ಚಳ್ಳಕೆರೆ :
ಹಿರಿಯೂರು: ಮರಗಳ ಮಾರಣ ಹೋಮ ಖಂಡಿಸಿ
ಪ್ರತಿಭಟನೆ
ಮೈಸೂರಿನ ಹೈದರಾಲಿ ರಸ್ತೆಯಲ್ಲಿರುವ ಸುಮಾರು 60 ವರ್ಷಗಳ
ಹಳೆಯ ಮರಗಳನ್ನು ಮಹಾನಗರಪಾಲಿಕೆ ಕಡಿದು ಹಾಕಿರುವುದನ್ನು
ಖಂಡಿಸಿ ಇಂದು ರೈನ್ ಟ್ರಸ್ಟ ಸಂಸ್ಥೆಯಿಂದ ಹಿರಿಯೂರಿನಲ್ಲಿ
ಮೇಣದ ಬತ್ತಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು.
ಇದೇ
ಸಮಯದಲ್ಲಿ ಮಾತಾಡಿದ ಕಸವನಹಳ್ಳಿ ರಮೇಶ್, ಜಾಗತಿಕ
ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮರ ಗಿಡ ಬೆಳೆಸಬೇಕಾದ
ಮಹಾನಗರ ಪಾಲಿಕೆಯೇ ಮರಗಳ ಮರಣ ಹೋಮ
ಮಾಡಿರುವುದು ಖಂಡನೀಯ. ಇದನ್ನು ವಿರೋಧಿಸಿ ಇಂದು
ಮೇಣದ ಬತ್ತಿ ಹಚ್ಚಿ ಪ್ರತಿಭಟಿಸಲಾಗುತ್ತಿದೆ ಎಂದರು

