ಚಳ್ಳಕೆರೆ :
ಚಿತ್ರದುರ್ಗ: ಎರಡು ಸಾವಿರ ಮಕ್ಕಳಿಂದ ಮ್ಯಾರಥಾನ್
ಓಟ
ಚಿತ್ರದುರ್ಗ ದೇವರಾಜ್ ಅರಸು ಶಿಕ್ಷಣ ಸಂಸ್ಥೆ ವತಿಯಿಂದ ಇಂದು
ಕನಕ ವೃತ್ತದಲ್ಲಿ ಪಾಕ್ ಮೇಲೆ ಭಾರತ ನಡೆಸಿದ, ಆಪರೇಷನ್
ಸಿಂಧೂರ ಯಶಸ್ವಿಯಾದ ಹಿನ್ನೆಲೆ ಮ್ಯಾರಥಾನ್ ಓಟ
ಹಮ್ಮಿಕೊಂಡಿತ್ತು.
ದೇವರಾಜ್ ಅರಸು ಶಿಕ್ಷಣ ಸಂಸ್ಥೆಯ
ಸಂಸ್ಥಾಪಕರು ಹಾಗೂ ಶಾಸಕ ಎಂ ಚಂದ್ರಪ್ಪ, ಹಸಿರು ನಿಶಾನೆ
ತೋರಿಸುವ ಮೂಲಕ ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿದರು.
2 ಸಾವಿರ ವಿಧ್ಯಾರ್ಥಿಗಳು ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡಿದ್ದು
ಭಾರತ್ ಮಾತಾಕಿ ಜೈ ಎಂದು ಘೋಷಣೆಗಳನ್ನ ಹಾಕುತ್ತಾ,
ಮ್ಯಾರಥಾನ್ ನಲ್ಲಿ ಪಾಲ್ಗೊಂಡಿದ್ದರು.

