ಚಳ್ಳಕೆರೆ ತಾಲ್ಲೂಕು ಪಿಲ್ಲಳ್ಳಿ ಗ್ರಾಮದಲ್ಲಿ ಇದೆ ಮೊದಲ ಬಾರಿಗೆ ಬಲಿಜ ಸಮಾಜದ ವತಿಯಿಂದ ಶ್ರೀ ಕೈವಾರ ಯೋಗಿನಾರೆಯಣ ತಾತಯ್ಯ. ಹಾಗೂ ಶ್ರೀ ಕೃಷ್ಣದೇವರಾಯರ ಜಯಂತೋತ್ಸವವನ್ನು ಗ್ರಾಮದ ಬಲಿಜ ಸಂಘದ ಅಧ್ಯಕ್ಷರಾದ ಎಂ. ಚಂದ್ರಶೇಖರ್ ಹಾಗೂ ಸಂಘದ ಪಾದಾಧಿಕಾರಿಗಳಿಂದ ಅದ್ದೂರಿಯಾಗಿ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಚಳ್ಳಕೆರೆ ತಾಲೂಕು ಬಲಿಜ ಸಂಘದ ಅಧ್ಯಕ್ಷರಾದ ಬಿ. ಸಿ. ಸಂಜೀವ ಮೂರ್ತಿ ಹಾಗೂ ಕಾರ್ಯದರ್ಶಿ ಬಿ.ವಿ. ಚಿದಾನಂದಮೂರ್ತಿ ಮತ್ತು ಸಂಘದ ನಿರ್ದೇಶಕರಾದ ಬಿ. ಸುರೇಶ್ ಬಾಬು. ಆನಂದಪ್ಪ ಭಾಗವಹಿಸಿದ್ದರು ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರು ಬಿ.ಸಿ.ಸಂಜೀವಮೂರ್ತಿ ಮಾತನಾಡಿ ಸಮಾಜದ ಸಂಘ ಸಂಸ್ಥೆಗಳಿಗೆ ಒಗ್ಗಟ್ಟು ಅನ್ನುವುದು ಮುಖ್ಯ ಈ ಒಂದು ಸಣ್ಣ ಗ್ರಾಮದಲ್ಲಿ ಈಷ್ಟು ಅದ್ದೂರಿಯಾಗಿ ತಾತಯ್ಯನವರ ಹಾಗೂ ಶ್ರೀ ಕೃಷ್ಣದೇವರಾಯರ ಜಯಂತೋತ್ಸವವನ್ನು ಆಚರಿಸುತ್ತಿರುವುದು ಬಹಳ ಸಂತೋಷದ ವಿಷಯವಾಗಿದೆ ತಾತಯ್ಯನವರು ಬಲಿಜ ಸಮಾಜದ ಆದರ್ಶ. ಅವರ ಕಾಲಜ್ಞಾನ ಇಡೀ ಪ್ರಪಂಚಕ್ಕೆ ಪ್ರಸ್ತುತವಾಗಿದೆ ಎಂದರು ಮತ್ತು ಇಲ್ಲಿ ಬಲಿಜ ಸಮಾಜದವರೇ ಆದ ಎಂ. ಮೌರ್ಯ ರವರು ಇಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿರುವುದು ಬಹಳ ಸಂತೋಷದ ವಿಷಯವೆಂದರು. ಗ್ರಾಮದ ಬಲಿಜ ಸಂಘದ ವತಿಯಿಂದ ತಾಲೂಕು ಅಧ್ಯಕ್ಷರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಕಾರ್ಯದರ್ಶಿ ಚಿದಾನಂದಮೂರ್ತಿ ಅವರು ಮಾತನಾಡಿದರು. ಹಾಗೂ ಗ್ರಾಮದ ಬಲಿಜ ಸಂಘದ ಪದಾಧಿಕಾರಿಗಳಾದ
ಬಿ. ವೆಂಕಟರಮಣಪ್ಪ. ವಿ ಹನುಮಂತ ರಾಯಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ ಮೌರ್ಯ ಆರ್. ಅಶೋಕ್ ರಾಘವೇಂದ್ರ ಎಚ್.ಹನುಮಂತ ರಾಯ. ಮಣಿ .ಅನಂತಕುಮಾರ್ ಮುರುಡಪ್ಪ. ವೆಂಕಟರಮಣಪ್ಪ ಮತ್ತು ಸಮಾಜದ ಮುಖಂಡರು ಹಾಗೂ ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!