filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 46;

ಚಳ್ಳಕೆರೆ : ಡಾ. ಬಿಆರ್. ಅಂಬೇಡ್ಕರ್ ಕರ್ನಾಟಕದ ನಿಪ್ಪಾಣಿ ಸ್ಥಳಕ್ಕೆ ಬೇಟಿ ನೀಡಿ ಇಂದಿಗೆ ನೂರ ವರ್ಷಗಳು ಕಳೆದುವೆ, ಆದ್ದರಿಂದ ಶತಮಾನೋತ್ಸವ ಆಚರಣೆಗಾಗಿ ಇದೆ ತಿಂಗಳು ಏಪ್ರಿಲ್ 11ರಿಂದ ಮೂರು ದಿನಗಳ ಕಾಲ ರಾಜ್ಯಾದ್ಯಂತ ಭೀಮನ ಹೆಜ್ಜೆ , 100ರ ಸಂಭ್ರಮ ಎಂಬ ಘೋಷ ವಾಕ್ಯದೊಂದಿಗೆ ಬೆಂಗಳೂರು ನಿಂದ ನಿಪ್ಪಾಣಿಯವರಿಗೂ ಭೀಮನ ಹೆಜ್ಜೆ, ರಥವು ಸಾಗಲಿದೆ ಆದ್ದರಿಂದ ನಮ್ಮ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿಬೇಕು ಎಂದು ಬಿಜೆಪಿ ಮುಖಂಡ. ಕೆಟಿ ಕುಮಾರಸ್ವಾಮಿ ಕರೆ ನೀಡಿದ್ದಾರೆ .

ಅವರು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಬಿಆರ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳು ಹಾಗೂ ಸಂವಿಧಾನ ರೂಪಿಸಿದಂತ ಮಹಾ ಮೇಧಾವಿ ಗೆ ನಾವು ಅರ್ಪಿಸುವ ಗೌರವವಾಗಿದೆ.

ಆದರೆ ಈಗಿನ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಂಬೇಡ್ಕರ್ ನ್ನು ಕಡೆಗಾಣಿಸಿದೆ ಆದರೆ ಬಿಜೆಪಿಯಿಂದ ಡಾ. ಬಿಆರ್ ಅಂಬೇಡ್ಕರ್ ಗೆ ಶತಮಾನೋತ್ಸವ ಆಚರಣೆ ಮಾಡುತ್ತಿದ್ದೇವೆ. ಆದ್ದರಿಂದ ಇದೆ ಏಪ್ರಿಲ್ ತಿಂಗಳ 11ರಂದು ಭೀಮನ ಹೆಜ್ಜೆ ಎಂಬ ರಥವು, ರಾಜ್ಯಾದ್ಯಂತ ಸಾಗಲಿದೆ ನಮ್ಮ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವಾಗೊಂಡನಹಲ್ಲಿಯ ಮೂಲಕ ಚಿತ್ರದುರ್ಗ ಮಾರ್ಗವಾಗಿ ನಿಪ್ಪಾಣಿಗೆ ಸೇರುವ ಮಾರ್ಗ ಮಧ್ಯದ ಜವಗೊಂಡನಹಳ್ಳಿಯಲ್ಲಿ ನಮ್ಮ ಚಳ್ಳಕೆರೆ ಬಿಜೆಪಿ ಮಂಡಲದ ವತಿಯಿಂದ ಆತ್ಮೀಯವಾಗಿ ಸ್ವಾಗತ ಕೋರಿ ಬೀಳ್ಕೊಡಲಾಗುವುದು.

ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಭಾಗವಹಿಸಿ ಭೀಮನ ಹೆಜ್ಜೆ ನೂರರ ಸಂಭ್ರಮಕ್ಕೆ ಸಾಕ್ಷಿ ಆಗಬೇಕೆಂದು ಕೋರಿದ್ದಾರೆ.

ಇದೇ ಸಂಧರ್ಭದಲ್ಲಿ
ಬಿಜೆಪಿ ಮಂಡಲ ಅಧ್ಯಕ್ಷ ಬಿ.ಎಂ.ಸುರೇಶ್, , ಎಸ್ಟಿ‌ಮೋರ್ಚ ಜಿಲ್ಲಾಧ್ಯಕ್ಷ ಶಿವಣ್ಣ, ಜಿಲ್ಲಾ ಎಸ್ಸಿ ಮೋರ್ಚ ಅಧ್ಯಕ್ಷ ಕರಿಕೆರೆ ತಿಪ್ಪೇಸ್ವಾಮಿ,
ದೊರೆ ನಾಗರಾಜ್, ಮಂಡಲ ಉಪಾಧ್ಯಕ್ಷ ದಿನೇಶ್ ರೆಡ್ಡಿ, ಮಧು ಕುಮಾರ್‌, ಡಾ.ರಾಮರಾಜ್, ಬೋರಣ್ಣ, ಬೋರಣ್ಣ,
ಇದೇ ಸಂದರ್ಭದಲ್ಲಿ

About The Author

Namma Challakere Local News
error: Content is protected !!