ಚಳ್ಳಕೆರೆ : ಗ್ರಾಮೀಣ ಮಟ್ಟದಲ್ಲಿ ಸಾರ್ವಜನಿಕರಿಗೆ ಓದುವ ಹವ್ಯಾಸ ಬೆಳೆಸಬೇಕು ಎಂಬ ಇತದೃಷ್ಠಿಯಲ್ಲಿ ಗ್ರಾಪಂ.ವಾರು ಗ್ರಂಥಾಲಯ ತೆರದು ಜ್ಞಾನ ಭಂಡಾರ ನೀಡುವುದು ಶ್ಲಾಘನೀಯ ಎಂದು ಪಿಡಿಓ ದೇವರಾಜ್ ಹೇಳಿದರು.
ಅವರು ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಅಬ್ದುಲ್ ನಜೀರ್ ಸಾಬ್, ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಂಸ್ಥೆ ವತಿಯಿಂದ, ತಾಲೂಕು ಮಟ್ಟದ ಗ್ರಂಥಾಲಯ ಸಲಯ ಸಮಿತಿ ಸದಸ್ಯರ ಹತ್ತು ದಿನಗಳ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಅರಿವು ಕೇಂದ್ರದ ಸಲಹಾ ಸಮಿತಿ, ಸದಸ್ಯರ ತರಬೇತಿ, ಅನಿವಾರ್ಯ ಆದ್ದರಿಂದ ಸಲಹಾ ಸಮಿತಿ ಸದಸ್ಯರಿಗೆ ಗ್ರಂಥಾಲಯ ಬಗ್ಗೆ ಮಾಹಿತಿ ಇರಬೇಕು ಆದ್ದರಿಂದ ಈ ಕಾರ್ಯಗಾರ ಮಾಡಲಾಗುತ್ತದೆ ಎಂದು ತರಬೇತಿದಾರ
ವಿಜಯಲಕ್ಷ್ಮಿ, ಮಂಜುನಾಥ್. ಹೇಳುತ್ತಾರೆ.
ಇದೇ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಮಟ್ಟದ ಪಿಡಿಓಗಳು, ಸಲಹಾ ಸಮಿತಿಯ ಸದಸ್ಯರು, ಸಾಹಿತಿಗಳು ಇತರೆ ಪಾಲ್ಗೊಂಡಿದ್ದರು.

