ಚಳ್ಳಕೆರೆ :
ಮತದಾನದ ಹಕ್ಕನ್ನು ನೀಡಿದವರು ಡಾ. ಬಿಆರ್ ಅಂಬೇಡ್ಕರ್ ಮಹಿಳೆಯರಿಗೆ ಉನ್ನತ ಸ್ಥಾನಮಾನಗಳನ್ನು ನೀಡಿದವರು ಡಾ. ಅಂಬೇಡ್ಕರ್ ಮತಪೆಟ್ಟಿಗೆಯಲ್ಲಿ ರಾಜನ ಹುಟ್ಟುತ್ತಾನೆ ಎನ್ನುವ ಕನಸು ಕಂಡಿದ್ದಂತವರು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಅವರು ಚಳ್ಳಕೆರೆ ನಗರದ ವೆಂಕಟೇಶ್ವರ ನಗರದಲ್ಲಿ ನಡೆದ ಶ್ರೀ ಡಾ. ಬಿ.ಆರ್.ಅಂಬೇಡ್ಕರ್ ರವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಡಾ. ಬಿಆರ್ ಅಂಬೇಡ್ಕರ್ ಸಮಾಜದ ಎಲ್ಲ ತರದ ಜನಗಳಿಗೆ ಅಂಬೇಡ್ಕರ್ ಅವರು ಸಂವಿಧಾನದ ಮುಖಾಂತರ ಸೌಲತ್ತು ಒದಗಿಸಿದವರು ಆದರೆ ಅಂಬೇಡ್ಕರ್ ರವರನ್ನು ಶೋಷಿತ ಸಮುದಾಯಕ್ಕೆ ಮಾತ್ರ ಕಟ್ಟುಪಾಡಿಗೆ ಒಳಪಡಿಸಿರುವುದು ದುರ್ದೈವದ ಸಂಗತಿ ಎಂದರು.

ಅಂಬೇಡ್ಕರ್ ಹುಟ್ಟಿನಿಂದ ಸ್ವಾತಂತ್ರದ ಪೂರ್ವದವರೆಗೆ ಅಸ್ಪೃಶ್ಯತೆ ಅವಮಾನ ಮತ್ತು ಅಸಮಾನತೆಯ ನೋವುಂಡು ಮುಂದೆ ರಾಜ್ಯಾಂಗದ ಮೂಲಕ ಯೋಜಿತರಿಗೆ ಬಡವರಿಗೆ ಮತ್ತು ಅಸಹಾಯಕರಿಗೆ ಅಮೃತವನ್ನು ನೀಡಿದಂತವರು ಪ್ರತಿ ಮನೆ ಪ್ರತಿ ಗ್ರಾಮ ಪ್ರತಿ ಕಚೇರಿಗಳಲ್ಲಿ ಅಂಬೇಡ್ಕರ್ ಫೋಟೋಗಳಿವೆ ವಿಶ್ವದಲ್ಲಿ ಅವರಂತ ಮೇಧಾವಿ ಮತ್ತೊಬ್ಬರಿಲ್ಲ ಅಂತ್ಯದ ದಿನಗಳಲ್ಲಿ ಸರ್ಕಾರ ಮತ್ತು ಸಮಾಜ ಅವರನ್ನು ನಡೆಸಿಕೊಂಡಿರುವ ರೀತಿ ಅವರನ್ನು ತುಂಬಾ ಅಧೀರರನ್ನಾಗಿ ಮಾಡಿತ್ತು ಇದನ್ನು ಅವರ ಜೀವನ ಚರಿತ್ರೆಯಲ್ಲಿ ಕಾಣಬಹುದು ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಗ್ಯಾರೆಂಟಿ ಸಮಿತಿಯ ಅಧ್ಯಕ್ಷರಾದ ಗದ್ದಿಗೆ ತಿಪ್ಪೇಸ್ವಾಮಿ, ತಾಲ್ಲೂಕು ಪಂಚಾಯತ್ ಕೆಡಿಪಿ ನಾಮ ನಿರ್ದೇಶನ ಸದಸ್ಯರಾದ ರಮೇಶ್, ನಗರಸಭೆ ಅಧ್ಯಕ್ಷರಾದ ಮಂಜುಳಾ ಆರ್ ಪ್ರಸನ್ನಕುಮಾರ್, ಉಪಾಧ್ಯಕ್ಷರಾದ ಕವಿತಾ ಬೋರಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ್, ಸದಸ್ಯರುಗಳಾದ ಸುಮಾ ಭರಮಯ್ಯ, ರಮೇಶ್ ಗೌಡ, ಮುಖಂಡರುಗಳಾದ ಕೃಷ್ಣಮೂರ್ತಿ, ಹೊನ್ನುರುಸ್ವಾಮಿ, ಶಿವಮೂರ್ತಿ, ಶಿವಸ್ವಾಮಿ, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!