ಚಳ್ಳಕೆರೆ :
ನಗರದ ಸ್ವಚ್ಚತೆಯಲ್ಲಿ ನಿರತರಾಗುವ ಪೌರಕಾರ್ಮಿಕರಿಗೆ
ನಗರಸಭೆ ವತಿಯಿಂದ ನೀಡುವ ಬೆಳಗಿನ ಉಪಾಹಾರ
ಗುಣಮಟ್ಟ ನೀಡುವ ಜೊತೆಗೆ ಟೇಬಲ್ ವ್ಯವಸ್ಥೆ
ಮಾಡುವಂತೆ ಅಧ್ಯಕ್ಷೆ ಮಂಜುಳಾ ತಾಕೀತು ಮಾಡಿದರು.

ಪೌರಕೋರ್ಮಿಕರು ಮುಂಜಾನೆ ನಗರ ಸ್ವಚ್ಛತೆ ಮಾಡಿ 9
ಗಂಟೆಗೆ ಸರಿಯಾಗಿ ಪೌರ ಕಾರ್ಮಿಕರಿಗೆ ಉಪಹಾರ
ನೀಡುವ ಸ್ಥಳಕ್ಕೆ ಅಧ್ಯಕ್ಷೆ.ಉಪಾಧ್ಯಕ್ಷೆ ಸುಮಾ.ಸ್ಥಾಯಿ
ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ದಿಡೀರ್ ಭೇಟಿ ನೀಡಿ
ಪೌರಕಾರ್ಮಿಕರರೊಂದಿಗೆ ಕುಳಿತು ಉಪಹಾರ ಸೇವಿಸುವ
ಮೂಲಕ ಗುಣಮಟ್ಟವನ್ನು ಪರಿಶೀಲನೆ ಮಾಡಿದರು.

ನಗರದ ಹಳೆ ಕಚೇರಿ ಆವರಣದ ಕೂಠಿಯಲ್ಲಿ ಕುರ್ಚಿಗಳು
ವ್ಯವಸ್ಥೆ ಮಾಡಿಸಿ ಉಪಹಾರದಲ್ಲಿ ಗುಣಮಟ್ಟ
ಸರಿಯಿಲ್ಲದಿದ್ದರೆ ನಮ್ಮ ಗಮನ ಸೆಳೆಯುವಂತೆ
ತಿಳಿಸಿದ್ದಾರೆ
ಈ ಸಂದರ್ಭದಲ್ಲಿ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ
ಪರಿಶೀಲನೆ ನಡೆಸಿದ್ದಾರೆ

About The Author

Namma Challakere Local News
error: Content is protected !!