ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತೆ ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅಭಿಪ್ರಾಯ.
“ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆಯುವ ಅರ್ಹತೆ ಸೂಲಗಿತ್ತಿ ತಿಮ್ಮಕ್ಕರಿಗಿದೆ”-
ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತೆ ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅಭಿಪ್ರಾಯ.
ಚಳ್ಳಕೆರೆ-ಭಾರತ ಸರ್ಕಾರ ಪ್ರತಿ ವರ್ಷ ಕೊಡಮಾಡುವ ಪದ್ಮಶ್ರೀ ಹಾಗೂ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆಯುವ ಅರ್ಹತೆ ಕಾಲುವೆಹಳ್ಳಿಯ ಶತಾಯುಷಿ ಸೂಲಗಿತ್ತಿ ತಳುಕಿನ ತಿಮ್ಮಕ್ಕರಿಗಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ತಿಳಿಸಿದರು.
ತಾಲೂಕಿನ ಕಾಲುವೆಹಳ್ಳಿಯಲ್ಲಿ ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರು ಹಾಗೂ ಹಳೇನಗರದ ಪತ್ರೀಜಿ ಧ್ಯಾನಾಮೃತ ಕೇಂದ್ರದ ಧ್ಯಾನಬಂಧುಗಳ ಸಹಯೋಗದೊಂದಿಗೆ ಶತಾಯುಷಿ ಸೂಲಗಿತ್ತಿ ತಳುಕಿನ ತಿಮ್ಮಕ್ಕ ಹಾಗೂ ಅವರ ಮರಿ ಮೊಮ್ಮಕ್ಕಳಿಗೆ ಸನ್ಮಾನ,ಆಹಾರ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪಿರಮಿಡ್ ಧ್ಯಾನ ಕೇಂದ್ರದ ಸೌಮ್ಯ ಉಮೇಶ್ ಮಾತನಾಡಿ ಎಲೆಮರೆಯ ಕಾಯಿಯಂತೆ ನಿಸ್ವಾರ್ಥವಾಗಿ ಸಾವಿರಾರು ಸಹಜ ಹೆರಿಗೆ ಸೇವೆ ಮಾಡಿಸಿರುವ ಸೂಲಗಿತ್ತಿ ತಳುಕಿನ ತಿಮ್ಮಕ್ಕರು ಅದಕ್ಕೆ ಪ್ರತಿಯಾಗಿ ಪಡೆಯುತ್ತಿದ್ದ ಪ್ರತಿಫಲ ತುಂಬಾ ಕಡಿಮೆ. ಸೂಲಗಿತ್ತಿಯಾಗಿ ಅವರು ಮಾಡಿರುವ ಸೇವೆಯನ್ನು ಸರ್ಕಾರಗಳು ಗುರುತಿಸಿ ಗೌರವಿಸುವುದರೊಂದಿಗೆ ಅವರಿಗೆ ಆದಷ್ಟು ಬೇಗ ಮನೆಯನ್ನು ಕಟ್ಟಿ ಕೊಡುವ ಪ್ರಯತ್ನ ಮಾಡಬೇಕು ಎಂದರು.
ಕಾರ್ಯಕ್ರಮದ ಬಗ್ಗೆ ಹೂವಿನ ಲಕ್ಷ್ಮೀದೇವಿ ರಾಜಶೇಖರ್, ಮಹಾದೇವಿ ತಿಪ್ಪೇಸ್ವಾಮಿ ಮಾತನಾಡಿದರು. ಪ್ರಾರ್ಥನೆಯನ್ನು ಕಾಲುವೆಹಳ್ಳಿಯ ಶ್ರೀಆಂಜನೇಯಸ್ವಾಮಿ ಭಜನಾ ಮಂಡಳಿಯ ಬೋರಣ್ಣ ಮತ್ತು ತಿಪ್ಪೇಸ್ವಾಮಿ ಮಾಡಿದರೆ ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ ಎಲ್ಲರನ್ನೂ ಕಾರ್ಯಕ್ರಮಕ್ಕೆ ಸ್ವಾಗತಿಸಿ-ವಂದಿಸಿದರು.
ಈ ಸಂದರ್ಭದಲ್ಲಿ ಪಾಲಕ್ಕ,ಆಟೋ ಏಕಾಂತಣ್ಣ, ಬಿ.ಎಂ.ಗೀತಾ, ಚೆನ್ನಕೇಶವ, ಲೋಕೇಶ್ ಪೂಜಾರಿ,ಮಂಜುಳ ಜಯಪಾಲ,ಓಬಕ್ಕ, ಕರಿಯಣ್ಣ,ಗೌತಮಿ, ಮೌನಶ್ರೀ,ಬೋರಕ್ಕ,
ಓಬಣ್ಣ, ಗಂಗಮ್ಮ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

