ಚಿತ್ರದುರ್ಗ : ಮೊಳಕಾಲ್ಕೂರ್ ತಾಲ್ಲೂಕಿನ
ನಾಗಸಮುದ್ರ ಗ್ರಾಮದ ಪರಿಶಿಷ್ಟ ಜಾತಿಯ ಯುವತಿ
ಅಂಜಲಿ ಆತ್ಮಹತ್ಯೆ ಸಾವಿಗೆ ಸೂಕ್ತ ನ್ಯಾಯವನ್ನು
ಪೊಲೀಸ್ ಇಲಾಖೆ ಒದಗಿಸಿ ಕೊಡಬೇಕೆಂದು ರಾಜ್ಯ ರೈತ
ಸಂಘ ಹಸಿರು ಸೇನೆ ಡಾ. ವಾಸುದೇವ್ ಮೇಟಿ ಬಣದ
ಹೋಬಳಿ ಅಧ್ಯಕ್ಷ ಡಾ. ನಾಗರಾಜ್ ಮೀಸೆ ಒತ್ತಾಯ
ಮಾಡಿದರು.


ಪಟ್ಟಣದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ
ಅವರು ಚಿತ್ರದುರ್ಗ ಜಿಲ್ಲೆ, ಮೊಳಕಾಲೂರು ತಾಲ್ಲೂಕಿನ
ನಾಗಸಮುದ್ರ ಗ್ರಾಮದ ವೆಂಕಟೇಶ್ ಎಂಬುವರ ಪುತ್ರಿ
ಅಂಜಲಿ, ರಾಂಪುರ ಹತ್ತಿರದ ಕೆರೆಕೊಂಡಾಪುರ ಗ್ರಾಮದ
ಯುವಕ ಭಾರ್ಗವ್ ರೆಡ್ಡಿ ಕಳೆದ ಎರಡು ವರ್ಷಗಳಿಂದ
ಇಬ್ಬರು ಪ್ರೀತಿಸುತ್ತಿದ್ದರು. ಯುವತಿ ಅಂಜಲಿ ಲ್ಯಾಪ್
ಟೆಕ್ನಿಷಿಯನ್ ಆಗಿದ್ದರೆ, ಯುವಕ ಭಾರ್ಗವ್ ರೆಡ್ಡಿ
ಇಂಜಿನಿಯರ್ ಆಗಿ ಇಬ್ಬರೂ ಬೆಂಗಳೂರಿನಲ್ಲಿ ಕೆಲಸ
ಮಾಡುತ್ತಿದ್ದರು. ಅಲ್ಲೇ ಇಬ್ಬರ ನಡುವೆ ಪ್ರೀತಿ ಕೂಡ
ಶುರುವಾಗಿತ್ತು. ಕಳೆದ ಎರಡು ದಿನಗಳ ಹಿಂದೆ ಜಾತಿ
ಕಾರಣ ಹೇಳಿ ಆರೋಪಿ ಭಾರ್ಗವ್ ರೆಡ್ಡಿ ಯುವತಿಯನ್ನು
ದೂರ ಮಾಡಿದ್ದು.ಪರಿಶಿಷ್ಟ ಜಾತಿ ಯುವತಿ ಎಂಬ ಕಾರಣ
ನೀಡಿ ಮದುವೆಗೆ ನಿರಾಕರಿಸಿದ್ದರಿಂದ ಯುವತಿ ಅಂಜಲಿ
ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು
ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಪ್ರೀತಿ ಹೆಸರಲ್ಲಿ ವಂಚಿಸಿ ಯುವತಿ ಅಂಜಲಿಯನ್ನು ಬಲಿ
ಪಡೆದ ಆರೋಪಿ ಭಾರ್ಗವ್ ರೆಡ್ಡಿಯನ್ನು ಪೊಲೀಸ್
ಅಧಿಕಾರಿಗಳು ಬಂಧಿಸಿ ಸೂಕ್ತ ನ್ಯಾಯವನ್ನು
ಒದಗಿಸಿದಾಗ ಮಾತ್ರ ಅಂಜಲಿ ಆತ್ಮಕ್ಕೆ ಶಾಂತಿ
ದೊರೆಯಲಿದೆ ಎಂದು ಹೇಳಿದರು.

About The Author

Namma Challakere Local News
error: Content is protected !!