ಚಳ್ಳಕೆರೆ :
ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಯ ಕಾರ್ಯಗಾರ
ಚಳ್ಳಕೆರೆ ತಾಲೂಕಿನ ಎಲ್ಲಾ ಸರಕಾರಿ, ಅನುದಾನಿತ ,ಅನುದಾನ ರಹಿತ ಪದವಿಪೂರ್ವ ಉಪನ್ಯಾಸಕರಿಗೆ ಮಾನ್ಯ ಉಪನಿರ್ದೇಶಕರಾದ ತಿಮ್ಮಯ್ಯನವರು ಫಲಿತಾಂಶ ಸುಧಾರಣೆಗಾಗಿ ಕಾರ್ಯಗಾರವನ್ನು ಚಳ್ಳಕೆರೆಯ ರೋಟರಿ ಕ್ಲಬ್ ನಲ್ಲಿ ಇಂದು ಏರ್ಪಡಿಸಿದ್ದರು .
ಈ ಕಾರ್ಯಾಗಾರದಲ್ಲಿ ಜಿಲ್ಲೆಯ ದ್ವಿತೀಯ ಪಿಯುಸಿ ಫಲಿತಾಂಶವನ್ನು ಉತ್ತಮಪಡಿಸುವುದಾಗಿದೆ ,ಅದಕ್ಕೆ ಬೇಕಾದಂತ ಕಾರ್ಯ ಸೂತ್ರಗಳನ್ನು ಎಲ್ಲಾ ಉಪನ್ಯಾಸಕರಿಗೆ ಉಪ ನಿರ್ದೇಶಕರು ಇಂದು ಸವಿವರವಾಗಿ ತಿಳಿಸಿದರು.
ಎಲ್ಲಾ ಕಾಲೇಜುಗಳಲ್ಲಿ ಪ್ರತಿದಿನ ಸುಮಾರುಒಂದು ಗಂಟೆಗಳ ಕಾಲ ಪರಿಹಾರ ಬೋಧನೆ , ನಂತರ ತರಗತಿಗಳನ್ನು ನಡೆಸುವುದು , ಕಿರುಪರೀಕ್ಷೆಗಳನ್ನು ನಡೆಸುವುದು ,ಅವುಗಳನ್ನು ಮತ್ತೆ ಬರೆಸುವುದು, ವಿದ್ಯಾರ್ಥಿಗಳು ಕಡ್ಡಾಯವಾಗಿ ತರಗತಿಗಳಿಗೆ ಹಾಜರಾಗಲು ಅವರ ಪೋಷಕರಿಗೂ ಮನವರಿಕೆ ಮಾಡಿಕೊಡುವುದು ಹಾಗೂ ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ತರಗತಿಗಳನ್ನು ನಡೆಸುವುದರ ಮೂಲಕ ಮುಂದಿನ ವರ್ಷದಲ್ಲಿ ಒಳ್ಳೆ ಉತ್ತಮ ಫಲಿತಾಂಶವನ್ನು ನೀಡಬೇಕಾಗಿ ಮಾರ್ಗಸೂಚಿಯನ್ನು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ವಸಂತ್ ಕುಮಾರ್, ಪ್ರಾಚಾರ್ಯ ಸಂಘದ ಅಧ್ಯಕ್ಷರಾದ ದೇವೇಂದ್ರಪ್ಪ ,ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಮಲ್ಲೇಶ್ , ದೇವರಾಜ್, ಪುಷ್ಪಲತಾ , ಸರೋಜಮ್ಮ, ಭೀಮರೆಡ್ಡಿ ನಾಗರಾಜ್ ಬ್ಯಾಲಹಾಳ, ಚಳ್ಳಕೆರೆ ತಾಲೂಕಿನಎಲ್ಲಾ ಕಾಲೇಜಿನ ಪ್ರಾಚಾರ್ಯರು ಹಾಗೂ ಎಲ್ಲಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.

