ಚಳ್ಳಕೆರೆ : ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರ ಸಭೆಯು ರಾಜ್ಯ ರೈತ ಸಂಘದ ಉಪಾಧ್ಯಕ್ಷ ರೆಡ್ಡಿಹಳ್ಳಿ ಈರಣ್ಣನವರ ನೇತೃತ್ವದಲ್ಲಿ ಪಾರ್ಟಿಯ ಕೋರ್ ಕಮಿಟಿ ಸಭೆ ನಡೆಯಿತು.
ಈ ಸಭೆಯಲ್ಲಿ ಪಕ್ಷದ ಬಗ್ಗೆ ಈಗಾಗಲೇ ದೆಹಲಿ ಪಂಜಾಬ್ ಆಮ್ ಆದ್ಮಿ ಪಾರ್ಟಿ ಗೆದ್ದಿದೆ ಈಗ ಕರ್ನಾಟಕದಲ್ಲಿ ಸಹ ಹೊಸ ಅಲೆ ಎಬ್ಬಿರಿಸಿರುವುದು ನಮ್ಮ ರೈತರಿಗೆ ಬಹಳ ಸಂತೋಷವಾಗಿದೆ.
ಕ್ರೇಜಿವಾಲ್ ರವರು ಮಾಡಿರುವಂತ ಉತ್ತಮ ಕಾರ್ಯ ಚಟುವಟಿಕೆಗಳನ್ನು ಉಚಿತ ಶಿಕ್ಷಣ, ಉಚಿತ ನೀರು, ಜೀರೋ ಕರೆಂಟ್ ಬಿಲ್, ಮನೆ ಬಾಗಿಲುಗಳಿಗೆ ಸೇವೆಗಳು ಉತ್ತಮ ರಸ್ತೆಗಳು ಉಚಿತ ಬಸ್ ಪ್ರಯಾಣ ಹಾಗೂ ಇನ್ನಿತರ ಒಳ್ಳೆಯ ಕಾರ್ಯಗಳನ್ನು ಕ್ರೇಜಿವಾಲ್ ರವರು ಮಾಡಿರುವುದು ಒಳ್ಳೆಯ ಸಂದೇಶ.
ಹಾಗಾಗಿ ನಮ್ಮ ರೈತ ಬಾಂಧವರಲ್ಲಿ ಸಹ ಆಮ್ ಆದ್ಮಿ ಪಾರ್ಟಿಗೆ ಬೆಂಬಲವನ್ನು ಕೊಡೋಣ ಅಂತ ರೈತರಿಗೆ ಹೇಳಿದರು .
ಪಕ್ಷದ ಪ್ರಬಲ ಆಕಾಂಕ್ಷಿ ಆಗಿರುವ ಪಾಪಣ್ಣ ಅಪ್ಪಣ್ಣನವರು ಪಕ್ಷ ಸಂಘಟನೆಯಲ್ಲಿ ತಾಲೂಕಿನಲ್ಲಿ ಅರವಿಂದ ಕ್ರೇಜಿವಾಲ್ ಮಾಡಿರುವ ಕಾರ್ಯಗಳನ್ನು ಮೆಚ್ಚಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಈ ಸಭೆಯಲ್ಲಿ ತಾಲೂಕು ಕಾರ್ಯದರ್ಶಿ ಬಸವರಾಜ್ ವಡಹಳ್ಳಿ, ಉಪಾಧ್ಯಕ್ಷರು ವರವು ತಿಪ್ಪೇಸ್ವಾಮಿ, ಶಶಿಕುಮಾರ್. ವಿಜಯ್ ವಕೀಲರು ಅಂಬೇಡ್ಕರ್ ನಗರ ಶಿವಕುಮಾರ್, ಶ್ರೀಕಂಠಮೂರ್ತಿ ಅಧ್ಯಕ್ಷರು ರೈತ ಸಂಘ., ಹಾಗೂ ಇನ್ನಿತರ ಮುಖಂಡರು ದಾದಾಪೀರ್ ಮಂಜುನಾಥ್ ಓಬಯ್ಯ ಬಾಬು ಸುರೇಶ್ ಮಂಜುನಾಥ್ ವಸಿಮ್. ಓಬಳೇಶ್ ಅಂಬೇಡ್ಕರ್ ನಗರ ಇವರು ಪಾಲ್ಗೊಂಡಿದ್ದರು.