ಕೆಂಪೇಗೌಡರು ದೂರದೃಷ್ಟಿಯ ದೊರೆಯಾಗಿ ಬೆಂಗಳೂರನ್ನು ಕಟ್ಟಿದರು:ಮನೋಹರ್.ಎಂ

ಚಳ್ಳಕೆರೆ : ನಾಡಪ್ರಭು ಕೆಂಪೇಗೌಡರು ದೂರದೃಷ್ಟಿಯಿಂದ ಬೆಂಗಳೂರನ್ನು ಕಟ್ಟಿದರು, ಬೆಂಗಳೂರು ನಗರದ ಭವಿಷ್ಯದ ಬೆಳವಣಗೆಯನ್ನು ಅಂದೇ ಅರಿತು, ಅತ್ಯಂತ ಸುಭದ್ರವಾಗಿ ಮತ್ತು ಯೋಜಿತ ರೀತಿಯಲ್ಲಿ ನಿರ್ಮಿಸಿದ್ದು ಎಲ್ಲಾ ಸಮುದಾಯದವರು ಸಹಬಾಳ್ವೆಯಿಂದ ಜೀವನ ನಡೆಸುವಂತೆ ಮಾಡಿದ್ದಾರೆ ಎಂದು ಪೊಲೀಸ್ ಇಲಾಖೆಯ ಅಧಿಕಾರಿ ಮನೋಹರ್.ಎಂ ಹೇಳಿದರು.

ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಒಕ್ಕಲಿಗ ಸಮುದಾಯ ಹಾಗೂ ಕೆಂಪೇಗೌಡ ಯುವ ವೇದಿಕೆ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು.

ನಾಡಪ್ರಭು ಕೆಂಪೇಗೌಡರು ದೂರದೃಷ್ಟಿಯ ದೊರೆಯಾಗಿದ್ದು ಅವರು ಕಟ್ಟಿದ ಬೆಂಗಳೂರು ಇಂದು ವಿಶ್ವ ಭೂಪಟದಲ್ಲಿ ಹೆಚ್ಚು ಜನಪ್ರಿಯತ್ತೆ ಇಂದ ಬೆಂಗಳೂರು ಜಾಗತಿಕ ಐಟಿ ಮತ್ತು ಬಿಟಿ ಕೇಂದ್ರವಾಗಿರುವುದರ ಜೊತೆಗೆ, ದೇಶದ ಎಲ್ಲಾ ಭಾಗಗಳಿಂದ ಲಕ್ಷಾಂತರ ಜನರಿಗೆ ಉದ್ಯೋಗಗಳನ್ನು ಒದಗಿಸಿದೆ. ಉದ್ಯಾನ ನಗರ ನಿರ್ಮಾಣದ ಜೊತೆಗೆ ನೂರಾರು ಕೆರೆಕಟ್ಟೆ ಮತ್ತು ದೇವಾಲಯಗಳನ್ನ ಜಾತ್ಯಾತೀತವಾಗಿ ನಿರ್ಮಾಣ ಮಾಡಿ, ಕನ್ನಡಿಗರ ಗೌರವ ಸಂಕೇತವಾಗಿದ್ದಾರೆ ಎಂದರು.

ಗ್ರಾಮ ಪಂಚಾಯತಿ ಸದಸ್ಯ ಶಾರದಮ್ಮ ಮತನಾಡಿ ಬೆಂಗಳೂರನ್ನು ಕಟ್ಟಿದ ಕೆಂಪೇಗೌಡರ ಇತಿಹಾಸವನ್ನು ಉಳಿಸಿ, ಬೆಳಸಿ ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಈ ಸಂದರ್ಭದಲ್ಲಿ ಪೂಜಾರಿ ರಂಗಸ್ವಾಮಿ, ಮಂಜುನಾಥ, ಹರೀಶ್, ಸಂತೋಷ, ರಮೇಶ್, ಶ್ರೀನಿವಾಸ್, ಮಹೇಶ್ ಮನೋಜ್, ಗೌರಮ್ಮ ,ನರಸಿಂಹ.ಗ್ರಾಮಸ್ಥರು ಇದ್ದರು.

About The Author

Namma Challakere Local News
error: Content is protected !!