ಚಳ್ಳಕೆರೆ :
ಕಡತ ತಯಾರಿ ಮಾಡಿ ಫೈಲ್ ಗಳಿಗೆ ನಿಗದಿ ಮಾಡಿರುವ ಸಮಯಕ್ಕೆ ಅಪ್ಲೋಡ್ ಮಾಡಲು ಇರುವ ಟೂಲ್ ಸರಿಯಾಗಿ ಕೆಲಸ ಮಾಡದೇ ದಿನನಿತ್ಯ ಭೂಮಾಪಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ, ಆದ್ದರಿಂದ ಕೂಡಲೇ ಕನಿಷ್ಠ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿ
ಭೂ ಧಾಖಲೆಗಳ ಸಹಾಯಕ ನಿರ್ದೇಶಕರು ಬಿಎಸ್. ಬಾಬುರೆಡ್ಡಿ ರವರಿಗೆ ಮನವಿ ಸಲ್ಲಿಸಿದರು.
ಅವರು ನಗರದ ಭೂ ದಾಖಲೆಗಳ ಸರ್ವೆ ಕಛೇರಿಯಲ್ಲಿ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.
ಭೂ ಮಾಪನ ಅಧಿಕಾರಿಗಳಿಗೆ ಸರಿಯಾದ ವೇತನ ಇಲ್ಲದೆ, ದಿನ ನಿತ್ಯ ಭೂಮಿಯಲ್ಲಿ ಕೆಲಸ ಮಾಡುವ ನಮಗೆ ಸರಿಯಾದ ಮೂಲ ಭೂತ ಸೌಲಭ್ಯಗಳು ಇಲ್ಲದೆ ಕೆಲಸದ ಒತ್ತಡ ಹೆಚ್ಚಾಗಿದೆ ಆದ್ದರಿಂದ ತುರ್ತಾಗಿ ಕಾರ್ಯ ಒತ್ತಡ ಇಳಿಸಬೇಕು ಮೂಲ ಭೂತ ಸೌಲಭ್ಯ ನೀಡಬೇಕು,
ದಿನಕ್ಕೆ ಒಮ್ಮೆ ಅಥವಾ ಅಧಿಕ ಬಾರಿ ಟೂಲ್ಸ್ ಕೆಲಸ ಮಾಡುತ್ತಿಲ್ಲ, ಆವೃತ್ತಿ ಅವಧಿ ಹೂಡಿದ್ದ ಎಂದು ತೋರುತ್ತದೆ ಇದರಿಂದ ಕೆಲಸ ಮಾಡಲು ತೊಂದರೆಯಾಗುತ್ತಿದೆ ಹಾಗೂ ಹಿಂಸೆ ಎಂದಾಗಿದೆ , ಸರ್ವೇ ಮೋಜಿನಿ ಟೂಲ್ ಗಳು ಬಳಕೆದಾರರಾದ ಸರ್ವೇಯರ್ಗಳಿಗೆ ಟೂಲ್ ಸ್ನೇಹಿಯಾಗಿರಬೇಕು ಮತ್ತು ಸಾಕಷ್ಟು ಹೊಂದಿಕೊಳ್ಳುವಂತಿರಬೇಕು
ತಿಂಗಳಿಗೆ ಹೊಸ ಆವೃತ್ತಿಯ ಅಪ್ಲೋಡ್ ಟೂಲ್ ಬಿಡುಗಡೆ ಆಗುತ್ತಲೇ ಇರುತ್ತದೆ, ಬಿಡುಗಡೆಯಾಗುವ ಜೊತೆಗೆ ಟೂಲ್ ಸರಿಯಾಗಿ ಕಲಸ ಮಾಡದಿರುವ ಸ್ಥಿತಿಯನ್ನು ತಲುಪಿರುತ್ತದೆ. ಅಪೋ ಆಗುವುದಿಲ್ಲ, ಫೈಲ್ ವೀಕ್ಷಣೆ ಆಗುವುದಿಲ್ಲ, ಅಪ್ಲೋಡ್ ಮಾಡಲು ಸಾಧ್ಯವಾಗದೆ, ಲಾಗಿನ್ ಗಳ, ಆಗುತ್ತವೆ. ತಾಂತ್ರಿಕ ಮಾಡಿದ ಕಡತ ಸಲ್ಲಿಸಲು (submit) ಆಗುವುದಿಲ್ಲ ಇತ್ಯಾದಿ ಇಂತಹ ಸಮಸ್ಯೆಗಳಿಂದ ಸಮಯಕ್ಕೆ ಸರಿಯಾಗಿ ಅಪ್ಲೋಡ್ ದೋಷಗಳಿಂದ ಆಗುವ ಸಮಸ್ಯೆಗಳಿಗೂ ಸಹ ಪರವಾನಗಿ ಭೂಮಾಪಕರಿಗೆ ಮೇಲಾಧಿಕಾರಿಗಳಿಂದ ನೋಟೀಸ್ ಪಡೆದುಕೊಳ್ಳುವಂತೆ ಅಗುತ್ತಿದೆ ಹಾಗೂ ಪ ಭೂ ಗಳು ತಲೆದಂಡ ಆಗಬೇಕಾದ ಪರಿಸ್ಥಿತಿ ಎದುರಗುತ್ತಿವೆ.
