ಚಳ್ಳಕೆರೆ :
ಮೊಳಕಾಲ್ಕೂರು: ಕಾರ ಹುಣ್ಣಿಮೆಯಲ್ಲಿ ಎತ್ತುಗಳ
ಓಟದ ಸ್ಪರ್ಧೆ
ಕಾರ ಹುಣ್ಣಿಮೆಯ ಹಬ್ಬಕ್ಕಾಗಿ ಮೊಳಕಾಲ್ಮುರಿನ ಬಹುತೇಕ
ಗ್ರಾಮಗಳಲ್ಲಿಂದು, ರೈತರು ತಮ್ಮ ಹಸು ಕರುಗಳು ಎತ್ತುಗಳ ಮೈ
ತೊಳೆದು ಅವುಗಳಿಗೆ ಬಣ್ಣ ಬಣ್ಣದ ಬಗೆ ಬಗೆಯ ಅಲಂಕಾರಗಳನ್ನು
ಮಾಡಿದ್ದಾರೆ.
ಹಸು ಕರುಗಳು ಮತ್ತು ಎತ್ತುಗಳ ಕಾಲುಗಳಿಗೆ ಗೆಜ್ಜೆ
ಕಟ್ಟಿ ಅಲಂಕರಿಸಿ ಮೊದಲು ಪೂಜೆ ಮಾಡಿ ನೈವೇದ್ಯ ಅರ್ಪಿಸಿದ್ದಾರೆ.
ನಂತರ. ಎತ್ತಿನ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ರೈತರು ಸ್ಪರ್ಧೆಯಲ್ಲಿ ಜೋಡೆತ್ತುಗಳನ್ನು ಓಡಿಸುವ ಮೂಲಕ
ಸಂಭ್ರಮಿಸಿದರು. ಈ ಓಟ ನೋಡಲು ಗ್ರಾಮಸ್ಥರು ಕಾತುರದಿಂದ
ಕಾದಿದ್ದರು.

