ಚಳ್ಳಕೆರೆ :

ಕೇಂದ್ರ ರಾಜ್ಯ ಸರ್ಕಾರ ಗಳು ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಲು ಒತ್ತಾಯ.

ಚಳ್ಳಕೆರೆ ಸಿಐಟಿಯುನ ನೇ ತೃತ್ವದಲ್ಲಿ ಕಾರ್ಮಿಕ ಸಂಘಟನೆಗಳು ಮೇ 1ರಂದು ಕಾರ್ಮಿಕರ ದಿನಾಚರಣೆಯನ್ನು ಹಮ್ಮಿ ಕೊಳ್ಳಲಾಗಿತ್ತು. ಕಾರ್ಮಿಕರ ಧ್ವಜಾರೋಹಣವನ್ನು ಸಿಐಟಿಯು ನ ತಾಲ್ಲೂಕು ಅಧ್ಯಕ್ಷರಾದ ಟಿ. ನಿಂಗಣ್ಣ ನವರು ನೇರವಾಹಿದರು. ಪ್ರಧಾನ ಕಾರ್ಯದರ್ಶಿಯಾದ ಟಿ. ತಿಪ್ಪೇಸ್ವಾಮಿ ರವರು ಮಾತನಾಡುತ್ತ ಕಾರ್ಮಿಕರು ಸುಮಾರು ವರ್ಷಗಳ ಹಿಂದೆ ತಮ್ಮ ಸೌಲಭ್ಯಗಳ ಕಾನೂನುಗಳನ್ನು ಪಡೆಯುವುದಕ್ಕೆ ಕಾರ್ಮಿಕರು ಪ್ರಾಣ ಬಲಿದಾನ ದಿಂದ ಪಡೆದುಕೊಂಡಿದ್ದರು, ಆದರೆ ಈಗ 3ಬಾರಿ ಗೆದ್ದ ಕೇಂದ್ರದ ಬಿಜೆಪಿ ಮೋದಿ ಸರ್ಕಾರ 49ಕಾರ್ಮಿಕರ ಪರವಾಗಿದ್ದಂತ ಕಾನುನೂ ಗಳನ್ನು ಸಂವಿಧಾನ ವಿರುದ್ಧವಾಗಿ ಬಂಡವಾಳ ಶಾಹಿಗಳ ಹಾಗೂ ಕಾರ್ಪೋರೆಟ್, ಶ್ರೀಮಂತರ ಲಾಭಕ್ಕಾಗಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರುವ ಮೂಲಕ ದುಡಿಯುವ ಜನರ ಮೇಲೆ ಅತುರಾತುರವಾಗಿ ಅದನ್ನು ಹೆರಲು ಹವಣಿಸುತ್ತಿದೆ. ಆ ಮೂಲಕ ಹಾಲಿ ಇರುವ ಹಕ್ಕುಗಳು ಮತ್ತು ಸಾವಳತ್ತಗಳನ್ನು ಕಾಸಿಯಲು ಹೊರಟಿದೆ. ಇದನ್ನು ಸಿಐಟಿಯು ತೀವ್ರವಾಗಿ ವಿರೋಧಿಸುತ್ತದೆ. ಮುಂದುವರಿದು ಮಾತನಾಡುತ್ತಾ ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರ ಪ್ಯಾಕ್ಟರಿಸ್ಸ್ ಆಕ್ಟ್ ಗೆ ತಿದ್ದುಪಡಿ ತಂದು ಕೆಲಸದ ಅವಧಿಯನ್ನು ಹೆಚ್ಚಳ ಮಾಡಿರುವ ಕಾನುನೂ ಈಗಿನ ಕಾಂಗ್ರೆಸ್ ಸರ್ಕಾರ ಹಿಂಪಾಡಿಯಬೇಕಾಗಿತ್ತು ಆದರೆ ಸಿದ್ದರಾಮಯ್ಯ ಸರ್ಕಾರ ಕೊಡ ಶ್ರೀಮಂತರ ಪರವಾಗಿ ಕೆಲ ಸಮಾಡುತ್ತಿದೆ.ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರ ಒಂದು ನಾಣ್ಯಕ್ಕೆ ಎರಡು ಮುಖ ಇರುವಾಗೆ, ಈ ಎರಡೂಕ್ಕು ವೆತ್ಯಾಸವೇನೂಇಲ್ಲ ಬಡವರನ್ನು ರಕ್ತ ಹಿರುವ ಸರ್ಕಾಗಳು ಎಂದು ಆರೋಪ ಮಾಡಿದರು. ಆದ್ದರಿಂದ ಈ ಸರ್ಕಾರಗಳು ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರಾದ್ದುಪಡಿಸಬೇಕು, ಬೆಲೆ ಏರಿಕೆಯನ್ನು ಇಳಿಸಬೇಕು, ಕನಿಷ್ಠ ವೇತನ ರೂ 36 ಸಾವಿರ ನೀಡಬೇಕಕು, ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಲು ಒತ್ತಾಯಿಸಿ ಬರುವ ಮೇ 20ರಂದು ಅಖಿಲ ಭಾರತ ಮುಷ್ಕರದಲ್ಲಿ ನಮ್ಮ ಕೆಲ್ಸಗಳನ್ನು ಸ್ಥಾಗಿತ್ತಾಗೊಳಿಸಿ ಮುಷ್ಕರ ನಡೆಸಲಾಗುತ್ತದೆ ಎಂದು ಬಹಿರಂಗ ಸಭೆಯಲ್ಲಿ ಸರ್ಕಾರಕ್ಕೆ ಒತ್ತಾಹಿಸಿದರು. ಈ ಕಾರ್ಯಕ್ರಮದಲ್ಲಿ ಹೆಚ್. ಓ. ನಾಗರಾಜ್, ದುರ್ಗಾವರ ಬೋರಯ್ಯ, ಈ. ನಾಗರಾಜ್, ಸೂಪರ್. ರಾಜಣ್ಣ, ಸತೀಶ್, ರೆಡ್ಡಿಹಳ್ಳಿ ನಾಗೇಶ್, ಕೆ. ನಾಗರಾಜ್, ಬಿ.ಒಬ್ಬಯ್ಯ, ಕೇರಗಳಹಳ್ಳಿ ನಾಗೇಶ್, ಚಿತ್ತಪ್ಪ, ಕೆ. ಪ್ರಭು ಇನ್ನೂ ಮುಂತಾದ ಮುಖಂಡರು ಭಾಗವಹಿಸಿದ್ದರು.

About The Author

Namma Challakere Local News
error: Content is protected !!