ಚಳ್ಳಕೆರೆ : ಧಾರ್ಮಿಕ ಭಕ್ತಿಯಿಂದ ಇಂದು ಮನಸ್ಸನ್ನು ಹಿಡಿದಿಟ್ಟುಕೊಳ್ಳಬುಹುದು ಆದ್ದರಿಂದ ದೇವಾಲಯಗಳು ಈಗೀನ ಆಧುನಿಕ ಕಾಲದಘಟ್ಟದಲ್ಲಿ ಹಿಡಿತಕ್ಕೆ ಸಿಗದ ಮನಸ್ಸುನ್ನು ಒಂದೆಡೆ ಸೇಳೆಯಲು ದೇವಾರ ಆರಾಧನೆ ಮುಖ್ಯವಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯ ಪಟ್ಟರು


ಅವರು ತಾಲೂಕಿನ ಬೆಳಗೆರೆ ಗ್ರಾಮ ಪಂಚಾಯಿತಿಯ ಬೆಳಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀಲಕ್ಷ್ಮೀರಂಗನಾಥ ಸ್ವಾಮಿವಿಗ್ರಹ ಪುನರ್‌ಪ್ರತಿಷ್ಠಾಪನೆ ಮತ್ತು ನೂತನ ದೇವಸ್ಥಾನರಾಜಗೋಪುರ ಲೋಕಾರ್ಪಣಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ತಹಶೀಲ್ದಾರ್ ಎನ್ ರಘುಮೂರ್ತಿ ಮಾತನಾಡಿ, ಮನಸ್ಸಿನ ನೆಮ್ಮಡಿ ಪಡೆಯಲು ಇಂದು ದೇವಾಲಗಳು ಪ್ರಮುಖ ಪಾತ್ರ ವಹಿಸಿವೆ, ದೇವಾರ ಆರಾಧನೆಯಿಂದ ಮಾನಸಿಕ ನೆಮ್ಮಡಿ ಪಡೆಯಬಹುದು ಆದ್ದರಿಂದ ಗ್ರಾಮಗಳಲ್ಲಿ ಶ್ರದ್ಧಾ ಭಕ್ತಿ ಮಡುಗಟ್ಟಿರುವುತ್ತದೆ ಇಂತಹ ದೇವಾಲಯಗಳು ಧಾರ್ಮಿಕ ಕೇಂದ್ರಗಳಾಗಳಿ ಎಂದು ಅಭಿಪ್ರಾಯ ಪಟ್ಟರು.


ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆ ಅವರ ಸಹೋದರರಾದ ಶ್ರೀಸುರೇಂದ್ರಕುಮಾರ್ ನೇತೃತ್ವದಲ್ಲಿ ಪೂಜೆ ಜರುಗಿತು, ಗ್ರಾಮ ಪಂಚಾಯಿತಿ ಅಧ್ಯಕ್ಷÀ ರವಿ, ಗ್ರಾಮ ಪಂಚಾಯತಿ ಸದಸ್ಯರಗಳು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರವಿ ಕುಮಾರ್, ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಕೆ.ಟಿ ನಿಜಲಿಂಗಪ್ಪ ಮತ್ತು ಸದಸ್ಯರುಗಳ ವಿವಿಧ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.

Namma Challakere Local News
error: Content is protected !!