ಚಳ್ಳಕೆರೆ :
ಮೊಳಕಾಲ್ಕೂರು: ಬಿಡುವಿಲ್ಲದ ದುಡಿಮೆಯಲ್ಲಿ ಪರಿಸರ
ಮರೆಯುತ್ತಿದ್ದೇವೆ
ಪೊಲೀಸರು ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕಾಗಿ ದಿನನಿತ್ಯ
ದುಡಿಯುತ್ತಾ, ಉಸಿರುಕೊಟ್ಟ ಪರಿಸರವನ್ನು ಮರೆಯುತ್ತಿದ್ದೆವೆಂದು
ಮೊಳಕಾಲ್ಕೂರು ಸಿಪಿಐ ವಸಂತ್ ವಿ ಅಸೋದೆ ಹೇಳಿದರು.
ಮೊಳಕಾಲ್ಕೂರಿನಲ್ಲಿ ಸೋಲೇನಹಳ್ಳಿ ಬಳಿಯ ಪೊಲೀಸ್
ನಿವೇಶನದ ಬಳಿ ಭಾನುವಾರ ಅರಣ್ಯ ಇಲಾಖೆಯೊಂದಿಗೆ ಸಸಿ
ನೆಡುವ ಕಾರ್ಯಕ್ರಮದಲ್ಲಿ ಮಾತಾಡಿ, ಪರಿಸರ ಕಾಳಜಿಯನ್ನು
ಮುಟ್ಟಿಸುವ ಸಲುವಾಗಿ ಹಾಗು ಪರಿಸರಕ್ಕೆ ನಾವೇನಾದರೂ
ಕೊಡುಗೆ ನೀಡಬೇಕೆಂಬ ಸಂಕಲ್ಪದಿಂದ ಗಿಡನೆಡುವ ಕಾರ್ಯಕ್ರಮ
ಮಾಡಲಾಗಿದೆ ಎಂದರು.

