ಕೃಷಿ ಪತ್ತಿನ ಸಹಕಾರ ಸಂಘ ಅಭಿವೃದ್ಧಿಯಾಗಲು ಶೇರುಗಳ ಮಹತ್ವ ಮುಖ್ಯ ಅಧ್ಯಕ್ಷ ಜೆ ಆರ್ ರವಿಕುಮಾರ್.

ನಾಯಕನಹಟ್ಟಿ: ಬ್ಯಾಂಕಿನಿಂದ ದೊರೆಯುವ ಸಾಲ ಸೌಲಭ್ಯವನ್ನು ರೈತರಿಗೆ ವರದನವಾಗಲಿದೆ ಎಂದು ನಾಯಕನಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜೆ ಆರ್ ರವಿಕುಮಾರ್ ಹೇಳಿದರು.

ಶುಕ್ರವಾರ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯ ಕಾರ್ಯಾಲಯದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ನಾಯಕನಹಟ್ಟಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2918 ಒಟ್ಟು ಶೇರುಗಳಿದ್ದು,ಸಹಕಾರ ಸಂಘದ ಆವರಣದಲ್ಲಿ ಜಿಲ್ಲಾ ಸಹಕಾರಿ ಬ್ಯಾಂಕ್ ಸ್ಥಾಪಿಸಲು ಕಟ್ಟಡ ನಿರ್ಮಿಸಲು ಹಾಗೂ 2021- 22, 22 – 23, 23-24, ರವರೆಗೆ ಮಾಜಿ ಕಾರ್ಯದರ್ಶಿ ವೇತನವನ್ನು ಮರುಪಾವತಿ ಪಡೆಯಲು ತಿಳುವಳಿಕೆ ನೋಟಿಸ್ ಜಾರಿಗೊಳಿಸುವಂತೆ ಸರ್ವ ನಿರ್ದೇಶಕರು ಒಪ್ಪಿಗೆ ಸೂಚಿಸಿದರು.

ಹಳೆ ಶೇರುದಾರರು ಸರ್ಕಾರದ ಆದೇಶದಂತೆ ಉಳಿದ ಶೇರ್ ಮೊತ್ತವನ್ನು ಪಾವತಿಸುವಂತೆ ಹಾಗೂ ಕೆಸಿಸಿ ಸಾಲಗಾರರ ಪಟ್ಟಿಯಲ್ಲಿ ಮರಣ ಹೊಂದಿರುವ ಸಾಲಗಾರರ ಸದಸ್ಯರ ಸುಸ್ತಿಯನ್ನು ಕುಟುಂಬದವರಿಂದ ವಸೂಲಿ ಮಾಡಲು ನೋಟಿಸ್ ಜಾರಿಸ್ ಜಾರಿಗೊಳಿಸುವಂತೆ ಉಪಾಧ್ಯಕ್ಷರು ಹಾಗೂ ಸರ್ವ ನಿರ್ದೇಶಕರು ಒಪ್ಪಿಗೆ ಸೂಚಿಸಿದವರು.

ನಾಯಕನಹಟ್ಟಿ ಕೃಷಿ ಪತ್ತಿನ ಸಹಕಾರ ಸಂಘ ಪ್ರಸ್ತುತ 41.61 ಸಾವಿರ ನಷ್ಟದಲ್ಲಿದೆ. ಹೋಬಳಿ ಮಟ್ಟದಲ್ಲಿ 41 ಲಕ್ಷ ಸಾಲದ ಸೂಡಿಯಲ್ಲಿ ಇದೆ ಎಂದರೆ ಕೃಷಿ ಪತ್ತಿನ ಸಹಕಾರ ಸಂಘ ಹೇಗೆ ನಡೆಯುತ್ತದೆ. ಹೈನುಗಾರಿಕೆ, ಕುರಿ ಸಾಕಾಣಿಕೆ, ವಾಹನ ಸಾಲ ನೀಡಿದವರ ಮಾಹಿತಿ ನೀಡಲು ಸರ್ವ ನಿರ್ದೇಶಕರು ತಿಳಿಸಿದರು.

