ಗುರುಸ್ವಾ
ಮಿ.J ಶಿವಪ್ರಸಾದ್ ..BK.. ನರಸಿಂಹಮೂರ್ತಿ.ಶಿಥಿಲವಾದ ಕಟ್ಟಡದ ಮುಂದೆ ಪ್ರತಿಭಟಿಸಿದ್ದಾರೆ.

About The Author

Namma Challakere Local News
error: Content is protected !!