ಯುವ ಪೀಳಿಗೆಗೆ ಜಾನಪದ ಕಲೆ ಸಂಸ್ಕೃತಿ ಪರಿಚಯಿಸಲು ಜಾನಪದ ಉತ್ಸವ ಕಾರ್ಯಕ್ರಮ ಸಹಕಾರಿ: ಶಾಸಕ ಟಿ. ರಘುಮೂರ್ತಿ
ಚಳ್ಳಕೆರೆ: ವಿದ್ಯಾರ್ಥಿಗಳಿಗೆ ಜಾನಪದ ಕಲೆ ಸಂಸ್ಕೃತಿ ಸಾಹಿತ್ಯವನ್ನು ಪರಿಚಯಿಸುವುದಕ್ಕಾಗಿ ಸರ್ಕಾರ ಜಾನಪದ ಉತ್ಸವ 2025 ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳು ಭಾರತೀಯ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿಯನ್ನು ಹೊರಬೇಕು ಎಂದು ಶಾಸಕ ಟಿ ರಘುಮೂರ್ತಿ ತಿಳಿಸಿದರು.
ನಗರದ ಹೆಚ್‍ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಇಂದು ಗ್ರಾಮೀಣ ಭಾಗದ ಕ್ರೀಡೆ ನಾಟಕ ಕಲೆ ಸಂಸ್ಕೃತಿಗಳಲ್ಲಿ ಭಾಗವಹಿಸದೆ ಕೇವಲ ಮೊಬೈಲ್ ಗಳಿಗೆ ಸೀಮಿತವಾಗಿದ್ದು ಆಧುನಿಕತೆಯ ಭರಾಟೆಯಲ್ಲಿ ಮುಳುಗಿ ಹೋಗಿರುವುದರಿಂದ ಸರ್ಕಾರ ಪದವಿ ಕಾಲೇಜುಗಳಲ್ಲಿ ಜಾನಪದ ಉತ್ಸವದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಇಂದಿನ ಯುವ ಪೀಳಿಗೆಗೆ ಭಾರತದ ಕಲೆಗಳನ್ನು ಪರಿಚಯಿಸಲು ಹೊರಟಿದೆ ಸಿನಿಮಾಗಳಲ್ಲಿ ಈ ಹಿಂದೆ ಸಮಾಜಕ್ಕೆ ಸಂದೇಶ ಸಾರುವ ಮೌಲ್ಯವುಳ್ಳ ಚಲನಚಿತ್ರಗಳು ಬರುತ್ತಿದ್ದವು. ಆದರೆ ಈಗ ಕೇವಲ ಕ್ರೌರ್ಯದಂತಹ ಸನ್ನಿವೇಶಗಳಿಗೆ ಸಿನಿಮಾಗಳು ಸೀಮಿತವಾಗಿವೆ ಇದರಿಂದ ಯುವಜನತೆ ಹೆಚ್ಚು ಪ್ರಭಾವಿತಗಳ್ಳುತ್ತಿದ್ದು ಇದರಿಂದ ಹೊರಬಂದು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೆ ಅವರ ಪ್ರತಿಭೆಯನ್ನು ಹೊರ ತರಲು ಸಹಕಾರಿಯಾಗಲಿದೆ ಮುಂದಿನ ದಿನಗಳಲ್ಲಿ ಕಾಲೇಜಿನ ಆವರಣದಲ್ಲಿ ಸ್ವಸಜ್ಜಿತವಾದ ರಂಗಮಂದಿರವನ್ನು ನಿರ್ಮಿಸಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಮಂಜುನಾಥ್ ಗ್ರಾಮೀಣ ಪ್ರದೇಶದ ಕಲೆಗಳು ಜೀವಂತವಾಗಿ ಇರಬೇಕಾದರೆ ಯುವ ಪೀಳಿಗೆ ನಾಟಕಗಳಲ್ಲಿ ಪಾಲ್ಗೊಳ್ಳುವುದು ಹಾಗೂ ಹೆಚ್ಚಿನ ಅಧ್ಯಯನದಲ್ಲಿ ತೊಡಗುವ ಮೂಲಕ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು ಕೇವಲ ಪಠ್ಯ ಚಟುವಟಿಕೆಗಳಿಗೆ ಮನ್ನಣೆ ನೀಡುವುದಲ್ಲದೆ ಇಂತಹ ಸಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಾಗ ಅವರಲ್ಲಿನ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯವಾಗುತ್ತದೆ ಸರ್ಕಾರ ಜಾನಪದ ಸಂಸ್ಕೃತಿ ನಶಿಸಿ ಹೋಗದಿರಲು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಸ್ವಾಗತಾರ್ಹವಾಗಿದೆ ಎಂದು ತಿಳಿಸಿಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಜಾನಪದ ಹಾಗೂ ಲಂಬಾಣಿ ನೃತ್ಯಗಳು ಸೇರಿದಂತೆ ವಿಭಿನ್ನ ರೀತಿಯ ಮನೋರಂಜನ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿನಗರ ಸಭೆ ಅಧ್ಯಕ್ಷೆ ಮಂಜುಳಾ ಪ್ರಸನ್ನ ಕುಮಾರ್ ಉಪಾಧ್ಯಕ್ಷೆ ಕವಿತಾ ಬೋರಯ್ಯ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಪ್ರಕಾಶ್ ಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ, ನಗರಸಭೆ ಸದಸ್ಯರಾದ ರಮೇಶ್ ಗೌಡ, ಸುಮಾ ಭರಮಯ್ಯ, ರಾಘವೇಂದ್ರ, ಸುಜಾತ ಪ್ರಹ್ಲಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಭದ್ರಯ್ಯ, ಶಶಿಧರ್ ಹಾಗೂ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಶಿಕ್ಷಕರು ಉಪಸ್ಥಿತರಿದ್ದರು,

