ವಿಘ್ನೇಶ್ವ ಮಹಿಳಾ ಸ್ವಸಾಯ ಸಂಘದ ವತಿಯಿಂದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪಕ್ಷಿಗಳಿಗೆ ಕಾಳು ನೀರು…..

ಚಳ್ಳಕೆರೆ : ನಗರದ ವಿಘ್ನೇಶ್ವರ ಮಹಿಳಾ ಸ್ವಸಾಯ ಸಂಘದ ವತಿಯಿಂದ ಇಂದು ವಾಲ್ಮೀಕಿ ನಗರದಲ್ಲಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪಕ್ಷಿಗಳಿಗೆ ಕಾಳು ಹಾಗೂ ನೀರು ಇಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು..

ಈಗಾಗಲೇ ಬೇಸಿಗೆ ಕಾಲ ಆರಂಭವಾಗಿದ್ದು ಎಲ್ಲೋ ನೀರು ಸಿಗದೇ ಪ್ರಾಣಿ ಪಕ್ಷಿಗಳು ಮರಣ ಹೊಂದುತ್ತಿದೆ. ಸಮಯದಲ್ಲಿ ಮನುಷ್ಯರಾದ ನಾವು ಮನೆಗಳ ಮೇಲೆ ಮನೆಗಳ ಮುಂದೆ ಹಾಗೂ ಉದ್ಯಾನವನಗಳಲ್ಲಿ ಮರ ಗಿಡ ಇರುವ ಕಡೆ ಪಕ್ಷಿಗಳಿಗೆ ನೀರು ಕಾಳ್ಗಳನ್ನು ಇರುವ ಮೂಲಕ ಪಕ್ಷಿಯ ಸಂಕುಲ ಕಾಪಾಡಬೇಕಿದೆ ಎಂದು. ಸಂಘದ ಪದಾಧಿಕಾರಿ ಶಕುಂತಲಮ್ಮ ತಿಳಿಸಿದರು.

ಶುಭ ಸೋಮಶೇಖರ್ ಮಾತನಾಡಿ. ನೀರಿನ ಕಾನುಗಳನ್ನ ಅರ್ಧಕ್ಕೆ ಕಟ್ ಮಾಡಿ ಅದರಲ್ಲಿ ಒಂದರಲ್ಲಿ ನೀರು ಹಾಗೂ ಒಂದರಲ್ಲಿ ರಾಗಿ ಅಕ್ಕಿ, ಸಜ್ಜೆ ,ಜೋಳ ಇತರೆ ಕಾಳುಗಳನ್ನು ಹಾಕಿ ಮರಗಳಿಗೆ ನೇತು ಹಾಕಿದರೆ ಪಕ್ಷಿಗಳು ಕಾಳು ತಿಂದು ನೀರು ಕುಡಿಯುತ್ತವೆ. ಇದರಿಂದ ಪಕ್ಷ ಸಂಕುಲವು ಉಳಿಯುತ್ತದೆ. ನಾವು ಈಗಾಗಲೇ ಹಲವು ಕಡೆ ಪಕ್ಷಿಗಳಿಗೆ ನೀರು ಹಾಗೂ ಕಾಳುಗಳನ್ನು ಇಡುತ್ತಿದ್ದೇವೆ. ಮತ್ತೆ ಮೂರು ದಿನಕ್ಕೊಮ್ಮೆ ಹೋಗಿ ನೀರು ಮತ್ತೆ ಕಾಳು ಗಳನ್ನು ಹಾಕಿ ಬರುವಂತಹ ಕಾರ್ಯ ಮಾಡುತ್ತೇವೆ ಎಂದರು…

ಈ ಸಂದರ್ಭದಲ್ಲಿ ಶುಭ ,ಮೋಹಿನಿ, ತಿಪ್ಪಮ್ಮ, ಚಿತ್ರಾವತಿ, ರೂಪ ,ಲಾವಣ್ಯ, ರುಕ್ಮಿಣಿ, ಗೀತಾ, ಸುನಿತಾ ,ಮಂಜುಳಾ, ಸೌಭಾಗ್ಯ ಲಕ್ಷ್ಮಿ ,ಪುಷ್ಪ, ರೋಜಾ, ಭಾಗ್ಯಶ್ರೀ ,ಸರ್ವ ಮಂಗಳ, ಸವಿತಾ ,ಕಲ್ಪನಾ, ವಿಜಯ, ಪುಷ್ಪ, ತನುಜಾ ಇದ್ದರು

About The Author

Namma Challakere Local News
error: Content is protected !!