ಚಳ್ಳಕೆರೆ : ದಿನನಿತ್ಯ ಕ್ಷೇತ್ರದ ಜನರ ಜೊತೆಗೆ ಇರುವಂತಹ ಶಾಸಕರು ಒಂದು ದಿನ ಬಿಡುವು ಮಾಡಿಕೊಂಡು ಕುಟುಂಬದೊಂದಿಗೆ ದೇವರ ದರ್ಶನ ಮಾಡುವ ಮೂಲಕ ಕ್ಷೇತ್ರದ ಶಾಸಕ ಟಿ ರಘುಮೂರ್ತಿಯವರು ಪುನಿತರಾಗಿದ್ದಾರೆ.
ಕುಟುಂಬ ಪರಿವಾರದೊಂದಿಗೆ ತಾಲೂಕಿನ ಗೌರಸಮುದ್ರ ಮಾರಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕುಟುಂಬದೊಂದಿಗೆ ಕಾಲ ಕಳೆದಿದ್ದಾರೆ.
ಇನ್ನು ಗೌರಸಮುದ್ರಕ್ಕೆ ಭೇಟಿ ನೀಡಿದ ಶಾಸಕರನ್ನು ಗೌರಯುತವಾಗಿ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಓಬಣ್ಣ ಸದಸ್ಯರಾದ ಶಶಿಧರ್, ಇನ್ನು ಹಲವು ಮುಖಂಡರುಗಳು ತಮಟೆ ವಾದ್ಯದೊಂದಿಗೆ ಶಾಸಕರನ್ನು ಬರಮಾಡಿಕೊಂಡು ಗ್ರಾಮದ ಪ್ರಮುಖ ಬೀದಿಗಳಿಂದ ದೇವಸ್ಥಾನಕ್ಕೆ ಕರೆತಂದು ದೇವಸ್ಥಾನದಲ್ಲಿ ಕುಟುಂಬ ಪರಿವಾರಕ್ಕೆ ವಿಶೇಷ ಪೂಜೆಯನ್ನು ಮಾಡಿಸುವುದರ ಮೂಲಕ ಶಾಸಕರಿಗೆ ಮಾರಮ್ಮ ದೇವಿಯ ದರ್ಶನ ಮಾಡಿಸಿದ್ದಾರೆ.