ಚಳ್ಳಕೆರೆ: ಶೋಶಿತರ ಬಗ್ಗೆ ದೀನ ದಲಿತರ ಬಗ್ಗೆ ಕಾಳಜಿವಹಿಸಿದ ಏಕೈಕ ವ್ಯಕ್ತಿ ಅಂಬೇಡ್ಕರ್, ಅವರ ಜೀವನ ಸಾಧನೆ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನ,  ಈ ರಾಜ್ಯದ ಮೂಲಕ ಅಧಿಕಾರವನ್ನು ಪಡೆದಂತವರು ಬಡವರ ಕಲ್ಯಾಣಕ್ಕೆ ನಮ್ಮ ತಮ್ಮ ಅಧಿಕಾರವನ್ನು ಉಪಯೋಗಿಸದೆ ತಮ್ಮ ಸ್ವಾರ್ಥ ಬದುಕಿನೆಡೆಗೆ ಮುಖ ಮಾಡಿದ್ದು ಅವರಿಗೆ ತುಂಬಾ ನೋವುಂಟು ಮಾಡಿತ್ತು ಹಾಗೆಯೇ ಭಾರತ ರತ್ನ ಡಾ ಬಿಆರ್ ಅಂಬೇಡ್ಕರ್ ಅವರು ಕನಸು ಕಂಡಂತೆ ಶೋಷಿತ ಸಮುದಾಯದ ಎಲ್ಲರೂ ಕೂಡ ಬಡವರ ಕಲ್ಯಾಣಕ್ಕೆ ತಮ್ಮನ್ನು ಮುಡಿಪಾಗಿ ಇಡೋಣ ಎಂಬ ಸಂಕಲ್ಪವನ್ನು ಕೈಗೊಳ್ಳೊಣ ಎಂದು ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಶಾಸಕ ಟಿ.ರಘುಮೂರ್ತಿ ಹೇಳಿದರು.

ಅವರು

ಚಳ್ಳಕೆರೆ ತಾಲ್ಲೂಕಿನ ಜುಂಜರಗುಂಟೆ ಗ್ರಾಮದಲ್ಲಿ ನಡೆದ ಶ್ರೀ ಡಾ. ಬಿ.ಆರ್.ಅಂಬೇಡ್ಕರ್ ರವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಕೆಡಿಪಿ ನಾಮ ನಿರ್ದೇಶನ ಸದಸ್ಯರಾದ ಬಸವರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಶಿಧರ, ಮುಖಂಡರುಗಳಾದ ನಿಂಗಪ್ಪ, ಪ್ರದೀಪ್, ವೀರಣ್ಣ, ಶಿವಣ್ಣ,, ರಾಜು, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!