“ಹಿಂದೂ ಧಾರ್ಮಿಕ ನೆಲೆಯಲ್ಲಿ ಶ್ರೀರಾಮನವಮಿ ಹಬ್ಬ ವಿಶಿಷ್ಟವಾದದ್ದು”- ಶ್ರೀಮತಿ ಹೆಚ್ ಲಕ್ಷ್ಮೀದೇವಮ್ಮ ಅಭಿಪ್ರಾಯ.

ಚಳ್ಳಕೆರೆ-ಹಿಂದೂ ಧಾರ್ಮಿಕ ನೆಲೆಯಲ್ಲಿ ಆಚರಿಸಲಾಗುವ ಶ್ರೀರಾಮನವಮಿ ಹಬ್ಬ ಬಹಳ ವಿಶಿಷ್ಟವಾದದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಹೆಚ್ ಲಕ್ಷ್ಮೀದೇವಮ್ಮ ಅಭಿಪ್ರಾಯಪಟ್ಟರು.

ತ್ಯಾಗರಾಜನಗರದ ಸದ್ಭಕ್ತರಾದ ಶ್ರೀಮತಿ ತಿಪ್ಪಮ್ಮ ಉಮಾಶಂಕರ್ ಅವರ ಸೂಜಿಮಲ್ಲೇಶ್ವರ ನಿವಾಸದಲ್ಲಿ ಶ್ರೀರಾಮನವಮಿಯ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು “ಶ್ರೀರಾಮ ಮತ್ತು ಶ್ರೀರಾಮನವಮಿ” ಹಬ್ಬದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಅಯೋಧ್ಯೆಯ ರಾಜನಾದ ದಶರಥ ಮತ್ತು ಕೌಸಲ್ಯೆಯ ಮಗನಾಗಿ ಚೈತ್ರ ಮಾಸದ ಒಂಭತ್ತನೇ ದಿನವಾದ ನವಮಿಯಂದು ಮಧ್ಯಾಹ್ನ ೧೨ಗಂಟೆಗೆ ಶ್ರೀರಾಮನ ಜನನವಾಗುತ್ತದೆ.ಈ ದಿನವನ್ನು ರಾಮನವಮಿಯಂದು ಎಂದು ಎಲ್ಲಾ ಕಡೆಗಳಲ್ಲಿ ಸಂಭ್ರಮದಿಂದ ಆಚರಿಸುತ್ತಾರೆ. ರಘುವಂಶ ಕುಲ ತಿಲಕನಾಗಿ , ಮರ್ಯಾದ ಪುರುಷೋತ್ತಮನಾಗಿ , ಪಿತೃವಾಕ್ಯಪರಿಪಾಲಕನಾಗಿ,ಏಕಪತ್ನಿವ್ರತಸ್ಥನಾಗಿ,ಸೀತಾರಾಮನಾಗಿ, ಆದರ್ಶ ರಾಮರಾಜ್ಯದ ನಿರ್ಮಾಪಕನಾಗಿ ಶ್ರೀರಾಮಚಂದ್ರನ ಆದರ್ಶ ಬದುಕು ಮತ್ತು ಅವನ ಸದ್ಗುಣಗಳು ನಮಗೆ ನಿತ್ಯ ಬದುಕಿಗೆ ಸದಾ ದಾರಿದೀಪವಾಗಿರುತ್ತವೆ ಎಂದು ತಿಳಿಸಿದರು.ಈ ಸತ್ಸಂಗ ಕಾರ್ಯಕ್ರಮದ ಅಂಗವಾಗಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಮತ್ತು ಹನುಮಾನ್ ಚಾಲೀಸಾ ಪಠಣ,ಭಜನೆ ಮತ್ತು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮವನ್ನು ಯತೀಶ್ ಎಂ ಸಿದ್ದಾಪುರ ನಡೆಸಿಕೊಟ್ಟರು.ಈ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ತಿಪ್ಪಮ್ಮ ಉಮಾಶಂಕರ್, ಮೋಹಿನಿ,ಶ್ರೀಮತಿ ಶುಭ ಸೋಮಶೇಖರ್, ಜಯಮ್ಮ, ಟಿ.ಎಂ ವಿಜಯಕಲಾ ಗುರು, ಗೀತಾ ಸುಂದರೇಶ್, ಎಸ್ ಎಂ ಗೀತಾ ಸುರೇಶ್,ಶ್ರೀಮತಿ ಎಂ ಗೀತಾ ನಾಗರಾಜ್,ಶ್ರೀಜನಿ,ಈಶಾನ್, ವಸಂತಕುಮಾರಿ, ಸಿದ್ದಮ್ಮ, ಸುಜಾತ, ಬಿ.ಟಿ.ಗಂಗಾಂಬಿಕೆ, ಗಿರಿಜಾಮ್ಮ ಉಪಸ್ಥಿತರಿದ್ದರು.

About The Author

Namma Challakere Local News

You missed

error: Content is protected !!