ಇಷ್ಟೆಲ್ಲಾ ಕಷ್ಟ ಕಾರ್ಪಣ್ಯಗಳ ನಡುವೆ ಇಲಾಖೆ/ಸರ್ಕಾರ ನಮ್ಮ ಕೆಲಸವನ್ನು, ಪರಿಶ್ರಮವನ್ನು ಪರಿಗಣಿಸಿ, ಖಾಯಂ ಮಾಡುತ್ತದೆ ಎಂಬ ನಂಬಿಕೆಯಲ್ಲಿ ಇಲಾಖೆಗೆ ಪ್ರತಿ ತಿಂಗಳು ವಗತಿ ಕೊಡುವಲ್ಲಿ ಹಾಗೂ ಇಲಾಖೆ/ಸರ್ಕಾರ ನಿಯೋಜನೆ ಮಾಡಿದ ಕೆಲಸಗಳಿಗೆ ಕನಿಷ್ಠ ವೇತನ ಮತ್ತು ಸವಲತ್ತು ನೀಡದಿದ್ದರೂ ಯಶಸ್ವಿಯಾಗಿ ಪೂರೈಸುವಲ್ಲಿ ಪ ಭಗಳು ಸಿಂಹಪಾಲು ಕೊಡುಗೆ ನೀಡುತ್ತಾ ಬಂದಿರುತ್ತೇವೆ.
ಕರ್ನಾಟಕ ಸರ್ವೇ ಇಲಾಖೆಗೆ ಕೆಲಸದ, ಪ್ರಗತಿ ವಿಚಾರವಾಗಿ ಅಧಾರ
ಸ್ತಂಭವಾಗಿ ನಿಂತಿದ್ದೇವೆ.
ನಮ್ಮ ನಂಬಿಕೆಗಳು ದಿನೇ ದಿನೇ ನೆಲ ಕಚ್ಚತ್ತಿವೆ. 2025 ರ ಆಧುನಿಕ ಯುಗದಲ್ಲಿ ಸಹ ಕನಿಷ್ಠ ಸೌಲಭ್ಯ, ಕೆಲಸಕ್ಕೆ ತಕ್ಕ ವೇತನ ಇಲ್ಲದೆ ಜೀವನ ನಡೆಸಲು ಕಷ್ಟಕರ ವಾತಾವರಣದಲ್ಲಿ ಬದುಕುವ ದೌರ್ಬಲ್ಯ ನಮ್ಮ ಕರ್ನಾಟದ ಪ್ರತಿ ಪರವಾನಗಿ ಭೂಮಾಪಕನದ್ದು.
ನಾವು ಇಲಾಖೆ/ ಸರ್ಕಾರ ನೀಡುವ ಯಾವುದೇ ಕೆಲಸ ಮಾಡಲು ಸಿದ್ಧರಿದ್ದೇವೆ ಹಾಗೂ ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿರುತ್ತೇವೆ. ಆದರೆ ಸರ್ಕಾರ/ಇಲಾಖೆ ನಮಗೆ ಸರ್ಕಾರಿ ಭೂಮಾಪಕರಿಗೆ ನೀಡುವ ವೇತನ, ಸೌಲಭ್ಯ, ಸ್ನಾನ-ಗೌರವ ನೀಡುವವರೆಗೆ ನಮ್ಮ ಮೇಲಾಧಿಕಾರಿಗಳಾದ ನೀವು ನಮ್ಮಗಳ ಕೆಲಸವನ್ನು ಸ್ಥಗಿತ ಮಾಡಲು ಅನುವು ಮಾಡಿಕೊಟ್ಟು ರೈತರಿಗೆ, ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕಾಗಿ ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಇದೇ ಸಂಧರ್ಭದಲ್ಲಿ
ಕರ್ನಾಟಕ ಸರ್ಕಾರಿ ಪರವನಾಗಿ ಭೂ ಮಾಪಕರ ಸಂಘ ದ ಜಿಲ್ಲಾ ಉಪಾಧ್ಯಕ್ಷರಾದ ಕೆ.ಬಾಲರಾಜ್, ಶ್ರೀನಿವಾಸ್, ಕಾಂತರಾಕ್ , ಜಿಸಿ.ಸುರೇಶ, ಜೆ.ಎಸ್ ವಿರೇಶ ಹೆಚ್ ನಾಗಭೂಷಣ್, ಗಗನ್ ಭರತ್, ವಿನಯ್, ರಾಮಚಂದ್ರ ರವಿ. ಟಿ.ಲಿಂಗಪ್ಪ.ಶಿವಪ್ಪ ರಾಜು.ಪಿಓ, ಮಂಜುನಾಥ ,ಬಾಬು ಹಜರ್ ನಯನ,ವಾಸವಿ, ಇಸ್ಮಾಯಿಲ್ ಇತರರು ಇದ್ದರು.

