“ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಶ್ರೀದೇವಿಸ್ತುತಿ ಪಾರಾಯಣ”. ಚಳ್ಳಕೆರೆ-ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ “ಶ್ರೀದೇವಿಸ್ತುತಿ” ಪಾರಾಯಣ ಕಾರ್ಯಕ್ರಮ ನಡೆಯಿತು. ಈ ಸತ್ಸಂಗದ ಪ್ರಯುಕ್ತ ವಿಶೇಷ ಭಜನೆ ಮತ್ತು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮವನ್ನು ಶ್ರೀಮತಿ ಜಿ ಯಶೋಧಾ ಪ್ರಕಾಶ್ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಚಳ್ಳಕೆರೆಯ ಬನಶ್ರೀ ವೃದ್ಧಾಶ್ರಮದ ಸಂಸ್ಥಾಪಕರಾದ ಶ್ರೀಮತಿ ಮಂಜುಳಮ್ಮ ಅವರನ್ನು ಸತ್ಸಂಗ ಕೇಂದ್ರದ ಸದ್ಭಕ್ತರ ವತಿಯಿಂದ ಸನ್ಮಾನಿಸಿ-ಗೌರವಿಸಲಾಯಿತು. ಸತ್ಸಂಗ ಸಭೆಯಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಶಾಂತಮ್ಮ ಶಾಂತವೀರಪ್ಪ, ನಾಗರತ್ನಮ್ಮ,ಪ್ರತಿಭಾ,ಲೀನಾ,ಆದ್ಯ,ಶಿವನಿ, ವಿನುತ,ತನೋಜ್, ಸುಜಾತ,ಶಾರದಾಮ್ಮ, ವಿನೋದಮ್ಮ, ಯತೀಶ್ ಎಂ ಸಿದ್ದಾಪುರ,ಶೈಲಜ ಶ್ರೀನಿವಾಸ್, ರಶ್ಮಿ ವಸಂತ,ದ್ರಾಕ್ಷಾಯಣಿ ವಿಜಯೇಂದ್ರ, ವೀರಮ್ಮ ಬಸವರಾಜ, ಜಯಶೀಲಮ್ಮ, ವಿಜಯಲಕ್ಷ್ಮಿ, ಜಯಮ್ಮ,ನಿಖಿಲೇಶ್ ಯಾದವ್ ಇದ್ದರು.

