ಚಳ್ಳಕೆರೆ :
ಚಿತ್ರದುರ್ಗ: ಹೆಚ್ ಎಎಲ್ ನ್ನು ಆಂಧ್ರಕ್ಕೆ ಬಿಡಬಾರದು
ಚಿತ್ರದುರ್ಗ ಜಿಲ್ಲೆಯಲ್ಲಿ 10ಸಾವಿರ ಎಕರೆ ಭೂಮಿಯನ್ನು
ನೀಡುತ್ತೇವೆ.
ಇಲ್ಲಿ ರೈಲ್ವೇ, ಡಿಆರ್ ಡಿಓ, ನ್ಯಾಷನಲ್ ಹೈವೇ ಇದೆ.
ಇದರಿಂದ ಯಾವುದೇ ಕಾರಣಕ್ಕು ಹೆಚ್ ಎಎಲ್ ನ್ನು ಆಂಧ್ರಕ್ಕೆ
ಬಿಟ್ಟುಕೊಡಬಾರದು ಎಂದು ಚಿತ್ರದುರ್ಗ ಸಂಸದ ಗೋವಿಂದ
ಕಾರಜೋಳ ಸಿಎಂ ಸಿದ್ದರಾಮಯ್ಯರನ್ನು ಒತ್ತಾಯಿಸಿದರು.
ಚಿತ್ರದುರ್ಗದಲ್ಲಿಂದು ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ, ಕೇಂದ್ರ
ಸರ್ಕಾರದ ಮನವೊಲಿಸಿ, ಹೆಚ್ ಎ ಎಲ್ ನ್ನು ಇಲ್ಲಿಯೇ
ಉಳಿಸಿಕೊಳ್ಳಬೇಕೆಂದು ಒತ್ತಾಯಿಸಿದರು.

