ಚಳ್ಳಕೆರೆ : ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಹಾಗೂ ಕಾರ್ಮಿಕ ಅಧಿಕಾರಿಗಳ ಕಛೇರಿ ಚಳ್ಳಕೆರೆ ಇವರ ಸಹಯೋಗದೊಂದಿಗೆ ಇಂದು ಬಾಲಕಾರ್ಮಿಕ ವಿರೋಧಿ ದಿನಾಚರಣೆ ಆಚರಿಸಲಾಯಿತು.
ಇಂದು ತಾಲೂಕು ಕಛೇರಿ ಆವರಣದಲ್ಲಿ ಶಾಸಕ ಟಿ.ರಘುಮೂರ್ತಿ,
ಪ್ರಧಾನ ಸಿವಿಲ್ ನ್ಯಾಯದೀಶರಾದ ಗಾಯಿತ್ರಿ ಎಸ್.ಕಾಟೆ, ಹಿರಿಯ ಸಿವಿಲ್ ನ್ಯಾಯದೀಶರಾದ ರೇಷ್ಮಾ ಕಲಕಪ್ಪ ಗೋಣಿ, ತಹಶೀಲ್ದಾರ್ ಎನ್ ರಘುಮೂರ್ತಿ, ಕಾರ್ಮಿಕ ಇಲಾಖೆ ಅಧಿಕಾರಿ ಕುಸುಮಾ, ಶಿಶು ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ, ಮಕ್ಕಳ ಜಾಥಕ್ಕೆ ಚಾಲನೆ ನೀಡಿದರು.
ಇನ್ನೂ ಮಕ್ಕಳ ಕುರಿತು ಮಾತನಾಡಿದ
ಶಾಸಕ ಟಿ.ರಘುಮೂರ್ತಿ, ಮಕ್ಕಳ ಬಾಲ್ಯವನ್ನು ಉಳಿಸೋಣ, ಅವರ ದುಡಿತ ತಪ್ಪಿಸಿ, ಆರೋಗ್ಯ ಭಾಗ್ಯ ಒದಗಿಸಿ ಉನ್ನತಿಗೆ ಶ್ರಮಿಸೋಣ, ಶಾಲೆಗಳಿಂದ
ಹೊರಗುಳಿದ ಮಕ್ಕಳನ್ನು ಗುರುತಿಸಿ, ಶಾಲೆಗೆ ಸೇರಿಸಲು ಪೋಷಕರು ಮತ್ತು ಸಾರ್ವಜನಿಕರೆಲ್ಲರೂ ಕೈ ಜೋಡಿಸೋಣ ಎಂದಿದ್ದಾರೆ.
ಇನ್ನೂ ಹಿರಿಯ ಸಿವಿಲ್ ನ್ಯಾಯದೀಶರಾದ ರೆಷ್ಮಾ ಕಲಕಪ ಗೋಣಿ ರವರು ಮಾತನಾಡಿ,
ಮಕ್ಕಳು ಈ ರಾಷ್ಟ್ರದ ಸಂಪತ್ತು, ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ಪದ್ಧತಿಯು ಮಕ್ಕಳನ್ನು ದೈಹಿಕವಾಗಿ ನೈತಿಕವಾಗಿ,
ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಶೋಷಣೆಗೆ ಒಳಪಡಿಸದೆ ಅವರ ಶಿಕ್ಷಣ ಅವಕಾಶಗಳನ್ನು ತಡೆಗಟ್ಟದೆ ಯುವ ವಯಸ್ಸಿನಲ್ಲಿ
ಮಕ್ಕಳು ಶಿಕ್ಷಣವನ್ನುನೀಡಬೇಕು ಎಂದರು.
ತಹಶೀಲ್ದಾರ್ ಎನ್ . ರಘುಮೂರ್ತಿ ಮಾತನಾಡಿ ಮಕ್ಕಳನ್ನು ದುಡಿಮೆಯಲ್ಲಿ ತೊಡಗಿಸಿಕೊಳ್ಳುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ, ಶಿಕ್ಷಣ ವಂಚಿತ ಹಾಗೂ
ದುಡಿಮೆಯಲ್ಲಿ ತೊಡಗಿರುವ ಮಕ್ಕಳನ್ನು ರಾಷ್ಟ್ರದ ಮುಖ್ಯವಾಹಿನಿಗೆ ಕರೆ ತರಲು ಸರ್ಕಾರ, ಹಾಗೂ ಸರ್ಕಾರೇತರ ಸಂಸ್ಥೆಗಳ ಹಾಗೂ
ಸಾರ್ವಜನಿಕರು ಸಂಘಟಿರಾಗಿ ಪ್ರಯತ್ನಿಸಬೇಕಿದೆ ಎಂದಿದ್ದಾರೆ.
ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ಕಾಯ್ದೆ 1986 ರಂತೆ ಬಾಲ್ಯಾವಸ್ಥೆ ಹಾಗೂ
ಕಿಶೋರಾವಸ್ಥೆಯ ಕಾರ್ಮಿಕರನ್ನು ನಿಯೋಜಿಸಿಕೊಂಡಲ್ಲಿ ಅಂತಹ ಮೊದಲ ಅಪರಾಧಕ್ಕೆ ಮಾಲಿಕರಿಗೆ 6 ತಿಂಗಳಿನಿಂದ 2
ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು
ಅವಕಾಶವಿರುತ್ತದೆ.
ಪುನರಾವರ್ತಿತ ಅಪರಾಧಕ್ಕೆ 1 ವರ್ಷದಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿರುತ್ತದೆ.
ಪೋಷಕರಾಗಿದ್ದಲ್ಲಿ ಲಘು ಶಿಕ್ಷಾ ಪ್ರಾವಧಾನವಿದ್ದು, ಪುನರಾವರ್ತಿತ ಅಪರಾಧಕ್ಕೆ
ವಿಧಿಸಬಹುದಾಗಿರುತ್ತದೆ.
6 ರಿಂದ 14 ವರ್ಷದೊಳಗಿನ ಮಕ್ಕಳು ಯಾವುದೇ ಉದ್ಯೋಗ ಅಥವಾ ಪ್ರಕ್ರಿಯೆಗಳಲ್ಲಿ ಹಾಗೂ 18 ವರ್ಷ ವಯಸ್ಸಿನವರೆಗಿನ
ಕಿಶೋರರು ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಯುವುದು ಕಂಡಲ್ಲಿ ತಕ್ಷಣವೇ ಮಾಹಿತಿ ನೀಡಬೇಕು ಎಂದಿದ್ದಾರೆ.