ಚಳ್ಳಕೆರೆ :
ತಾಳಿ ಕಟ್ಟುವ ವೇಳೆ ಮದುವೆ ನಿರಾಕರಿಸಿದ ವಧು
ಪ್ರಿಯಕರನನ್ನು ವರಿಸಿದಳು!
ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ವರ
ತಾಳಿ ಕಟ್ಟುವ ವೇಳೆ ವಧು ‘ನನಗೆ ಮದುವೆ ಬೇಡ” ಎಂದು ಹಠ
ಹಿಡಿದಿದ್ದರಿಂದ ಮದುವೆ ಮುರಿದು ಬಿದ್ದ ಪ್ರಸಂಗ ನಡೆದಿತ್ತು.
ಬೆಳಗ್ಗೆ
ಮದುವೆ ನಿಂತಿದ್ದು, ಸಂಜೆ ಅದೇ ಮಂಟಪದ ಆವರಣದಲ್ಲಿರುವ
ದೇವಾಲಯದಲ್ಲಿ ಯುವತಿ ಪ್ರೀತಿಸಿದ ಯುವಕನೊಂದಿಗೆ ದಾಂಪತ್ಯ
ಜೀವನಕ್ಕೆ ಕಾಲಿಟ್ಟಿದ್ದಾರೆ. ವಧು ಪಲ್ಲವಿ ಹಠದಿಂದ ಮದುವೆ
ಮುರಿದು ಬಿದ್ದು ಬೇಸರಗೊಂಡಿದ್ದ ವರ ವೇಣುಗೋಪಾಲ್
ಕುಟುಂಬದವರಿಗೆ ಪಲ್ಲವಿ ಕುಟುಂಬದವರು ಪೊಲೀಸರ
ಸಮ್ಮುಖದಲ್ಲಿ 1.75 ಲಕ್ಷ ರೂ. ಖರ್ಚು ಪರಿಹಾರ ನೀಡಿದ್ದಾರೆ.

