“ಆಸೆಯೇ ದುಃಖಕ್ಕೆ ಮೂಲ ಎಂದು ಸಾರಿದ ಮಹಾತ್ಮ ಗೌತಮ ಬುದ್ಧ”-ಶ್ರೀಮತಿ ಜಿ.ಯಶೋಧಾ ಪ್ರಕಾಶ್ ಅಭಿಪ್ರಾಯ.
ಚಳ್ಳಕೆರೆ-ಆಸೆಯೇ ದುಃಖಕ್ಕೆ ಮೂಲ ಎಂದು ಸಾರಿದ ಮಹಾತ್ಮ ಗೌತಮ ಬುದ್ಧ ಎಂದು ಚಳ್ಳಕೆರೆಯ ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅಭಿಪ್ರಾಯಪಟ್ಟರು. ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ “ಬುದ್ಧ ಪೂರ್ಣಿಮೆ”ಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಭಗವಾನ್ ಬುದ್ಧನ ಜೀವನ ಮತ್ತು ಸಂದೇಶಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.ಬುದ್ಧನ ಜೀವನ ಮತ್ತು ಸಂದೇಶಗಳು ಇಂದಿಗೂ ಮಾರ್ಗದರ್ಶಿಯಾಗಿದ್ದು ಅವುಗಳ ಅನುಸರಣೆಯಿಂದ ನೆಮ್ಮದಿಯ ಬದುಕು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರು ಮತ್ತು ಮಕ್ಕಳು ಬುದ್ಧನಿಗೆ ಸಂಬಂಧಿಸಿದ ಕವನ ಮತ್ತು ಕಥೆಗಳನ್ನು ಹೇಳಿದರು. ಈ ಸತ್ಸಂಗ ಕಾರ್ಯಕ್ರಮದ ಪ್ರಯುಕ್ತ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿ ಸ್ತುತಿ ಪಠಣ, ವಿಶೇಷ ಭಜನೆ ಮತ್ತು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮ ನಡೆಯಿತು. ಈ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಟಿ.ಎಂ.ವಿಜಯಕಲಾ ಗುರುಲಿಂಗಪ್ಪ, ನಾಗರತ್ನಮ್ಮ, ಶಾರದಾಮ್ಮ, ಸಂಗೀತ ವಸಂತಕುಮಾರ್, ಭ್ರಮರಂಭಾ, ಸೌಮ್ಯ ಪ್ರಸಾದ್, ರಶ್ಮಿ ವಸಂತ, ರಶ್ಮಿ ರಮೇಶ್, ಯತೀಶ್ ಎಂ ಸಿದ್ದಾಪುರ,ಶೈಲಜ ಶ್ರೀನಿವಾಸ್ ,ವೀರಮ್ಮ ಬಸವರಾಜ,ಅನ್ವಿತ, ಹರ್ಷಿತಾ,ಮನಸಿರಿ, ವಿಕ್ರಮ್,ಧ್ರುವ ನಾರಾಯಣ, ನಿಖಿಲೇಶ್ ಯಾದವ್, ಪ್ರತೀಕ್ಷಾ, ಯುಕ್ತ, ಸಮರ್ಥ್,ಮನ್ವಿತ್ ಇದ್ದರು.

