ಚಳ್ಳಕೆರೆ :
ಐತಿಹಾಸಿಕ ಚಿತ್ರದುರ್ಗದಲ್ಲಿ ಸರ್ಕಾರದಿಂದ ದುರ್ಗೋತ್ಸವ ಕಾರ್ಯಕ್ರಮವನ್ನು ಸರ್ಕಾರ ಜೂನ್
ಅಂತ್ಯದೊಳಗೆ ದಿನಾಂಕ ನಿಗಧಿಪಡಿಸಿ ಆಚರಿಸಬೇಕೆಂದು ಕರುನಾಡ ವಿಜಯಸೇನೆ ಜಿಲ್ಲಾ ಸಮಿತಿವತಿಯಿಂದ ಶಾಸಕ ಟಿ.ರಘುಮೂರ್ತಿ ಗೆ ಮನವಿ ಸಲ್ಲಿಸಿದ್ದಾರೆ.
ಚಳ್ಳಕೆರೆ ನಗರದಲ್ಲಿ ಶಾಸಕ ಟಿ.ರಘುಮೂರ್ತಿ ಗೆ ಮನವಿ ಸಲ್ಲಿಸಿ ಮಾತನಾಡಿದ ಕರುನಾಡ ವಿಜಯ ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ,,
,
ಚಿತ್ರದುರ್ಗವು ಐತಿಹಾಸಿಕ
ರಾಜ-ಮಹಾರಾಜರು
ಆಳಿದಂತಹ ಜಿಲ್ಲೆಯಾಗಿದ್ದು, ಇತಿಹಾಸವಿರುವ
ರಾಜವೀರಮದಕರಿನಾಯಕರು, ಒನಕೆ ಓಬವ್ವ ಆಳಿದ ನಾಡಿದು, ಚಿತ್ರದುರ್ಗ ಜಿಲ್ಲೆಯಲ್ಲಿ ಕೋಟೆ ನಾಡು ಎಂದು ಹೆಸರು ಆಗಿದ್ದು,
ಏಳುಸುತ್ತಿನ ಕೋಟೆಗೆ ದೇಶ-ವಿದೇಶಗಳಿಂದ ಸಾವಿರಾರು ಜನರು ಪ್ರತಿದಿನ ಕೋಟೆಯನ್ನು ಮತ್ತು ಐತಿಹಾಸಿಕವುಳ್ಳ ಚಂದ್ರವಳ್ಳಿ,
ಜೋಗಿಮಟ್ಟಿ ಅರಣ್ಯಧಾಮ, ಮುರುಘಾಮಠ ಇನ್ನಿತರೆ ಪ್ರವಾಸಿತಾಣಗಳನ್ನು ವೀಕ್ಷಿಸಲು ಬರುತ್ತಾರೆ.
ಕರ್ನಾಟಕ ಸರ್ಕಾರದಿಂದ ಮೈಸೂರು ದಸರಾ, ಹಂಪಿ ಉತ್ಸವ, ಕೊಡಗು ಉತ್ಸವ, ಕಿತ್ತೂರು ಉತ್ಸವ, ಈ ರೀತಿ ಕೆಲವು
ಜಿಲ್ಲೆಗಳಲ್ಲಿ ಇತಿಹಾಸವುಳ್ಳ ಹೆಸರುಗಳ ಮೇಲೆ ಉತ್ಸವಗಳನ್ನು ಸರ್ಕಾರವೇ ಆಚರಿಸುತ್ತಾ ಬಂದಿರುತ್ತದೆ.
ದುರ್ಗೋತ್ಸವ ಆಚರಣೆಗೆ
ತಾರತಮ್ಯ ಏಕೆ?
ನಿನ್ನೆ-ಮೊನ್ನೆ ಜಿಲ್ಲೆಗಳೆಂದು ಘೋಷಣೆ ಮಾಡಿರುವ ಕೆಲವು ತಾಲ್ಲೂಕುಗಳಲ್ಲಿ ಉತ್ಸವಗಳನ್ನು ಸರ್ಕಾರದಿಂದ
ನಡೆಸುತ್ತಿರುತ್ತಾರೆ.
ಈ ಹಿಂದೆ ತಮ್ಮದೇ ಸರ್ಕಾರವಿದ್ದಾಗ ಸಚಿವರಾಗಿದ್ದ ಶ್ರೀ ಆಂಜನೇಯ ಸಾಹೇಬರು ಇದ್ದಾಗ ಐತಿಹಾಸಿಕ
ಚಿತ್ರದುರ್ಗವನ್ನು ಪರಿಗಣಿಸಿ “ದುರ್ಗೋತ್ಸವ” ಕಾರ್ಯಕ್ರಮವನ್ನು ಆಚರಿಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ತಾವುಗಳು
ದುರ್ಗೋತ್ಸವ ಕಾರ್ಯಕ್ರಮವನ್ನು ಮಾಡುವುದು ಮರೆತಿರುವುದು ಎದ್ದುಕಾಣುತ್ತಿದೆ.
