ಚಳ್ಳಕೆರೆ :
ನಗರಸಭೆಯ ಸರ್ವತೋಮುಖ ಅಭಿವೃದ್ಧಿಗೆ ನೂತನ ಅಧ್ಯಕ್ಷರಾದ ಮಂಜುಳಾ ಪ್ರಸನ್ನ ಕುಮಾರ್ ಕಂಕಣ ಬದ್ಧರಾಗಿದ್ದಾರೆ ಎಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಚಳ್ಳಕೆರೆ ನಗರದ ನಗರಸಭೆ ಸಭಾಂಗಣದಲ್ಲಿ ನೂತನವಾಗಿ ಅಧ್ಯಕ್ಷರಾದ ಮಂಜುಳಾ ಪ್ರಸನ್ನ ಕುಮಾರ್ ಅವರಿಗೆ ಶುಭಾಶಯಗಳು ತಿಳಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿನಿಧಿಸುತ್ತಿರುವ ಅಧ್ಯಕ್ಷರುಗಳು ನಗರಸಭೆಯನ್ನು ಸರ್ವಾಂಗಣ ಅಭಿವೃದ್ದಿಗೆ ಕೊಂಡುಯ್ಯುಲು ಬದ್ಧರಾಗಿದ್ದಾರೆ ಇನ್ನು ನಗರದ 31 ವಾರ್ಡ್ ಗಳ ಅಭಿವೃದ್ಧಿಗೆ ಸದಾ ಶ್ರಮಿಸುವ ಮೂಲಕ ಸದಸ್ಯರುಗಳು ತಮ್ಮ ವ್ಯಾಪ್ತಿಯ ಕೆಲಸಗಳನ್ನು ನಿರ್ವಹಿಸುತ್ತಾರೆ, ಇನ್ನು ನೂತನವಾಗಿ ಆಯ್ಕೆಯಾದಂತಹ ಮಂಜುಳಾ ಆರ್ ಪ್ರಸನ್ನ ಕುಮಾರ್ ರವರಿಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡುತ್ತಾ ನಗರಸಭೆ ಅಧಿಕಾರದಲ್ಲಿ ಇರುವಷ್ಟು ದಿನಗಳ ಕಾಲ ಉತ್ತಮವಾಗಿ ಅಭಿವೃದ್ಧಿಪಥದತ್ತ ಕೊಂಡಯ್ಯಬೇಕು ಎಲ್ಲಾ ಪಕ್ಷದವರೊಂದಿಗೆ ಹಾಗೂ ಸಾರ್ವಜನಿಕರ ಸಮಸ್ಯೆ ನಿವಾರಣಾತ್ಮಕ ಮೂಲಕ ಪರಿಹಾರವನ್ನು ಕಂಡುಕೊಳ್ಳುವ ಮೂಲಕ ಅಭಿವೃದ್ಧಿಯತ್ತ ಸಾಗಬೇಕು ಎಂದರು.
ಇನ್ನು ನೂತನ ಅಧ್ಯಕ್ಷ ರಾಗಲು ಚಿತ್ರದುರ್ಗದ ವಿಧಾನಸಭಾ ಕ್ಷೇತ್ರದ ಕೆಸಿ ವೀರೇಂದ್ರ ಪಪ್ಪಿ ಅವರ ಸಹಕಾರ ತುಂಬಾ ಇದೆ ಆದ್ದರಿಂದ ಶಾಸಕರು, ರಾಜಕಾರಣಿಗಳು, ಸದಸ್ಯರಗಳ ಸಹಕಾರದಿಂದ ಇಂದು ಅವಿರೋಧವಾಗಿ ಆಯ್ಕೆಯಾದಂತಹ ಮಂಜುಳಾ ಪ್ರಸನ್ನ ಕುಮಾರ್ ಅವರು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ನೂತನವಾಗಿ ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾದ ಮಂಜುಳಾ ಪ್ರಸನ್ನ ಕುಮಾರ್ ಅವರು ಮಾಧ್ಯಮದೊಟ್ಟಿಗೆ ಮಾತನಾಡಿದ ಅವರು ಅಧಿಕಾರದಲ್ಲಿರುವಷ್ಟು ದಿನಗಳ ಕಾಲ ಸಾರ್ವಜನಿಕರ, ಅಸಹಾಯಕರ, ಧ್ವನಿಯಾಗುವುದರ ಮೂಲಕ ಅವರಿಗೆ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುವ ಮೂಲಕ ನಗರಸಭೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಇನ್ನು ನಗರಸಭೆ ಅಧ್ಯಕ್ಷರಾಗಲು ಸಹಕಾರ ನೀಡಿದಂತಹ ಸದಸ್ಯರುಗಳಿಗೆ ಕೃತಜ್ಞತೆಗಳನ್ನು ತಿಳಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ನಗರಸಭೆಯ ಉಪಾಧ್ಯಕ್ಷರಾದ ಸುಮಾ ಭರಮಯ್ಯ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಟಿ. ಮಲ್ಲಿಕಾರ್ಜುನ, ಸದಸ್ಯ ಎಂಜೆ.ರಾಘವೇಂದ್ರ, ಕವಿತಾ ಸುಜಾತ, ಜೈ ತುಂಬಿ ಮಾಲಿಕ್ ಸಾಬ್, ಪ್ರಶಾಂತ್ ಕುಮಾರ್, ನೇತಾಜಿ ಪ್ರಸನ್ನ, ಹಳೆನಗರದ ವೀರಭದ್ರಪ್ಪ,ಮುಖಂಡರಾದ
ಆರ್ ಪ್ರಸನ್ನ ಕುಮಾರ್ , ಬಿ.ಪರಿದ್ ಖಾನ್, ಇನ್ನಿತರ ಹಲವು ಸದಸ್ಯರುಗಳು ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಜಿಲ್ಲಾ ಉಪ ವಿಭಾಗ ಅಧಿಕಾರಿ ಮಹಿಬೂಬ್ ಜೀಲಾನ್ ಹಾಗೂ ತಾಶಿಲ್ದಾರ್ ರೆಹನ್ ಪಾಷಾ ಇತರ ಸಿಬ್ಬಂದಿ ವರ್ಗ ಹಾಜರಿದ್ದರು.
ತೆರೆದ ವಾಹನದಲ್ಲಿ ಮೆರವಣಿಗೆ :
ಹೌದು ಕಳೆದ ಮೂರು ಬಾರಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಶಾಸಕ ಟಿ ರಘುಮೂರ್ತಿ ನೇತೃತ್ವದಲ್ಲಿ ಅಂದಿನಿಂದ ಇಂದಿನವರೆಗೂ ಚಳ್ಳಕೆರೆ ನಗರಸಭೆ ಕಾಂಗ್ರೆಸ್ ಪಾಲಿಗೆ ದಕ್ಕಿದೆ ಇನ್ನು ಕಾಂಗ್ರೆಸ್ಸಿನ ವತಿಯಿಂದ ಪ್ರತಿನಿಧಿಸುವಂತಹ ಸದಸ್ಯರುಗಳು ಅಧ್ಯಕ್ಷರುಗಳು ಎಲ್ಲಾ ಪಕ್ಷಕ್ಕೂ ಸರ್ವ ಸಮಾನತೆಯನ್ನು ನೀಡುವುದರ ಮೂಲಕ ಸರ್ವಾಂಗಿಣಾ ಅಭಿವೃದ್ಧಿಗೆ ಕೊಂಡುಯ್ಯುವಲ್ಲಿ ಶಾಸಕ ಟಿ ರಘುಮೂರ್ತಿ ಮೇಲುಗೈ ಸಾಧಿಸಿದ್ದಾರೆ , ಅದರಂತೆ ನೂತನವಾಗಿ ಆಯ್ಕೆಯಾದ ಚಳ್ಳಕೆರೆ ನಗರಸಭೆ ಅಧ್ಯಕ್ಷ ಮಂಜುಳಾ ಪ್ರಸನ್ನ ಕುಮಾರ್ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡುತ್ತಾ ಹೂಮಾಲೆಗಳನ್ನು ಅರ್ಪಿಸುತ್ತಾ , ಪಟಾಕಿ ಸಿಡಿಸುತ್ತಾ, ಅದ್ದೂರಿಯಾಗಿ ಮೆರವಣಿಗೆ ಸಾಗಿ ಬಂದಿತ್ತು ಇನ್ನು ವಿಶ್ವಕರ್ಮ ಸಮಾಜದ ಎಲ್ಲಾ ತಾಲೂಕಿನ ಸಮುದಾಯದ ಎಲ್ಲಾ ಮುಖಂಡರುಗಳು ಮಹಿಳೆಯರು ಹಬ್ಬದ ರೀತಿಯಲ್ಲಿ ತಮ್ಮ ಸಮಾಜಕ್ಕೆ ದಕ್ಕಿದ ಅಧ್ಯಕ್ಷ ಸ್ಥಾನವನ್ನು ಸಿಹಿ ಹಂಚುವುದರ ಮೂಲಕ ಸಂಭ್ರಮಿಸಿದ್ದಾರೆ.

