ಚಳ್ಳಕೆರೆ ನಗರದ ಛೇಂಬರ್ ಆಪ್ ಕಾಮರ್ಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮುಖ್ಯ ಶಿಕ್ಷಕರುಗಳಿಗೆ ಅಭಿನಂದನೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕರ ಹಾಗು ನಿವೃತ್ತ ಶಿಕ್ಷಕರುಗಳಿಗೆ ಸನ್ಮಾನ ಸಮಾರಂಭವನ್ನು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಉದ್ಘಾಟನೆ ಮಾಡಿದರು.
ನಂತರ ಮಾತನಾಡಿ ರಾಜ್ಯದಲ್ಲಿ 18ನೇ ಸ್ಥಾನ ಫಲಿತಾಂಶ ಪಡೆದ ಚಳ್ಳಕೆರೆ ಮುಂದಿನ ದಿನಗಳಲ್ಲಿ ಒಂದನೇ ಸ್ಥಾನ ಪಡೆಯಬೇಕು
ಶಿಕ್ಷಣ ಎಂಬ ಸಮುದ್ರದಲ್ಲಿ ಯಾವ ಮಕ್ಕಳು ಈಜಿ ದಡ ಸೇರುವವರು ಅವರು ಉನ್ನತ ಹುದ್ದೆ ಪಡೆಯುವವರು, ಶಿಕ್ಷಣ ಕ್ಷೇತ್ರ ರಾಜಕೀಯವಾಗಿ ಮಲೀನ ಗೊಂಡಿದೆ ಆದರೂ ಕೂಡ ಮಕ್ಕಳಿಗೆ ವಿದ್ಯಾರ್ಜನೆ ನೀಡುವಲ್ಲಿ ಮುಂದಿದೆ
ಪ್ರಸ್ತುತ ೯೭% ರಷ್ಟು ಫಲಿತಾಂಶ ಬಂದಿದೆ ಆದ್ದರಿಂದ ತಾಲೂಕಿನ ಎಲ್ಲಾ ಶಿಕ್ಷಕ ವೃಂಧದವರಿಗೆ ಅಭಿನಂದನೆ ಸಲ್ಲಿಸುತ್ತೆನೆ. ಜಿಲ್ಲೆಯಲ್ಲಿ ಇಬ್ಬರು 625 ಕ್ಕೆ 625 ಅಂಕ ಪಡೆಯುವ ಮೂಲಕ ತಾಲೂಕಿಗೆ ಕಿರ್ತಿ ತಂದಿದ್ದಾರೆ
ಚಳ್ಳಕೆರೆ ತಾಲೂಕಿನ99 ಶಾಲೆಗಳಲ್ಲಿ51 ಶಾಲೆಗಳಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಪ್ರಗತಿ ಕಂಡಿರುವುದು ಶ್ಲಾಘನೀಯ ಎಂದರು.
ಇನ್ನೂ ಬಿಇಓ ಕೆ.ಎಸ್. ಸುರೇಶ್ ಮಾತನಾಡಿ ತಾಲ್ಲೂಕಿನಲ್ಲಿ 99 ಪ್ರೌಢಶಾಲೆಗಳು ಮಕ್ಕಳಿಗೆ ಶಿಕ್ಷಣವನ್ನು ಒದಗಿಸುತ್ತಿವೆ, ಈ ಶಾಲೆಗಳ ಶೈಕ್ಷಣಿಕ ಪ್ರಗತಿಗೆ ಶಾಸಕ ಟಿ.ರಘುಮೂರ್ತಿ ಅವರು ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸಿದ್ದಾರೆ ಎಂದರು….
ತಾಲ್ಲೂಕಿನಲ್ಲಿ 4911 ಎಸ್ಎಸ್ ಎಲ್ ಸಿ ಮಕ್ಕಳಲ್ಲಿ 3220 ಮಕ್ಕಳು ಎ ಮತ್ತು ಬಿ.ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ, ಶೇ.100 ರಷ್ಟು ಫಲಿತಾಂಶವನ್ನು 50 ಶಾಲೆಗಳು ಪಡೆದುಕೊಂಡಿವೆ ಎಂದು ಹೇಳಿದರು…
ಎನ್ ಎಂಎನ್‌ಎಸ್ ಪರೀಕ್ಷೆ ಯಲ್ಲಿ ಕಳೆದ ಬಾರಿ 17 ಮಕ್ಕಳು ತೇರ್ಗಡೆಯಾಗಿದ್ದರು, ಈ ಬಾರಿ 23 ಮಕ್ಕಳು ಉತ್ತೀರ್ಣರಾಗಿದ್ದಾರೆ, ಇವರಿಗೆ 4 ವರ್ಷಗಳ ಕಾಲ ವಿದ್ಯಾರ್ಥಿ ವೇತನ ಸಿಗತ್ತದೆ ಎಂದರು….
ಈ ಸಮಾರಂಭದಲ್ಲಿ ನಗರಸಭೆ ಸದಸ್ಯ ಸುಮಕ್ಕ, ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀನಿವಾಸ್, ಕಸಾಪ ತಾಲ್ಲೂಕು ಅದ್ಯಕ್ಷ ವೀರಭದ್ರಸ್ವಾಮಿ, ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿಗಳು ಎನ್.ಆರ್. ತಿಪ್ಪೇಸ್ವಾಮಿ, ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಪಿ.ಪಾಲಯ್ಯ, ಖಜಾಂಚಿ ನಜೀರ್ ಅಹಮ್ಮದ್, ಶಿಕ್ಷಕ ಗೋವಿಂದಪ್ಪ, ಅಕ್ಷರ ದಾಸೋಹ ತಿಪ್ಪೇಸ್ವಾಮಿ, ಸೇರಿದಂತೆ ಮುಂತಾದವರು ಇದ್ದರು…
ಕೊನೆಯಲ್ಲಿ ಮುಖ್ಯ ಶಿಕ್ಷಕರುಗಳಿಗೆ ಅಭಿನಂದನೆ ಮತ್ತು
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಸನ್ಮಾನಿಸಿದರು..