ಚಿತ್ರದುರ್ಗದಲ್ಲಿ ಸುಮಾರು 8-10 ವರ್ಷಗಳಿಂದ ವಿಶೇಷವಾಗಿ ನಗರದಲ್ಲಿ ಅಲಂಕಾರಿತ ಲೈಟ್ಗಳನ್ನು ಅಳವಡಿಸಿ,
ಅದ್ದೂರಿಯಾಗಿ ಕನ್ನಡ/ಹಿಂದೂ ಸಂಘಟನೆಗಳು ಹಿಂದೂ ಮಹಾಗಣಪತಿ ಉತ್ಸವವನ್ನು ಮತ್ತು ಶೋಭಾಯಾತ್ರೆಯನ್ನು
ಕೋಟಿಗಟ್ಟಲೇ ಹಣ ಖರ್ಚು ಮಾಡಿ ಅದ್ದೂರಿಯಾಗಿ ಆಚರಿಸುತ್ತಾರೆ.
ಅದೇ ರೀತಿ ಚಿತ್ರದುರ್ಗದಲ್ಲಿ ದುರ್ಗೋತ್ಸವವನ್ನು ಸರ್ಕಾರದಿಂದ ಆಚರಿಸುವಂತೆ ಈಗ್ಗೆ 5-6 ತಿಂಗಳ ಹಿಂದೆ
ಸಂಘಟನೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿಕೊಂಡ ಪರಿಣಾಮ ಸಚಿವರು ಜೂನ್ ಅಂತ್ಯದೊಳಗೆ
“ದುರ್ಗೋತ್ಸವ” ಕಾರ್ಯಕ್ರಮವನ್ನು ಮಾಡಲು ಮೌಖಿಕವಾಗಿ ತಿಳಿಸಿರುತ್ತಾರೆ.
ಆದರೆ ಜೂನ್ ತಿಂಗಳು ಕಳೆಯುತ್ತಾ ಬಂದರೂ ಈ ಬಗ್ಗೆ ಸಚಿವರು ಚಿತ್ರದುರ್ಗವನ್ನು ಕಡೆಗಣಿಸುತ್ತಿರುವುದು
ಮೋಲ್ನೋಟಕ್ಕೆ ಕಂಡುಬರುತ್ತದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿವರ್ಷ ಆಯಾಯಾ ಜಿಲ್ಲೆಯ ಐತಿಹಾಸಿಕ ಇತಿಹಾಸವುಳ್ಳಂತಹ ಹೆಸರಿನ ಮೇಲೆ ಸರ್ಕಾರವು
ಉತ್ಸವಗಳನ್ನು ಮಾಡುತ್ತಾ ಬಂದಿರುವುದು ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ನೋಡುತ್ತಿರುತ್ತೇವೆ.
ಮುಖ್ಯವಾಗಿ ಐತಿಹಾಸಿಕ ಕೋಟೆ, ಮುರುಘಾಮಠ, ವಿ.ವಿ.ಸಾಗರ, ನಾಯಕನಹಟ್ಟಿ ಇಂತಹ ಪ್ರಮುಖ
ಸ್ಥಳಗಳನ್ನು ಹೊಂದಿರುವ ಚಿತ್ರದುರ್ಗವನ್ನು ಸರ್ಕಾರ, ಜಿಲ್ಲಾಡಳಿತ ಮತ್ತು ಜಿಲ್ಲೆಯ ಸಚಿವರು ಕಡೆಗಣಿಸಿರುತ್ತಾರೆ.
