ಚಳ್ಳಕೆರೆ: ರಾಷ್ಟ್ರೀಯ ಸ್ವಯಂ ಸೇವಾ ಸಂಘ
(ಆರ್ ಎಸ್ ಎಸ್) ಚಳ್ಳಕೆರೆ ಶಾಖೆ ವತಿಂದ
ಗಣವೇಶ ಸಂವಸ್ತ್ರಧಾರಿಗಳ ಮೆರವಣಿಗೆ ಮೂಲಕ
ನಗರದ ವಿವಿಧ ಪ್ರಮುಖ ರಸ್ತೆಗಳಲ್ಲಿ
ಅದ್ದೂರಿಯಾಗಿ ಪಥ ಸಂಚಲನ ನೆಡೆಸಿದರು.
ಚಳ್ಳಕೆರೆ ನಗರದ ಬಿಸಿನೀರು ಮುದ್ದಪ್ಪ
ಸರ್ಕಾರಿ ಪ್ರೌಢಶಾಲೆ ಮೈದಾ ನದಲ್ಲಿ
ತಾಲ್ಲೂಕಿನ ಆರ್ ಎಸ್ ಎಸ್ ಶಾಖೆಯಿಂದ
ಏರ್ಪಡಿಸಲಾಗಿದ್ದ ಗಣ ವೇಷ ಸಂವಸ್ತ್ರ
ಧರಿಸಿದ ಶಾಖೆಯ ಸದಸ್ಯರು ಧ್ವಜ ವಂದನೆ
ಸ್ವೀಕರಿಸಿ, ಸಂಘದ ಬ್ಯಾಂಡ್ ಸೆಟ್ ವಾದ್ಯದ
ಸಂಗೀತಕ್ಕೆ ಮಾರ್ಚ್ ಪಾಸ್ಟ್ ಹೆಜ್ಜೆಯನ್ನು
ಹಾಕುತ್ತ, ವಾಲ್ಮೀಕಿ ಸರ್ಕಲ್, ಜಗಜೀವ
ರಾಮ್ ವೃತ್ತ, ಸೇರಿದಂತೆ ನಗರದ ಟಿ.ಆ
ನಗರ, ಅಂಬೇಡ್ಕರ್ ವೃತ್ತದ ಮೂಲಕ
ನೆಹರುವೃತ್ತ ದಿಂದ ಬಳ್ಳಾರಿ ರಸ್ತೆ ಮೂಲಕ
ವೀರಭದ್ರಸ್ವಾಮಿ ದೇವಸ್ಥಾನದ ರಾಜಬೀದಿ
ಮೂಲಕ ಪಾವಗಡ ರಸ್ತೆ ಸೇರಿದಂತೆ ಪ್ರಮುಖ
ದಿಗಳಲ್ಲಿ ಸಂಚರಿಸಿದ ಮೆರವಣಿಗೆಗೆ,
ಹೂವುಗಳನ್ನು ಈ ವೇಶ ದಾರಿಗಳಿಗೆ
ಹಾಕುವ ಮೂಲಕ ಭವ್ಯ ಸ್ವಾಗತವನ್ನು
ಸಾರ್ವ ಜನಿಕರು ಕೋರಿದರು,
ನಗರದಲ್ಲಿ ನಡೆದ ಈ ಮೆರವಣಿಗೆಗೆ
ಪೊಲೀಸರ ಬಾರಿ ಬಂದೋ ಬಸ್ತ್
ಏರ್ಪಡಿಸಲಾಗಿತ್ತು.
ಸ್ವತಹ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ
ರಂಜಿತ್ ಕುಮಾರ್ ಬಂಡಾರು ಹಾಗೂ ಪೊಲೀಸ್ ರಕ್ಷಣೆ
ವ್ಯವಸ್ಥೆಯ ಉಸ್ತುವಾರಿ ವಹಿಸಿದ್ದರು.
ಜೊತೆಗೆ ಚಳ್ಳಕೆರೆ ಡಿವೈಎಸ್ಪಿ ರಾಜಣ್ಣ,ನಗರ
ಪೊಲೀಸ್ ನಿರೀಕ್ಷಿಕರಾದ ಆರ್.ಎಫ್.ದೇಸಾಯಿ,
ಗ್ರಾಮೀಣ ವೃತ್ತ ನಿರೀಕ್ತಿಕ ಹನುಮಂತಪ್ಪ
ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳು
ಯಶಸ್ವಿಯಾಗಿ ಯಾವುದೇ ಅಹಿತಕರ
ಘಟನೆ ನಡೆಯದಂತೆ ಬಂದೋ ಬಸ್ತ್
ನಿರ್ವಹಿಸಿದರು.
ಈ ಮೆರವಣಿಗೆಯಲ್ಲಿ ಬಿಜೆಪಿಯ ಮುಖಂಡ ಕೆ.ಟಿ. ಕುಮಾರಸ್ವಾಮಿ, ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ
ಬಿ.ಎಂ.ಸುರೇಶ್, ಆರ್ ಎಸ್ ಎಸ್.
ಪ್ರಮುಖರು ಹಾಗೂ ಜಿಲ್ಲಾ ಬಿಜೆಪಿ ಪ್ರಧಾನ
ಕಾರ್ಯದರ್ಶಿ ಬಾಳೆಕಾಯಿ ರಾಮದಾಸ್,
ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಜಯಪಾಲಯ್ಯ, ಮಾತೃ ಶ್ರೀಮಂಜುನಾಥ್, ಕಾಂತರಾಜ, ರುದ್ರಮುನಿ, ಜಿ.ಕೆ.ಗೀರಿಶ್, ಈಶ್ವರ್.ಇತರ
ಪ್ರಮುಖರು ಭಾಗವಹಿಸಿದ್ದರು.

