ಸರ್ಕಾರ ಕಾರ್ಮಿಕರಿಗೆ ಸೂರು ಕಲ್ಪಿಸಿ ಕರ್ನಾಟಕ ಸೇಟ್ ಕನ್ ಸಕ್ಷನ್ ವರ್ಕರ್ ಸೆಂಟ್ರಲ್ ಯೂನಿಯನ್ ಮಾಜಿ ಕಾರ್ಯದರ್ಶಿ ಟಿ ಬಸಪ್ಪ ನಾಯಕ.
ನಾಯಕನಹಟ್ಟಿ ಪಟ್ಟಣದಲ್ಲಿ ಸಂಭ್ರಮದ ಕಾರ್ಮಿಕರ ದಿನ ಆಚರಣೆ
ನಾಯಕನಹಟ್ಟಿ:: ಕಾರ್ಮಿಕರಿಗೆ ಪಟ್ಟಣದಲ್ಲಿ ಪ್ರತ್ಯೇಕ ಲೇಔಟ್ ಮಾಡಿ ಕಾರ್ಮಿಕರ ಬಡಾವಣೆ ಎಂದು ನಾಮಕರಣ ಮಾಡಬೇಕು ಎಂದು ಕರ್ನಾಟಕ ಸೇಟ್ ಕನ್ ಸಕ್ಷನ್ ವರ್ಕರ್ ಸೆಂಟ್ರಲ್ ಯೂನಿಯನ್ ಮಾಜಿ ಕಾರ್ಯದರ್ಶಿ ಟಿ ಬಸಪ್ಪ ನಾಯಕ ಹೇಳಿದ್ದಾರೆ.
ಗುರುವಾರ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಕರ್ನಾಟಕ ಸೇಟ್ ಕನ್ ಸಕ್ಷನ್ ವರ್ಕರ್ ಸೆಂಟ್ರಲ್ ಯೂನಿಯನ್ ವತಿಯಿಂದ ಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ನಾಯಕನಹಟ್ಟಿ ಹೋಬಳಿಯ ಕಟ್ಟಡ ಹಾಗೂ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರು ಕೂಡಿ ಸರ್ಕಾರದ ಆದೇಶದಂತೆ ಮೇ 1ರಂದು ಪ್ರತಿ ವರ್ಷ ಎಲ್ಲಾ ಕಾರ್ಮಿಕರು ಸೇರಿ ಪಟ್ಟಣದಲ್ಲಿ ಕಾರ್ಮಿಕರ ದಿನಾಚರಣೆಯನ್ನು ಸಿಹಿ ಹಂಚಿ ಸಂಭ್ರಮದಿಂದ ಆಚರಿಸುತ್ತೇವೆ. ಕಾರ್ಮಿಕರಿಗೆ ಇತ್ತೀಚಿನ ದಿನಗಳಲ್ಲಿ ಸರ್ಕಾರ ಅನೇಕ ಸೌಲಭ್ಯವನ್ನು ನೀಡುತ್ತದೆ ಆದರೆ ಗ್ರಾಮೀಣ ಪಟ್ಟಣ ಪ್ರದೇಶದ ಕಾರ್ಮಿಕರಿಗೆ ನಿವೇಶನ ಇಲ್ಲ ಕಾರ್ಮಿಕರಿಗೆ ಪ್ರತೀಕ ಲೇಔಟ್ ಮಾಡಿ ಕಾರ್ಮಿಕರ ಬಡಾವಣೆ ಎಂದು ನಾಮಕರಣ ಮಾಡಬೇಕು.
ಕೆಲವು ಕೂಲಿ ಕಾರ್ಮಿಕರಿಗೆ ಮನೆಗಳು ಇಲ್ಲ ಸರ್ಕಾರ ಕೂಡಲೇ ಪಟ್ಟಣದಲ್ಲಿ ಕಾರ್ಮಿಕರಿಗೆ ನಿವೇಶ ಕಲ್ಪಿಸಬೇಕು ಮತ್ತು 10 ಎಕರೆ ಜಮೀನನ್ನು ಮೀಸಲಿಡಬೇಕು. ಕಾರ್ಮಿಕರು ಪಟ್ಟಣದಲ್ಲಿ ಸಣ್ಣಪುಟ್ಟ ಮನೆಗಳನ್ನು ಕಟ್ಟಿಕೊಂಡಿದ್ದಾರೆ ಆದರೆ ಸರ್ಕಾರ ಅಕ್ರಮ ಸಕ್ರಮ ಯೋಜನೆ ಅಡಿ ಪಟ್ಟಣದಲ್ಲಿ ಒಂದು ಲಕ್ಷದಿಂದ ಎರಡು ಲಕ್ಷದವರೆಗೆ ಕಂದಾಯ ಹಣವನ್ನು ಪಟ್ಟಣ ಪಂಚಾಯತಿಯಲ್ಲಿ ಕಟ್ಟಬೇಕು ಆದ್ದರಿಂದ ಕಾರ್ಮಿಕರಿಗೆ ಸರ್ಕಾರ ಕಂದಾಯದಲ್ಲಿ ಪರ್ಸೆಂಟೇಜ್ ಕಡಿಮೆ ಮಾಡಬೇಕು ಶೇಕಡ ಅರ್ಧದಷ್ಟು ಡಿಸ್ಕೌಂಟ್ ಕೊಡಬೇಕು ಎಂದು ಪಟ್ಟಣ ಪಂಚಾಯತಿಯ ಅಧ್ಯಕ್ಷರಿಗೆ ಮುಖ್ಯ ಅಧಿಕಾರಿಗಳಲ್ಲಿ ಮನವಿ ಮಾಡುತ್ತೇನೆ ಎಂದರು.
ಇದು ವೇಳೆ ಕರ್ನಾಟಕ ಸೇಟ್ ಕನ್ ಸಕ್ಷನ್ ವರ್ಕರ್ ಸೆಂಟ್ರಲ್ ಯೂನಿಯನ್ ಅಧ್ಯಕ್ಷ ಬಿ ತಿಪ್ಪೇಸ್ವಾಮಿ ಮಾತನಾಡಿದರು ಪ್ರತಿ ವರ್ಷ ಮೇ 1ರಂದು ಕಾರ್ಮಿಕರ ದಿನಾಚರಣೆ ಆಚರಿಸುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಉಪಾಧ್ಯಕ್ಷ ಎನ್. ಸಿ. ತಿಪ್ಪೇಸ್ವಾಮಿ, ಸಂಘಟಿಕ ಕಾರ್ಯದರ್ಶಿ ಅಬ್ಜಲ್, ಸೈಯದ್ ದಾದಾಪೀರ್, ರೆಹ್ಮತ್ ತುಲಾ, ಜಾಗನೂರಹಟ್ಟಿ ತಿಪ್ಪೇಸ್ವಾಮಿ, ಓಬಯ್ಯನಹಟ್ಟಿ ನಾಗಭೂಷಣ್, ಗೌಡಗೆರೆ ಅರ್ಜುನ್, ಸೇರಿದಂತೆ ಹೋಬಳಿ ಮಟ್ಟದ ಕಾರ್ಮಿಕ ಬಂಧುಗಳು ಇದ್ದರು