ನಮ್ಮ
ಕೋಟೆಯು ಐತಿಹಾಸಿಕ ದೇಶದಲ್ಲಿ ಹೆಸರು ಮಾಡಿರುವಂತಹ ಕೋಟೆಯಾಗಿದೆ. ರಾಜ ಮಹರಾಜರು ಆಳಿದ
ಕೋಟೆಯಾಗಿದ್ದು, ಪ್ರತಿದಿನ ಕೋಟೆ ಮತ್ತು ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳನ್ನು ವೀಕ್ಷಿಸಲು ದೇಶದ ಮೂಲೆ
ಮೂಲೆಯಿಂದ ಮತ್ತು ಹೊರ ದೇಶದ ಪ್ರವಾಸಿಗರು ಬಂದು ವೀಕ್ಷಣೆ ಮಾಡುತ್ತಿರುತ್ತಾರೆ. ಇದೇ ರೀತಿ ವರ್ಷಕ್ಕೊಮ್ಮೆ
ಐತಿಹಾಸಿಕ “ದುರ್ಗೋತ್ಸವ” ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಮಾಡಿದರೆ ಇನ್ನು ಹೆಚ್ಚಿನದಾಗಿ ಪ್ರವಾಸಿತಾಣಗಳು ಅಭಿವೃದ್ಧಿಲಲಲಲ
ಹೊಂದಲು ಮತ್ತು ಪ್ರವಾಸಿಗರು ಜಿಲ್ಲೆಯ ಐತಿಹಾಸಿಕ ಸ್ಥಳಗಳನ್ನು ಇನ್ನು ಹೆಚ್ಚಿನದಾಗಿ ವೀಕ್ಷಣೆ ಮಾಡಲು
ಅವಕಾಶವಾಗುತ್ತದೆ. ಆದರೆ ಸರ್ಕಾರ ಚಿತ್ರದುರ್ಗವನ್ನು ಕಡೆಗಣಿಸುತ್ತಿರುವುದರಿಂದ ಜಿಲ್ಲೆಯ ಪ್ರವಾಸಿಗರಿಗೆ ಮತ್ತು
ಕನ್ನಡಾಭಿಮಾನಿಗಳಿಗೆ ತುಂಬಾ ನೋವುಂಟು ಮಾಡಿದಂತಾಗಿದೆ.
ಈ ಹಿಂದೆ ಆಂಜನೇಯರವರು ಸಚಿವರಾಗಿದ್ದ ಸಂದರ್ಭದಲ್ಲಿ ಸರ್ಕಾರ 2 ಬಾರಿ ದುರ್ಗೋತ್ಸವ ಆಚರಿಸಿರುವುದು
ಬಿಟ್ಟರೆ ಇಲ್ಲಿಯವರೆಗೆ ಆಚರಿಸುವುದಿಲ್ಲ. ಹಂಪಿ ಉತ್ಸವ, ಮೈಸೂರು ದಸರಾ ಉತ್ಸವ ರೀತಿಯಲ್ಲಿಯೇ ಸರ್ಕಾರ ಜಿಲ್ಲಾಡಳಿತ,
ಚಿತ್ರದುರ್ಗ ಜಿಲ್ಲೆಯ ಉಸ್ತುವಾರಿ ಸಚಿವರು, ಮತ್ತು ಜಿಲ್ಲೆಯ ಎಲ್ಲಾ ಶಾಸಕರು ಒಟ್ಟುಗೂಡಿ ಸರ್ಕಾರದಿಂದ ಅನುದಾನ
ಮಂಜೂರು ಮಾಡಿಸಿಕೊಂಡು ಐತಿಹಾಸಿಕ, ಇತಿಹಾಸದಲ್ಲಿ ರಾಜ-ಮಹಾರಾಜರು ಚಿತ್ರದುರ್ಗವನ್ನು ಆಳ್ವಿಕೆ ಮಾಡಿರುವ ರಾಜ
ಮಹಾರಾಜರ ಹೆಸರು ಅಚ್ಚ-ಅಳಿಯದಂತೆ ಉಳಿಯಲು ಹಾಗೂ ಈಗಿನ ಯುವಕರ ಚಿತ್ರದುರ್ಗದ ಇತಿಹಾಸವನ್ನು
ತಿಳಿದುಕೊಳ್ಳಲು ಪ್ರತಿವರ್ಷ ವಿಶೇಷವಾಗಿ “ದುರ್ಗೋತ್ಸವ” ಕಾರ್ಯಕ್ರಮವನ್ನು ಸರ್ಕಾರವೇ ವಿಧಾನಸಭೆಯಲ್ಲಿ ಚರ್ಚಿಸಿ ಜೂನ್
ಅಂತ್ಯದೊಳಗೆ ದಿನಾಂಕ ನಿಗಧಿಪಡಿಸಿ ಆಚರಿಸಲು ಕೂಡಲೇ ಸೂಕ್ತ ಆದೇಶ ನೀಡಿ ಚಿತ್ರದುರ್ಗದಲ್ಲಿ “ದುರ್ಗೋತ್ಸವ-2025”
ಆಚರಣೆಗೆ ಚಾಲನೆ ನೀಡಬೇಕೆಂದು ಈ ಮೂಲಕ ಸರ್ಕಾರವನ್ನು ಒತ್ತಾಯಿಸಿ
ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.
ಇದೇ ಸಂಧರ್ಭದಲ್ಲಿ ಚಳ್ಳಕೆರೆ ತಾಲ್ಲೂಕು ಅಧ್ಯಕ್ಷ ಪಾಂಡು,
ಗೋಪಿನಾಥ್, ಬಿ.ಎನ್.ವಿಜಯ್ ಬಾಬು, ನಿಸಾರ್ ಅಹ್ಮದ್ ,ಇತರರು ಇದ್ದರು.