ಕೃಷಿ ಪತ್ತಿನ ಸಹಕಾರ ಸಂಘದಲ್ಲಿನ ಕಟ್ಟಡ ಹಾಗೂ ಪೀಠೋಪಕರಣ ದುರಸ್ತಿ ಮಾಡಿಸಲು ಹಾಗೂ ಬೆಳಗ್ಗೆ 9:00 ರಿಂದ ಸಂಜೆ 5:00 ವರೆಗೆ ಅಕ್ಕಿ ವಿತರಿಸುವಂತೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಸಾಲಿನಲ್ಲಿ ಅಕ್ಕಿ ವಿತರಿಸುವಂತೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸರ್ವ ನಿರ್ದೇಶಕರು ಹೇಳಿದರು.

ಇದೇ ಸಂದರ್ಭದಲ್ಲಿ ಸುಸ್ತಿ ಸಾಲಗಾರರಿಗೆ ನೋಟಿಸ್ ಜಾರಿಗೊಳಿಸುವ ಬಗ್ಗೆ ಚರ್ಚಿಸಿ ಒಪ್ಪಿಗೆ ಸೂಚಿಸಿದರು. ಭೂ ಅಭಿವೃದ್ದಿ ಸಾಲಕ್ಕೆ ಅರ್ಜಿ ಸಲ್ಲಿಸಿರುವ ಸದಸ್ಯರುಗಳಿಗೆ ಸಾಲ ವಿತರಿಸಲು ಅಧ್ಯಕ್ಷರ ಸಮ್ಮುಖದಲ್ಲಿ ಸರ್ವ ನಿರ್ದೇಶಕರು ಒಪ್ಪಿಗೆ ಸೂಚಿಸಿದರು.

ಪ್ರಭಾರ ಮುಖ್ಯ ಕಾರ್ಯದರ್ಶಿಯಾಗಿ ಡಿ ಬೋರಣ್ಣ ಅವರನ್ನು ಹತ್ತಿರದ ಗಜ್ಜಗನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರ ಅನುಮತಿ ಮೇರೆಗೆ ಕರ್ತವ್ಯ ನಿರ್ವಹಿಸಲು ಒಪ್ಪಿಗೆ ಸೂಚಿಸಲಾಯಿತು.

ಇದೇ ಸಂದರ್ಭದಲ್ಲಿ ಉಪಾಧ್ಯಕ್ಷ ಜಿ.ಎಸ್. ಕೃಷ್ಣಪ್ಪ, ನಿರ್ದೇಶಕರಾದ ಗೂಂಚಿಗಾರ್ ಪಾಲಯ್ಯ, ಎನ್ ಪಿ. ಮಂಜುನಾಥ್, ಹಾಯ್ಕಲ್ ರಾಜಯ್ಯ, ಸೋಮ್ಲಾನಾಯ್ಕ, ಬಿ. ಓ. ಬೋಸೆರಂಗಪ್ಪ, ಜಿ. ಪಿ. ಬಸವರಾಜ್, ಮಹಮ್ಮದ್ ಅಕ್ರಂವುಲ್ಲಾ, ಶ್ರೀಮತಿ ನೀಲಮ್ಮ,
ಗಜ್ಜುಗಾನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಭಾರಿ ಮುಖ್ಯ ಅಧಿಕಾರಿ ಡಿ. ಬೋರಣ್ಣ,
ಮೇಲ್ವಿಚಾರಕರಾದ ಎಲ್ ಸುರೇಶ, ಗಣಕಯಂತ್ರ ನಿರ್ವಾಹಕ ಎಂ. ಸಿ. ತಿಪ್ಪೇಶ್, ಇದ್ದರು.

About The Author

Namma Challakere Local News
error: Content is protected !!