ಚಳ್ಳಕೆರೆ : ನಾಯಕನಹಟ್ಟಿ ಹೋಬಳಿಯ ವಿದ್ಯಾವಂತ ನಿರುದ್ಯೋಗಿ ಪದವೀಧರರಿಗೆ ಆಶಾಕಿರಣವಾಗಿ ಖಾಸಗಿ ಸಂಸ್ಥೆ ವತಿಯಿಂದ ಒಂದು ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಆನ್ಲೈನ್ ತರಬೇತಿಯನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ತಹಶೀಲ್ದಾರ್‌ಎನ್.ರಘುಮೂರ್ತಿ ಹೇಳಿದ್ದಾರೆ.
ಅವರು ನಾಯಕನಹಟ್ಟಿ ಪಟ್ಟಣದ ಯಾತ್ರಿ ನಿವಾಸದಲ್ಲಿ ಜೂನ್ 21 ರಂದು ಲೋಕಾರ್ಪಣೆ ಮಾಡುವ ಉಚಿತ ಆನ್ಲೈನ್ ತರಬೇತಿ ಕಾರ್ಯಕಾರದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು, ತಾಲ್ಲೂಕು ಆಡಳಿತ ಮತ್ತು ಹಟ್ಟಿಮಲ್ಲಪ್ಪ ನಾಯಕ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್ಲೈನ್ ತರಬೇತಿಯನ್ನು ನೀಡುತ್ತಿರುವುದು ಈ ಭಾಗದ ವಿದ್ಯಾವಂತ ಯುವಕ ಯುವತಿಯರಿಗೆ ವರದಾನವಾಗಿದೆ.
ಪದವಿ ವ್ಯಾಸಂಗ ಮಾಡಿ ಉದ್ಯೋಗ ಗಿಟ್ಟಿಸಿಕೊಳ್ಳದೆ ಅರ್ಧಕ್ಕೆ ಮೊಟುಕು ಮಾಡುವ ವಿದ್ಯಾವಂತ ವಿದ್ಯಾರ್ಥಿಗಳ ಹಿತ ದೃಷ್ಠಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಇನ್ನೂ ಸಮಾರಂಭದಲ್ಲಿ ನಗೆಹಬ್ಬ ಹಾಗೂ ಸಂಗೀತ ಸಂಜೆ ಕಾರ್ಯಕ್ರಮವನ್ನು ಕೂಡ ಆಯೋಜಿಸಲಾಗಿದೆ ಈ ಕಾರ್ಯಕ್ರಮಕ್ಕೆ ಕ್ಷೇತ್ರದ ಶಾಸಕ, ಮಂತ್ರಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಎಲ್ಲ ವರ್ಗದವರು ಉಪಸ್ಥಿತರಿರುವರು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹಟ್ಟಿಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷರಾದ ಪಟೇಲ್ ಜಿ ಎಂ ತಿಪ್ಪೇಸ್ವಾಮಿ, ಎತ್ತಿನಹಟ್ಟಿ ಗೌಡ್ರು ಎಸ್ ಓಬಯ್ಯ, ನೇರಲಗುಂಟೆ ಭೈಯಣ್ಣ, ಎನ್ ರುದ್ರಣ್ಣ, ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ ಬಸಣ್ಣ, ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಜಿಬಿ ಮುದಿಯಪ್ಪ, ನೂತನ ಪಟ್ಟಣ ಪಂಚಾಯಿತಿ ಸದಸ್ಯ ಓಬಯ್ಯದಾಸ್, ಗೌಡಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷ ಟಿ.ರಂಗಪ್ಪ, ಮಲ್ಲೂರಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಟಯ್ಯ, ಭೀಮ ಗೊಂಡನಹಳ್ಳಿ ಹನುಮಣ್ಣ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ತಿಪ್ಪೇಸ್ವಾಮಿ, ಮೇಘ ಹೋಟೆಲ್ ಬಸವರಾಜ್, ಜಿ ವೈ ತಿಪ್ಪೇಸ್ವಾಮಿ ನಲಗೇತನಹಟ್ಟಿ, ಜಿ ಟಿ ತಿಪ್ಪೇಸ್ವಾಮಿ ಗೌಡಗೆರೆ, ಏಜೆಂಟರು ಪಾಲಯ್ಯ, ಸೇರಿದಂತೆ ಇನ್ನು ಮುಂತಾದವರು ಉಪಸ್ಥಿತರಿದ್ದರು