ಚಳ್ಳಕೆರೆ : ದೇವರ ದಾಸಿಮಯ್ಯನವರು ಶತ-ಶತ ಮಾನಗಳಿಂದ ಬಂದಂತಹ ದಕ್ಷಿಣ ಭಾರತದಲ್ಲಿ ಹೆಸರಾದ ಪ್ರಸಿದ್ಧ ಶರಣರಿಗಿಂತಲೂ, ಮೊದಲು ಬಂದಂತಹ ಮೊಟ್ಟ ಮೊದಲ ಆದ್ಯ ವಚನಕಾರರಾಗಿದ್ದಾರೆ ಎಂದು ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ತಾಲ್ಲೂಕು ಕಛೇರಿ ಸಂಭಾಗಣದಲ್ಲಿ ಆಯೋಜಿಸಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಗರಸಭೆ ಸದಸ್ಯ ಹಾಗೂ ಸಮಾಜದ ಮುಖಂಡರಾದ ವಿ.ವೈ.ಪ್ರಮೋದ್ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಕಾರಣಾಂತರಗಳಿಂದ ದೇವರ ದಾಸಿಮಯ್ಯ ರ ಜಯಂತಿ ಆಚರಣೆ ಮಾಡಿರಲಿಲ್ಲ ಆದರೆ ಈಗ ನಮ್ಮ ಸಮಾಜದಿಂದ ಜಯಂತಿ ಆಚರಣೆ ಮಾಡಿ ವಚನಗಳ ಸರಾವನ್ನು ಸಮಾಜಕ್ಕೆ ತಿಳಿಸುವ ಅನಿವಾರ್ಯ ಇದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಇಓ.ಶಶಿಧರ್, ವಚನಗಳ ಬ್ರಹ್ಮ ದೇವರ ದಾಸಿಮಯ್ಯ, ಆದರೆ ಅವರ ವಚನಗಳು ಅತೀ ಬೇಗ ಜನ ಸಮಾನ್ಯರಿಗೆ ಮುಟ್ಟದೆ ಇರುವ ಕಾರಣ ಅವರು ಈ ಸಮಾಜಕ್ಕೆ ತಡವಾಗಿ ಬೆಳಕಿಗೆ ಬರಬೇಕಾಯಿತು ಎಂದರು.
ಉಪನ್ಯಾಸಕರಾಗಿ ಚಂದ್ರ ಶೇಖರ್ ಮಾತನಾಡಿ, ದೇವಾಂಗ ದಾಸಿಮಯ್ಯರ ಕೃತಿ ಪರಿಚಯಕ್ಕೆ ಬಂದರೆ, ರಾಮನಾಥ ಎಂಬ ನಾಮಾಂಕಿತದಿಂದ ಅನೇಕ ವಚನಗಳನ್ನು ರಚಿಸಿದ್ದಾರೆ. ದೇವಲರು, ಶತಮಾನಗಳಿಂದ ಬಂದಂತಹ ದಕ್ಷಿಣ ಭಾರತದಲ್ಲಿ ಹೆಸರಾದ ಶರಣರಿಗಿಂತಲೂ ಮುಂಚಿತವಾಗಿದ್ದಂತಹ ಮೊಟ್ಟ ಮೊದಲ ವಚನಕಾರರು. ದಾಸಿಮಯ್ಯನವರ ವಚನಗಳು ಅರ್ಥೈಸಿಕೊಳ್ಳಲು ಬಹಳ ಸರಳವಾಗಿದ್ದು, ಸಮಾಜಕ್ಕೆ ವಿಶೇಷವಾದ ಧಾರ್ಮಿಕ ಪ್ರಜ್ಞೆಯ ಸ್ಪೂರ್ತಿಯ ಚಿಲುಮೆಯಾಗಿವೆ. ಆದರೆ ವಿಷಾದದ ಸಂಗತಿಯೆಂದರೆ ಇವರ ಬಗ್ಗೆ ಹೆಚ್ಚಿಗೆ ಪ್ರಚಾರಗಳಾಗಲಿಲ್ಲ. ತಡವಾಗಿಯಾದರೂ ಈಗೀಗ ಕೆಲವರು ದೇವಲರ ವಚನಗಳನ್ನು ಹೊರತರುತ್ತಿದ್ದಾರೆ ಎಂದರು.
ಇದೇ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಆರ್.ಮಂಜುಳಾ ಪ್ರಸನ್ನ ಕುಮಾರ್, ಉಪಾಧ್ಯಕ್ಷೆ ಸುಮಾ ಭರಮಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನಾ, ಸದಸ್ಯ ಕೆ..ವೀರಭದ್ರಪ್ಪ, ವಿ.ವೈ.ಪ್ರಮೋದ್, ರಮೇಶ್ ಗೌಡ, ಪರುಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್, ಇಓ ಹೆಚ್ ಶಶಿಧರ್, ಶಿರಸ್ತೆದಾರ್ ಸದಾಶಿವಪ್ಪ, ಪೌರಾಯುಕ್ತ ಜಗರೆಡ್ಡಿ, ಜಿಲ್ಲಾ ಕೆಡಿಪಿ ಸದಸ್ಯ ರಂಗಸ್ವಾಮಿ,
ಸತ್ಯನಾರಾಯಣ ಇರಿಗೇಷನ್ ಮಾಲೀಕರಾದ ಸತ್ಯನಾರಾಯಣ,
ನಿವೃತ್ತ ಪ್ರಾಂಶುಪಾಲ ಶಿವಲಿಂಗಪ್ಪ, ಕೊಲಂಮ್ಮನಹಳ್ಳಿ ಪೀತಂಬರ್, ಸಮಾಜದ ಮುಖಂಡರಾದ ರವಿಕುಮಾರ್, ಕುರುಹಿನ ಶೆಟ್ಟಿ ಸಮಾಜದ ವೀರೇಶ ಕೆ ಸಿ (ತೆರಿಗೆ ಸಲಹಗಾರರು ) ಯರಿಸ್ವಾಮಿ, ಬಾಸ್ಕರ್, ಅಧಿಕಾರಿ ವರ್ಗ ಇತರರು ಪಾಲ್ಗೊಂಡಿದ್ದರು.


